'ಗೋವಿಂದಾ ಗೋವಿಂದಾ' ಎಂದು ಹಾಡುತ್ತಿರುವ ಸುಮಂತ್ ಶೈಲೇಂದ್ರ
"ದಿಲ್ವಾಲಾ" ಖ್ಯಾತಿಯ ಸುಮಂತ್ ಶೈಲೇಂದ್ರ ಬಹುದೀರ್ಘ ಕಾಲದ ವಿರಾಮದ ಬಳಿಕ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಈ ಬಾರಿ ಅವರು "ಗೋವಿಂದಾ ಗೋವಿಂದಾ" ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಮರುಪ್ರವೇಶಕ್ಕೆ ಸಿದ್ದವಾಗಿದ್ದಾರೆ. ಇದು ಅವರ ವಿವಾಹದ ಬಳಿಕ ತೆರೆ ಕಾಣಲಿರುವ ಮೊದಲ ಕಮರ್ಷಿಯಲ್ ಎಂಟರ್ಟೈನರ್ ಎಂಬುದು ಗಮನಾರ್ಹ.

"ದಿಲ್ವಾಲಾ" ಖ್ಯಾತಿಯ ಸುಮಂತ್ ಶೈಲೇಂದ್ರ ಬಹುದೀರ್ಘ ಕಾಲದ ವಿರಾಮದ ಬಳಿಕ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಈ ಬಾರಿ ಅವರು "ಗೋವಿಂದಾ ಗೋವಿಂದಾ" ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಮರುಪ್ರವೇಶಕ್ಕೆ ಸಿದ್ದವಾಗಿದ್ದಾರೆ. ಇದು ಅವರ ವಿವಾಹದ ಬಳಿಕ ತೆರೆ ಕಾಣಲಿರುವ ಮೊದಲ ಕಮರ್ಷಿಯಲ್ ಎಂಟರ್ಟೈನರ್ ಎಂಬುದು ಗಮನಾರ್ಹ.
ತಿಲಕ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಕಳೆದ ಹತ್ತು ದಿನಗಳ ಹಿಂದೆ ಕೈವಾರದಲ್ಲಿ ಪ್ರಾರಂಭವಾಗಿದೆ.
ಲವ್ ಥ್ರಿಲ್ಲರ್ ಕಥಾನಕವಾಗಿರುವ ಈ ಚಿತ್ರದ ಕಥೆಯನ್ನು ತೆಲುಗಿನ ಬ್ರೋಚೆವಾರೆವರುರಾ" ಚಿತ್ರದಿಂಡ ತೆಗೆದುಕೊಳ್ಲಲಾಗಿದೆಯಂತೆ. ಆದರೆ ಕನ್ನಡ ಆವೃತ್ತಿಗೆ ಸ್ಥಳೀಯ ಟಚ್ ನೀಡಲು ಅನೇಕ ಬದಲಾವಣೆಗಳನ್ನು ಮಾಡಿಕೊಳ್ಲಲಾಗಿದೆ ಎಂದು ಚಿತ್ರತಂಡ ಹೇಳಿದೆ.
ಶೈಲೇಂದ್ರ ಬಾಬು ಮತ್ತು ರವಿ ಆರ್ ಗರಿಣಿ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಬಹುತಾರಾಂಗಣವಿರಲಿದೆ.ಸುಮಂತ್ ಈ ಚಿತ್ರದಲ್ಲಿ ವಿದ್ಯಾರ್ಥಿಯ ಪಾತ್ರವಹಿಸಲಿದ್ದಾರೆ. ಜತೆಗೆ "ಜಾಕಿ" ಖ್ಯಾತಿಯ ಭಾವನಾ ಹಾಗೂ ಕವಿತಾ ಗೌಡ ನಾಯಕಿಯರಾಗಿದ್ದಾರೆ.ನಟ ಪ್ರದೀಪ್ ರಾಜ್ ಪಾತ್ರವರ್ಗದ ಬಾಗವಾಗಿದ್ದಾರೆ.
ಕವಿತಾ ಗೌಡ ತುಳಿವಿನಲ್ಲಿ ಜನಪ್ರಿಯವಾಗಿರುವ ನಟಿ. ಕಡೆಯ ಬಾರಿಗೆ "ಗಿರ್ಗಿಟ್ಲೆ" ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.ಹಿತೇಶ್ "ಗೋವಿಂದಾ ಗೋವಿಂದಾ" ಚಿತ್ರಕ್ಕಾಗಿ ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಕುಮಾರ್ ಛಾಯಾಗ್ರಹಣ ಈ ಚಿತ್ರದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


