ಸಿನಿಮಾ ಸುದ್ದಿ

ನನ್ನ ವಿಡಿಯೋ ನೋಡಿ ಒಂದು ರಾತ್ರಿಗೆ 1 ಕೋಟಿ ರೂ. ಆಫರ್ ನೀಡುತ್ತಿದ್ದಾರೆ: ನಟಿ ಸಾಕ್ಷಿ ಚೌದರಿ

ನನ್ನ ವಿಡಿಯೋ ಮತ್ತು ಫೋಟೋಗಳನ್ನು ನೋಡಿ ಒಂದು ರಾತ್ರಿಗೆ 1 ಕೋಟಿ ರೂ ಆಫರ್ ನೀಡುತ್ತಿದ್ದಾರೆ ಎಂದು ನಟಿ ಸಾಕ್ಷಿ ಚೌದರಿ ಹೇಳಿದ್ದಾರೆ.

ನನ್ನ ವಿಡಿಯೋ ನೋಡಿ ಒಂದು ರಾತ್ರಿಗೆ 1 ಕೋಟಿ ರೂ. ಆಫರ್ ನೀಡುತ್ತಿದ್ದಾರೆ: ನಟಿ ಸಾಕ್ಷಿ ಚೌದರಿ
ಸಂಗ್ರಹ ಚಿತ್ರ
Published On :
ಹೈದರಾಬಾದ್: ನನ್ನ ವಿಡಿಯೋ ಮತ್ತು ಫೋಟೋಗಳನ್ನು ನೋಡಿ ಒಂದು ರಾತ್ರಿಗೆ 1 ಕೋಟಿ ರೂ ಆಫರ್ ನೀಡುತ್ತಿದ್ದಾರೆ ಎಂದು ನಟಿ ಸಾಕ್ಷಿ ಚೌದರಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಾರೆಯರು ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ನಟಿ ಹಾಕಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕೆ ಮೈಮಾಟಕ್ಕೆ ಸಾಕಷ್ಟು ಮಂದಿ ಬೆರಗಾಗಿದ್ದಾರೆ. ಅಂತೆಯೇ ಓರ್ವ ಪುಂಡ ಆಕೆಗೆ ಒಂದು ರಾತ್ರಿಗೆ 1 ಕೋಟಿ ರೂ ಆಫರ್ ಕೂಡ ನೀಡಿದ್ದಾನಂತೆ. ಈ ಬಗ್ಗೆ ಸ್ವತಃ ನಟಿಯೇ ತನ್ನ ಟ್ವಿಟರ್ ಖಾತೆಯಲ್ಲಿ ತಮಗಾದ ಮುಜುಗರವನ್ನು ಹೇಳಿಕೊಂಡಿದ್ದಾರೆ.
Story image
ಇಷ್ಟಕ್ಕೂ ಆ ನಟಿ ಯಾರು ಎಂಬ ಪ್ರಶ್ನೆಗೆ ಉತ್ತರ, ದಕ್ಷಿಣ ಭಾರತದ ಉದಯೋನ್ಮುಖ ನಟಿ ಸಾಕ್ಷಿ ಚೌದರಿ.. ಹೌದು ಕನ್ನಡದಲ್ಲಿ ಸುವರ್ಣ ಸುಂದರಿ ಎಂಬ ಚಿತ್ರದಲ್ಲಿ ನಟಿಸಿರುವ ನಟಿ ಸಾಕ್ಷಿ ಚೌದರಿ ತಮಗೆ ಒಂದು ರಾತ್ರಿಗೆ 1 ಕೋಟಿ ರೂ ಆಫರ್ ನೀಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಟ್ವಿಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸಾಕ್ಷಿ, 'ನನ್ನ ವಿಡಿಯೋ ಮತ್ತು ಫೋಟೋಗಳನ್ನ ನೋಡಿದ ಕೆಲವು ಜನರು ಹುಚ್ಚರಾಗಿದ್ದಾರೆ. ನನಗೆ ಒಂದು ರಾತ್ರಿಗೆ ಒಂದು ಕೋಟಿ ಕೊಡುತ್ತೇನೆ ಎಂದು ಇನ್ ಬಾಕ್ಸ್ ಮಲ್ಲಿ ಮೆಸೇಜ್ ಮಾಡುತ್ತಿದ್ದಾರೆ. ಆದರೆ ಅವರೆಲ್ಲರೂ ಮೂರ್ಖರು. ಯಾಕೆಂದರೆ ನಾನು ಮಾರಾಟಕ್ಕಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೇ ತಾವು ಅಭಿನಯಿಸಿರುವ ಸಿನಿಮಾವನ್ನು ನೋಡಿ ಎಂದು ಹೇಳಿದ್ದಾರೆ. ಇನ್ನು ಸಾಕ್ಷಿ ಅವರ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.
ಸಾಕ್ಷಿ ಚೌಧರಿ 2013ರಲ್ಲಿ ‘ಪೋಟುಗಾಡು’ ಸಿನಿಮಾದ ಮೂಲಕ ಟಾಲಿವುಡ್ ಇಂಡಸ್ಟ್ರಿಗೆ ಕಾಲಿಟ್ಟದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.