ಸಿನಿಮಾ ಸುದ್ದಿ

ಮಾಯಾ ಬಜಾರ್ ಚಿತ್ರದಲ್ಲಿ ಪುನೀತ್ ಸಣ್ಣ ಝಲ್ಲಕ್!

ರಾಧಾಕೃಷ್ಣ ರೆಡ್ಡಿ ಚೊಚ್ಚಲ ನಿರ್ದೇಶನದ ಮಾಯಾ ಬಜಾರ್ ಸಿನಿಮಾವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಿಸುತ್ತಿದ್ದಾರೆ. ಪಿಆರ್ ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಾಯಾ ಬಜಾರ್ ಚಿತ್ರದಲ್ಲಿ ಪುನೀತ್ ಸಣ್ಣ ಝಲ್ಲಕ್!
ಮಾಯಾ ಬಜಾರ್
Published On :

ರಾಧಾಕೃಷ್ಣ ರೆಡ್ಡಿ ಚೊಚ್ಚಲ ನಿರ್ದೇಶನದ ಮಾಯಾ ಬಜಾರ್ ಸಿನಿಮಾವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಿಸುತ್ತಿದ್ದಾರೆ. ಪಿಆರ್ ಕೆ ಪ್ರೊಡಕ್ಷನ್  ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಾಯಾ ಬಜಾರ್ ಚಿತ್ರದ ಹಾಡೊಂದರಲ್ಲಿ ಪುನೀತ್ ರಾಜ್ ಕುಮಾರ್ ನಟಿಸಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಪುನೀತ್ , ಸದ್ಯದಲ್ಲಿಯೇ ಮಾಯಾ ಬಜಾರ್ ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಹಾಡನ್ನು ಹರ್ಷ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. 

ರಾಜ್ ಬಿ ಶೆಟ್ಟಿ, ವಶಿಷ್ಠ ಸಿಂಹ, ಪ್ರಕಾಶ್ ರಾಜ್, ಸುಧಾರಾಣಿ, ಮತ್ತು ಚೈತ್ರಾ ರಾವ್ ಮತ್ತಿತರ ತಾರಾಗಣವಿದೆ. ಜೋಡಿ ಹಕ್ಕಿ ಧಾರಾವಾಹಿಯಲ್ಲಿ ಗೃಹಿಣಿ ಪಾತ್ರಕ್ಕೆ ಹೆಸರಾಗಿದ್ದ  ನಟಿ ಈ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ. 

ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸೆನ್ಸ್ ರ್ ಮಂಡಳಿ ಮುಂದೆ ಪ್ರದರ್ಶನಕ್ಕೂ ಮುಂಚೆ ಪುನೀತ್ ಹಾಡನ್ನು ಸೇರಿಸಲಾಗುತ್ತದೆ. 

ಮಾಯಾ ಬಜಾರ್ ಪುನೀತ್ ನಿರ್ಮಾಣದ ಎರಡನೇ ಚಿತ್ರವಾಗಿದೆ. ಕವಲು ದಾರಿ ಪಿಆರ್ ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಮೊದಲ ಚಿತ್ರವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.