ಸಿನಿಮಾ ಸುದ್ದಿ'ಗೋವಿಂದಾ ಗೋವಿಂದಾ' ಎಂದು ಹಾಡುತ್ತಿರುವ ಸುಮಂತ್ ಶೈಲೇಂದ್ರ
"ದಿಲ್ವಾಲಾ" ಖ್ಯಾತಿಯ ಸುಮಂತ್ ಶೈಲೇಂದ್ರ ಬಹುದೀರ್ಘ ಕಾಲದ ವಿರಾಮದ ಬಳಿಕ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಈ ಬಾರಿ ಅವರು "ಗೋವಿಂದಾ ಗೋವಿಂದಾ" ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಮರುಪ್ರವೇಶಕ್ಕೆ ಸಿದ್ದವಾಗಿದ್ದಾರೆ. ಇದು ಅವರ ವಿವಾಹದ ಬಳಿಕ ತೆರೆ ಕಾಣಲಿರುವ ಮೊದಲ ಕಮರ್ಷಿಯಲ್ ಎಂಟರ್ಟೈನರ್ ಎಂಬುದು ಗಮನಾರ್ಹ.