ಸಿನಿಮಾ ಸುದ್ದಿ

ಬೆಂಗಳೂರು: ಕೆಜಿಎಫ್ ಪ್ರದರ್ಶನದೊಂದಿಗೆ ಇತಿಹಾಸ ಸೇರಿದ 'ರೆಕ್ಸ್' ಚಿತ್ರಮಂದಿರ ಇನ್ನು ನೆನಪು ಮಾತ್ರ!

ಬ್ರಿಗೇಡ್ ರಸ್ತೆಯಲ್ಲಿದ್ದ ಏಕೈಕ ಚಿತ್ರಮಂದಿರ ರೆಕ್ಸ್ ಇನ್ನಿ ನೆನಪು ಮಾತ್ರ. ಏಳು ದಶಕಗಳಷ್ಟು ಹಳೆಯದಾದ ಈ ಚಿತ್ರಮಂದಿರ ಹೊಸ ವರ್ಷದ ಮೊದಲ ದಿನದಿಂದಲೇ ಬಾಗಿಲು ಮುಚ್ಚಿದೆ.

ಬೆಂಗಳೂರು: ಕೆಜಿಎಫ್ ಪ್ರದರ್ಶನದೊಂದಿಗೆ ಇತಿಹಾಸ ಸೇರಿದ 'ರೆಕ್ಸ್' ಚಿತ್ರಮಂದಿರ ಇನ್ನು ನೆನಪು ಮಾತ್ರ!
ಕೆಜಿಎಫ್ ಪ್ರದರ್ಶನದೊಂದಿಗೆ ಇತಿಹಾಸ ಸೇರಿದ ರೆಕ್ಸ್ ಚಿತ್ರಮಂದಿರ ಇನ್ನು ನೆನಪು ಮಾತ್ರ!
Published On :
ಬೆಂಗಳೂರು: ಬ್ರಿಗೇಡ್ ರಸ್ತೆಯಲ್ಲಿದ್ದ ಏಕೈಕ ಚಿತ್ರಮಂದಿರ ರೆಕ್ಸ್ ಇನ್ನಿ ನೆನಪು ಮಾತ್ರ. ಏಳು ದಶಕಗಳಷ್ಟು ಹಳೆಯದಾದ ಈ ಚಿತ್ರಮಂದಿರ ಹೊಸ ವರ್ಷದ ಮೊದಲ ದಿನದಿಂದಲೇ ಬಾಗಿಲು ಮುಚ್ಚಿದೆ.
ಬೆಂಗಳೂರು ಹೃದಯಭಾಗದಲ್ಲಿದ್ದ ಮೆಜೆಸ್ಟಿಕ್, ಕಪಾಲಿ, ಸಾಗರ್, ಕಲ್ಪನಾ, ತ್ರಿಭುವನ್ ಸೇರಿ ಹಲವು ಚಿತ್ರಮಂದಿರಗಳು ಇದಾಗಲೇ ಬಂದ್ ಆಗಿದ್ದು ಈಗ ಈ ಚಿತ್ರಮಂದಿರಗಳ ಪಟ್ಟಿಗೆ ರೆಕ್ಸ್ ಕೂಡ ಸೇರಿದೆ.
ಜಗತ್ತನ್ನೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಪ್ರದರ್ಶನದೊಂದಿಗೆ ರೆಕ್ಸ್ ನೇಪಥ್ಯಕ್ಕೆ ಸರಿಯಿತು. ನಿನ್ನೆ (ಡಿಸೆಂಬರ್ 31) ರಾತ್ರಿ ಹತ್ತರ ಪ್ರದರ್ಶನವೇ ಚಿತ್ರಮಂದಿರದ ಕಡೆಯ ಆಟವಾಗಿತ್ತು.
ಮುಂದಿನ ದಿನಗಳಲ್ಲಿ ಚಿತ್ರಮಂದಿರದ ಜಾಗದಲ್ಲಿ ಬೃಹತ್ ಮಾಲ್ ತಲೆ ಎತ್ತಲಿದ್ದು ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳು ಇಲ್ಲಿ ಆರಂಭಗೊಳ್ಳಲಿದೆ.ಬ್ರಿಗೇಡ್ ಗ್ರೂಪ್ ನ ಜಂಟಿ ಸಹಭಾಗಿತ್ವದಲ್ಲಿ ಈ ಮಲ್ಟಿಫ್ಲೆಕ್ಸ್ ಗಳೂ ಕಾರ್ಯಾಚರಿಸಲಿದೆ.
