ಬೆಲ್ ಬಾಟಮ್ ನಲ್ಲಿ ರೆಟ್ರೊ ನೆನಪು ಹೊತ್ತು ತರಲಿದ್ದಾರೆ ಹರಿಪ್ರಿಯಾ
ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಬೆಲ್ ಬಾಟಮ್ ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಲಿದೆ. ಎಂಬತ್ತರ ದಶಕದ ಕಥೆಯನ್ನು...

Published On :
ಬೆಂಗಳೂರು: ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಬೆಲ್ ಬಾಟಮ್ ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಲಿದೆ. ಎಂಬತ್ತರ ದಶಕದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದಾರೆ ನಿರ್ದೇಶಕರು. ಇಡೀ ಸಿನಿಮಾ ಆ ಕಾಲಘಟ್ಟದಲ್ಲೇ ತೆರೆದುಕೊಳ್ಳುವುದು ವಿಶೇಷ.
ಕಾಸ್ಟ್ಯೂಮ್, ಹಿನ್ನೆಲೆ, ಬಳಸಿದ ಪರಿಕರ ಎಲ್ಲವೂ 80ರ ಕಾಲದವು. ಈಗಾಗಲೇ ರಿಲೀಸ್ ಆಗಿರುವ ಫೋಟೋ ಮತ್ತು ಪೋಸ್ಟರ್ ಕೂಡ ಅದೇ ಕಾಲಘಟ್ಟವನ್ನು ಪ್ರತಿನಿಧಿಸುತ್ತವೆ.
ಬೆಲ್ ಬಾಟಮ್ ಸಿನಿಮಾ ಫಿಲ್ಮ್ ಟೀಸರ್ ಮತ್ತು ಅದರ ಒಂದು ಹಾಡು ಬಹಳ ಪ್ರಸಿದ್ದವಾಗಿದ್ದು, ಸಿನಿ ಪ್ರಿಯರ ಹುಬ್ಬೇರುವಂತೆ ಮಾಡಿದೆ. 80 ರ ದಶಕದ ಕಥೆಯ ಹಿಂದಿನ ಮಾಸ್ಟರ್ ಮೈಂಡ್ ದಯಾನಂದ ಟಿ.ಕೆ ಅವರದ್ದು.
ನಿರ್ದೇಶಕ ರಿಷಭ್ ಶೆಟ್ಟಿ ಈ ಚಿತ್ರದ ನಾಯಕನಾದರೆ, ಹರಿಪ್ರಿಯಾ ನಾಯಕಿ. ಅಚ್ಯುತ್ ಕುಮಾರ್, ಪಿ.ಡಿ.ಸತೀಶ್ ಸೇರಿದಂತೆ ಅನುಭವಿ ಕಲಾವಿದರ ತಂಡವೇ ಸಿನಿಮಾದಲ್ಲಿದೆ. ಅಟ್ಲಾಸ್ ಸೈಕಲ್, ಕರ್ನಾಟಕ ರಾಜ್ಯ ಲಾಟರಿ, ಇಮಾಮಿ ಪೌಡರ್, ಪ್ರಾಮಿಸ್ ಟೂತ್ ಪೇಸ್ಟ್, ಎಚ್ ಎಂಟಿ ವಾಚ್, 30 ಬ್ರಾಂಡ್ ಬೀಡಿಗಳು, ಜಾಹೀರಾತುಗಲಿವೆ,
ಸಿನಿಮಾದಲ್ಲಿ ರಿಷಬ್ ಶೆಟ್ಟಿ ಡಿಟೆಕ್ಟಿವ್ ದಿವಾಕರ್ ಪಾತ್ರದಲ್ಲಿ ನಟಿಸಿದ್ದಾರೆ, ಈ ಜಾಹೀರಾತುಗಳು 80 ದಶಕವನ್ನು ನೆನಪಿಸುತ್ತವೆ ಇದರ ಎಲ್ಲಾ ಕ್ರೆಡಿಟ್ ದಯಾನಂದ ಅವರಿಗೆ ಸಲ್ಲಬೇಕು ಎಂದು ಹೇಳಿದ್ದಾರೆ. ಈ ಜಾಹೀರಾತುಗಳಿಗಲೂ ಸಿನಿಮಾ ಕಥೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ, ಬೆಲ್ ಬಾಟಮ್ ಸಿನಿಮಾ ಜನವರಿ ತಿಂಗಳ ಮದ್ಯದಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


