ಮಾನ್ಸೂನ್‌ಗಾಗಿ ಕಾಯುತ್ತಿದ್ದಾರೆ ಯೋಗರಾಜ್ ಭಟ್ ಯಾಕಂತೀರಾ?
ಹಚ್ಚ ಹಸಿರಿನ ಥಾಣ, ಕೈಗೆಟಕುವ ಮೋಡ, ಚುಮು ಚುಮು ಚಳಿಯಲ್ಲಿ ಗಾಲಿಪಟ ಚಿತ್ರವನ್ನು ನಿರ್ಮಿಸಿ ಕನ್ನಡಿಗರಿಗೆ ಹೊಸ ಪ್ರಪಂಚವನ್ನು ಕಣ್ಮುಂದೆ ತಂದು ಬಿಟ್ಟಿದ್ದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್...

Published On :
ಹಚ್ಚ ಹಸಿರಿನ ಥಾಣ, ಕೈಗೆಟಕುವ ಮೋಡ, ಚುಮು ಚುಮು ಚಳಿಯಲ್ಲಿ ಗಾಲಿಪಟ ಚಿತ್ರವನ್ನು ನಿರ್ಮಿಸಿ ಕನ್ನಡಿಗರಿಗೆ ಹೊಸ ಪ್ರಪಂಚವನ್ನು ಕಣ್ಮುಂದೆ ತಂದು ಬಿಟ್ಟಿದ್ದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಮತ್ತೀಗ ಅದೇ ಮಾನ್ಸೂನ್‌ಗಾಗಿ ಕಾಯುತ್ತಿದ್ದಾರೆ.
ಹೌದು, ಬ್ಲಾಕ್ ಬಸ್ಟರ್ ಗಾಳಿಪಟ ಸಿಕ್ವೇಲ್ ತೆಗೆಯುವುದಾಗಿ ಈ ಹಿಂದೆಯೇ ಯೋಗರಾಜ್ ಭಟ್ ಘೋಷಿಸಿದ್ದರು. ಅದಕ್ಕಾಗಿ ಭಟ್ರು ಮಳೆಗಾಲಕ್ಕಾಗಿ ಕಾಯುತ್ತಿದ್ದಾರೆ. ಮಳೆಯಲ್ಲಿ ಚಿತ್ರದ ಕೆಲವೊಂದು ದೃಶ್ಯಗಳ ಚಿತ್ರೀಕರಣ ಮಾಡಬೇಕಿದೆ. ಇದಾದ ಬಳಿಕ ವಿದೇಶದಲ್ಲೂ ಚಿತ್ರದ ಕೆಲ ಭಾಗಗಳ ಶೂಟಿಂಗ್ ಮಾಡಲಿದ್ದಾರೆ.
ಗಾಳಿಪಟದಲ್ಲಿ ಇದ್ದ ತಾರಾಗಣವನ್ನು ಈ ಬಾರಿ ಭಟ್ರು ಮುಂದುವರೆಸುತ್ತಿಲ್ಲ. ಹಿಂದಿನ ಗಾಳಿಪಟದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಹಾಗೂ ರಾಜೇಶ್ ಕೃಷ್ಣ ನಟಿಸಿದ್ದರು. ಗಾಳಿಪಟ ಸಿಕ್ವೇಲ್ ನಲ್ಲಿ ರಿಷಿ, ಶರಣ್ ಮತ್ತು ಪವನ್ ಕುಮಾರ್ ನಟಿಸಲಿದ್ದಾರೆ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು ಮಹೇಶ್ ದನನ್ನವಾರ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


