ಸಿನಿಮಾ ಸುದ್ದಿ

'ಆಯಿರಾಳ ಪುಟ್ಟ ಕಾಲು, ಕೈಗಳ ಸುಂದರ ಕಲಾಕೃತಿಗೆ ಯಶ್ ದಂಪತಿ ಪಿಧಾ! ನೆಟ್ಟಿಗರು ಗರಂ

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವಂತೆ ಈ ದಂಪತಿಗೆ ವಿಶೇಷವಾದ ಉಡುಗೊರೆಯೊಂದು ಸಿಕ್ಕಿದೆ. ರಾಧಿಕಾ ಪಂಡಿತ್ ಮೇಕಪ್ ಮ್ಯಾನ್ ಪ್ರಶಾಂತ್ , ಆಯಿರಾಳ ಪುಟ್ಟ ಕಾಲು ಮತ್ತು ಕೈಗಳ ಸುಂದರ ಕಲಾಕೃತಿಗಳನ್ನು ಈ ಸ್ಟಾರ್ ದಂಪತಿಗೆ ನೀಡಿದ್ದಾರೆ.

'ಆಯಿರಾಳ ಪುಟ್ಟ ಕಾಲು, ಕೈಗಳ ಸುಂದರ ಕಲಾಕೃತಿಗೆ ಯಶ್ ದಂಪತಿ ಪಿಧಾ! ನೆಟ್ಟಿಗರು ಗರಂ
ಕಲಾಕೃತಿಯೊಂದಿಗೆ ಯಶ್ ದಂಪತಿ
Published On :

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವಂತೆ ಈ ದಂಪತಿಗೆ ವಿಶೇಷವಾದ ಉಡುಗೊರೆಯೊಂದು ಸಿಕ್ಕಿದೆ. ರಾಧಿಕಾ ಪಂಡಿತ್  ಮೇಕಪ್ ಮ್ಯಾನ್  ಪ್ರಶಾಂತ್ , ಆಯಿರಾಳ ಪುಟ್ಟ ಕಾಲು ಮತ್ತು ಕೈಗಳ ಸುಂದರ ಕಲಾಕೃತಿಗಳನ್ನು ಈ ಸ್ಟಾರ್ ದಂಪತಿಗೆ ನೀಡಿದ್ದಾರೆ.

ಪುಟ್ಟ ಕಾಲು ಮತ್ತು ಕೈಗಳ ಕಲಾಕೃತಿಗಳಿಗೆ ಸುಂದರವಾದ ಫ್ರೇಮ್ ಹಾಕಿಸಿದ್ದಾರೆ. ಈ ಕಲಾಕೃತಿ ಮೇಲೆ ಆಯಿರಾ ಜನ್ಮ ದಿನಾಂಕವನ್ನು ಬರೆದು ಗಿಫ್ಟ್ ನೀಡಿದ್ದಾರೆ.


ಇದನ್ನು ನೋಡಿದ ಯಶ್ ದಂಪತಿ ಫುಲ್ ಖುಷಿ ಆಗಿದ್ದಾರೆ. ಇಂತಹ ಅದ್ಬುತವಾದ ಗಿಫ್ಟ್  ಮಗಳಿಗೆ ಸಿಕ್ಕಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಗಿಫ್ಟ್ ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಯಶ್ ಹಾಗೂ ರಾಧಿಕಾ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಇಂತಹ ಸುಂದರವಾದ ಗಿಫ್ಟ್ ನೀಡಿರುವ ಮೇಕಪ್ ಮ್ಯಾನ್ ಪ್ರಶಾಂತ್ ಗೆ ಯಶ್ ದಂಪತಿ ಧನ್ಯವಾದ ತಿಳಿಸಿದ್ದಾರೆ.. ಇನ್ನೂ ಈ ವಿಡಿಯೋ ಸಂಪೂರ್ಣವಾಗಿ ಇಂಗ್ಲಿಷ್ ನಲ್ಲಿಯೇ ಇದ್ದು, ಯಶ್ ಮತ್ತು ರಾಧಿಕಾ ಎಲ್ಲಿಯೂ ಕನ್ನಡ ಪದವನ್ನು ಬಳಸಿಲ್ಲ. ಇದಕ್ಕೆ ನೆಟ್ಟಿಗರು ಗರಂ ಆಗಿದ್ದು, ಕನ್ನಡದಲ್ಲಿ ಹೇಳಿ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.