ಸಿನಿಮಾ ಸುದ್ದಿ

ಶಿವಣ್ಣನ ಮುಂದಿನ ಚಿತ್ರದ ಟೈಟಲ್ 'ರಾಯಲ್ ಇನ್ ಫೀಲ್ಡ್' !

ನಟ ಶಿವರಾಜ್ ಕುಮಾರ್ ನಿರ್ದೇಶಕ ಎಪಿ ಅರ್ಜುನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಶಿವಣ್ಣ ನಟಿಸುತ್ತಿರುವ ಈ ಸಿನಿಮಾಗೆ ರಾಯಲ್ ಇನ್ ಫೀಲ್ಡ್ ಎಂದು ಟೈಟಲ್ ಇಡಲಾಗಿದೆ, ...

ಶಿವಣ್ಣನ ಮುಂದಿನ ಚಿತ್ರದ ಟೈಟಲ್ 'ರಾಯಲ್ ಇನ್ ಫೀಲ್ಡ್' !
ಶಿವರಾಜ್ ಕುಮಾರ್
Published On :
ನಟ ಶಿವರಾಜ್ ಕುಮಾರ್ ನಿರ್ದೇಶಕ ಎಪಿ ಅರ್ಜುನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಶಿವಣ್ಣ ನಟಿಸುತ್ತಿರುವ ಈ ಸಿನಿಮಾಗೆ ರಾಯಲ್ ಇನ್ ಫೀಲ್ಡ್ ಎಂದು ಟೈಟಲ್ ಇಡಲಾಗಿದೆ, 
ರಾಯಲ್ ಎನ್ ಫೀಲ್ಡ್ ಬೈಕ್ ಬ್ರ್ಯಾಂಡ್ ಗೆ ಟ್ವಿಸ್ಟ್ ನೀಡಿ ರಾಯಲ್ ಇನ್ ಫೀಲ್ಡ್ ಎಂದು ಹೆಸರಿಡಲಾಗಿದೆ, ಈ ಸಿನಿಮಾ ಬಗ್ಗೆ ಅಧಿಕೃತ ಪ್ರಕಟಣೆ ಮಾತ್ರ ಹೊರಬೀಳಬೇಕಿದೆ, ಜುಲೈ ತಿಂಗಳಲ್ಲಿ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ, 
ಸದ್ಯ ಎಪಿ ಅರ್ಜುನ್ ಕಿಸ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ, ಜೊತೆಗೆ ರಾಯಲ್ ಇನ್ ಫೀಲ್ಡ್ ಗಾಗಿ ಚಿತ್ರಕಥೆ ಸಿದ್ದ ಪಡಿಸುತ್ತಿದ್ದಾರೆ, ಶಿವಣ್ಣನ ಪಾತ್ರದ ಬಗ್ಗೆ ಚಿತ್ರ ತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ, 
ಚಿತ್ರದಲ್ಲಿ ಶಿವಣ್ಣ ಮೂರು ವಿಶೇಷ ಗೆಟಪ್ ನಲ್ಲಿ ಕಾಣಸಿಕೊಳ್ಳಲಿದ್ದಾರೆ, ಅಂದರೆ ಮೂರು ವಿಭಿನ್ನ ವಯೋಮಾನದ ಪಾತ್ರ ಇದಾಗಿದೆ, 35,50 ಮತ್ತು 70ರ ವಯಸ್ಸಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದೊಂದು ಆ್ಯಕ್ಷನ್ ಸಿನಿಮಾವಾಗಿದ್ದು,  ಓಮ್ ಸಿನಿಮಾದಂತ ಕಥೆ ತರಲು ನಿರ್ದೇಶಕರು ತಯಾರಿಗಿದ್ದಾರೆ, ಪ್ರೀತಿ, ರೌಡಿಸಂ ಹಾಗೂ ಭಾವನೆಗಳು ಪ್ರಮುಖ ಕಥಾವಸ್ತುವಾಗಿದೆ,

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.