ಸಿನಿಮಾ ಸುದ್ದಿ

ಕಣ್ಸನ್ನೆ ಮೂಲಕ ಕನ್ನಡಿಗರನ್ನು ಸೆಳೆಯಲು ಬರುತ್ತಿದ್ದಾರೆ ನಟಿ ಪ್ರಿಯ ವಾರಿಯರ್

ಕೇವಲ ಟೀಸರ್ ಮೂಲಕವೇ ಕಳೆದ ವರ್ಷ ದೇಶಾದ್ಯಂತ ಸದ್ದು ಮಾಡಿದ್ದ ಚಿತ್ರ ಮಲಯಾಳಂನ ‘ಒರು ಅಡಾರ್ ಲವ್’ ಟೀಸರ್​..

ಕಣ್ಸನ್ನೆ ಮೂಲಕ ಕನ್ನಡಿಗರನ್ನು ಸೆಳೆಯಲು ಬರುತ್ತಿದ್ದಾರೆ ನಟಿ ಪ್ರಿಯ ವಾರಿಯರ್
ಪ್ರಿಯಾ ಪ್ರಕಾಶ್ ವಾರಿಯರ್
Published On :
ಬೆಂಗಳೂರು: ಕೇವಲ  ಟೀಸರ್ ಮೂಲಕವೇ ಕಳೆದ ವರ್ಷ ದೇಶಾದ್ಯಂತ ಸದ್ದು ಮಾಡಿದ್ದ ಚಿತ್ರ ಮಲಯಾಳಂನ ‘ಒರು ಅಡಾರ್ ಲವ್’ ಟೀಸರ್​ನಲ್ಲಿ ಚಿತ್ರದ ನಾಯಕಿ ಪ್ರಿಯಾ ಪ್ರಕಾಶ್ ವಾರಿಯರ್ ಅವರ ಕಣ್ಸನ್ನೆ ದೃಶ್ಯ ವೈರಲ್ ಆಗಿತ್ತು.  ಮಲಯಾಳಂನಲ್ಲಿ ಸಿದ್ಧವಾಗಿರುವ ಈ ಚಿತ್ರ ಕನ್ನಡಕ್ಕೆ ‘ಕಿರಿಕ್ ಲವ್ ಸ್ಟೋರಿ’ ಹೆಸರಿನಲ್ಲಿ ಡಬ್ ಆಗಲು ಸಜ್ಜಾಗಿದೆ!
ಕನ್ನಡಕ್ಕೆ ಪರಭಾಷೆಯ ಸಿನಿಮಾಗಳು ಡಬ್ ಆಗುತ್ತಿರುವುದು ಇದೇ ಮೊದಲೇನಲ್ಲ. ಡಬ್ಬಿಂಗ್​ಗೆ ಕರ್ನಾಟಕದಲ್ಲಿ ವಿರೋಧವಿದ್ದ ಕಾರಣ, ಜಾಸ್ತಿ ಪ್ರಮಾಣದಲ್ಲಿ ಸಿನಿಮಾಗಳು ತೆರೆಕಂಡಿಲ್ಲ. ಇದೀಗ ದೊಡ್ಡ ದೊಡ್ಡ ಸಿನಿಮಾಗಳೇ ಕನ್ನಡಕ್ಕೆ ಡಬ್ ಆಗುವುದಕ್ಕೆ ಸಜ್ಜಾಗಿವೆ. ‘ಸೂಪರ್ ಸ್ಟಾರ್’ ರಜಿನಿಕಾಂತ್ ನಟನೆಯ ‘ಪೆಟ್ಟಾ’, ನಂದಮೂರಿ ಬಾಲಕೃಷ್ಣ ಅಭಿನಯದ ‘ಎನ್​ಟಿಆರ್; ಕಥಾನಾಯಕುಡು’ ಹಾಗೂ ರಾಮ್ ಚರಣ್ ತೇಜ ನಾಯಕತ್ವದ ‘ವಿನಯ ವಿಧೇಯ ರಾಮ’ ಚಿತ್ರಗಳು ಈ ವರ್ಷದ ಸಂಕ್ರಾಂತಿ ಹಬ್ಬಕ್ಕೆ ಕನ್ನಡದಲ್ಲಿ ತೆರೆಕಾಣಲು ಪ್ರಯತ್ನ ನಡೆಸಿವೆ.
 ಇದುವರೆಗೂ ಬರೀ ತೆಲುಗು-ತಮಿಳು ಸಿನಿಮಾಗಳು ಕನ್ನಡಕ್ಕೆ ಡಬ್ ಆಗುವುದು ಸಾಮಾನ್ಯವಾಗಿತ್ತು. ಆದರೀಗ ಮಲಯಾಳಂನ ‘ಒರು ಅಡಾರ್ ಲವ್’ ಕನ್ನಡಕ್ಕೆ ಡಬ್ ಆಗುತ್ತಿರುವುದು ವಿಶೇಷವಾಗಿದೆ. ‘ಒರು ಅಡಾರ್ ಲವ್’ಗೆ ಒಮರ್ ಲುಲು ನಿರ್ದೇಶನ ಮಾಡಿದ್ದು, ಫೆ.14ರ ಪ್ರೇಮಿಗಳ ದಿನದಂದು ಚಿತ್ರವನ್ನು ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. 
ಸಿನಿಮಾ ಕಥೆ ಎಲ್ಲಾ ಭಾಷೆಯ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ.  ಹೀಗಾಗಿ ಕನ್ನಡದ್ಲಿ ಡಬ್ ಮಾಡಲು ನಿರ್ಧರಿಸಿದ್ದಾಗಿ ನಿರ್ದೇಶಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.