'ಕಬ್ಜ' ಜೊತೆ ಹೊಸವರ್ಷ ಆರಂಭಿಸಲಿರುವ ರಿಯಲ್ ಸ್ಟಾರ್ ಉಪೇಂದ್ರ
ಕಬ್ಜ ಜೊತೆಗ 2020ರ ಹೊಸ ವರ್ಷವನ್ನು ಆಚರಿಸಲು ರಿಯಲ್ ಸ್ಟಾರ್ ಉಪೇಂದ್ರ ಸಿದ್ಧತೆ ನಡೆಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿ ಜನವರಿ 2ರಂದ ಆರಂಭಗೊಳ್ಳಲಿದೆ.

ಕಬ್ಜ ಜೊತೆಗೆ 2020ರ ಹೊಸ ವರ್ಷವನ್ನು ಆಚರಿಸಲು ರಿಯಲ್ ಸ್ಟಾರ್ ಉಪೇಂದ್ರ ಸಿದ್ಧತೆ ನಡೆಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿ ಜನವರಿ 2ರಂದ ಆರಂಭಗೊಳ್ಳಲಿದೆ.
ಚಿತ್ರದ ತಂಡ ಚಿತ್ರೀಕರಣಕ್ಕೆ ರಾಮೋಜಿ ಫಿಲ್ಮ್ ಸಿಟಿಯನ್ನು ಆಯ್ಕೆ ಮಾಡಿದ್ದು, ಚಿತ್ರದ ಮೂರ್ತ ಜನವರಿ 2 ರಂದು ನೆರವೇರಲಿದೆ.
ಚಿತ್ರೀಕರಣವನ್ನು 40 ದಿನಗಳೆಂದು ನಿರ್ಧರಿಸಲಾಗಿದೆ. ಹೈದರಬಾದ್ ಹಾಗೂ ಬೆಂಗಳೂರಿನಲ್ಲಿ ಹಾಕಲಾಗಿರುವ ಸೆಟ್ ನಲ್ಲಿಯೇ ಚಿತ್ರೀಕರಣ ನಡೆಯಲಿದೆ. 1947ರಿಂದ 1984ರವರೆಗೆ ನಡೆಯುವ ರೌಡಿಸಂ ಕಥೆ ಇರುವುದರಿಂದ ಈ ಚಿತ್ರದಲ್ಲಿ ಆ ಕಾಲದ ಚಿತ್ರಣ ಮೂಡಿಸಬೇಕಾದರೆ ಸೆಟ್ ಮೊರೆ ಹೋಗಬೇಕಾಗಿರುವುದು ಅನಿವಾರ್ಯವಾಗಿದೆ. ಹೀಗಾಗಿ ಅರ್ಧದಷ್ಟು ಸಿನಿಮಾಮ ಹೈದರಾಬಾದ್'ನ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ನಡೆಯಲಿದೆ. ಇನ್ನುಳಿದ ಚಿತ್ರೀಕರಣ ಬೆಂಗಳೂರಿನ ಮಿನರ್ವ ಮಿಲ್ ಹಾಗೂ ದೇವನಹಳ್ಳಿ ಬಳಿ ಹಾಕಲಾಗುವ ಸೆಟ್ ನಲ್ಲಿ ನಡೆಯಲಿದೆ ಎಂದು ನಿರ್ದೇಶಕ ಆರ್.ಚಂದ್ರು ಹೇಳಿದ್ದಾರೆ.
ಫೈಟಿಂಗ್ ದೃಶ್ಯಾವಳಿಗಳು ಅವಿನಾಶ್ ಜೊತೆಗೆ ಮೂಡಿಬರಲಿದೆ. ಇನ್ನುಳಿದ ಕಲಾವಿದರು ಚಿತ್ರೀಕರಣ ಆರಂಭವಾದ ಬಳಿಕ ಜೊತೆಗೂಡಲಿದ್ದಾರೆ. ಚಿತ್ರವು ಒಟ್ಟು 7 ಭಾಷೆಘಳಲ್ಲಿ ಮೂಡಬರುತ್ತಿದ್ದು, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳ, ಮರಾಠಿ, ಬಂಗಾಳಿ ಭಾಷೆಗಳಲ್ಲಿ ಕಬ್ಜ ತೆರೆ ಕಾಣಲಿದೆ. ಅದರಲ್ಲೂ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನೇರ ನಿರ್ಮಾಣವಾಗಲಿದ್ದು, ಉಳಿದ ಭಾಷೆಗಳಲ್ಲಿ ಡಬ್ ಆಗಿ ತೆರೆ ಕಾಣಲಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