ಸಿನಿಮಾ ವೀಕ್ಷಣೆಗಾಗಿ ಚಿತ್ರಮಂದಿರಕ್ಕೆ ಆಗಮಿಸುವ ಪ್ರೇಕ್ಷಕರಿಂದ ರೆಕ್ಸ್ ಬಾಗಿಲು ಮುಚ್ಚುವ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. "1970ರ  ದಶಕದಲ್ಲಿ ರೆಕ್ಸ್ ಸೇರಿ ನಗರದ ಕೆಲವೇ ಚಿತ್ರಮಂದಿರಗಳಲ್ಲಿ ಹಾಲಿವುಡ್ ಚಿತ್ರಗಳು ತೆರೆಕಾಣುತ್ತಿದ್ದವು.ನಾನು ಕಾಲೇಜು ಓದುವಾಗೆಲ್ಲಾ ಇಲ್ಲಿ ಬಂದು ಚಿತ್ರ ವೀಕ್ಷಿಸಿದ್ದೆ, ಈಗ ಇದೇ ಸ್ಥಳದಲ್ಲಿ ಮಲ್ಟಿಫ್ಲೆಕ್ಸ್, ಮಾಲ್ ನಿರ್ಮಾಣವಾಗುತ್ತಿರುವುದು ಬೇಸರ ತಂದಿದೆ" ಸಿನಿ ಪ್ರೇಕ್ಷಕರಾದ ಸ್ಥಳೀಯ ನಿವಾಸಿ ಕಾಳಪ್ಪ ಹೇಳಿದ್ದಾರೆ.
ರೆಕ್ಸ್ ಇತಿಹಾಸ
1940ರಲ್ಲಿ ರೆಕ್ಸ್​​ ಚಿತ್ರಮಂದಿರ ಆರಂಭಗೊಂಡಿತ್ತು. ಕೆವಿ ಪೌಲ್ ಈ ಚಿತ್ರಮಂದಿರದ ಮಾಲೀಕರಾಗಿದ್ದರು.ಕ್ರಮೇಣ ಈ ಚಿತ್ರಮಂದಿರ ಪಾಲ್ ರೆಕ್ಸ್ ಎಂದೇ ಖ್ಯಾತಿ ಪಡೆಯಿತು.ಆದರೆ ಮಾಲೀಕರು ಹಣಕಾಸಿನ ಮುಗ್ಗಟ್ಟಿಗೆ ಸಿಕ್ಕ ಕಾರಣ ಚಿತ್ರಮಂದಿರವನ್ನು ಅಡಮಾನವಿಟ್ಟರು.
1961ರಲ್ಲಿ ಚಿತ್ರಮಂದಿರವನ್ನು ಹರಾಜು ಹಾಕಲಾಗಿತ್ತು. ಆಗ ನಂದಲಾಲ್ ಕಪೂರ್ ಎನ್ನುವಾತ ಎಂಟು ಲಕ್ಷ ರು.ಗೆ ಚಿತ್ರಮಂದಿರ ಖರೀದಿಸಿದ್ದರು.1962ರಲ್ಲಿ ಈ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿದ್ದ "ಸ್ಲೀಪಿಂಗ್ ಬ್ಯೂಟಿ" ಚಿತ್ರಕ್ಕೆ ಅಪಾರ ಜನಮೆಚ್ಚುಗೆ ಬಂದಿತ್ತು. ಹಾಲಿವುಡ್​, ಬಾಲಿವುಡ್​, ತೆಲುಗು, ತಮಿಳು, ಕನ್ನಡ ಭಾಷೆಯ ಚಿತ್ರಗಳು ಪ್ರದರ್ಶನ ಕಾಣುತ್ತಿದ್ದ ಈ ಚಿತ್ರಮಂದಿರದ ಕಟ್ಟಡ ಬ್ರಿಟಿಷರ ಕಾಲದ್ದಾಗಿದ್ದು ಮಾಲೀಕರು ಇದನ್ನು ಕೆಡವುವ ನಿರ್ಧಾರ ತಳೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.