ಸಿನಿಮಾ ಸುದ್ದಿ

ಬ್ರೇಕಪ್ ವಿಚಾರ: ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ ಹೇಳಿದ್ದೇನು?

ನಟ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ನಟಿ ರಶ್ಮಿಕಾ ಮಂದಣ್ಣ ಮೌನ ಮುರಿದಿದ್ದು, ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಬ್ರೇಕಪ್ ವಿಚಾರ: ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ ಹೇಳಿದ್ದೇನು?
ರಶ್ಮಿಕಾ ಮಂದಣ್ಣ
Published On :
ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ನಟಿ ರಶ್ಮಿಕಾ ಮಂದಣ್ಣ ಮೌನ ಮುರಿದಿದ್ದು, ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ನಿನ್ನೆ  ಸಂಜೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ರಶ್ಮಿಕಾ, ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆ, ಯಾವುದೇ ಕಥೆಗೂ, ವಿವಾದಕ್ಕೂ ಎರಡು ಆಯಾಮಗಳಿರುತ್ತವೆ. ಇದು ತಿಳಿಯದೇ ಯಾರೂ ಮಾತನಾಡಬಾರದು. ನಮ್ಮ ಪಾಡಿಗೆ ಕೆಲಸ ಮಾಡಿಕೊಂಡಿರಲು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
Story image
'ಬ್ರೇಕಪ್ ವಿಚಾರಕ್ಕೆ ಸಂಬಂಧಿಸಿದಂತೆ ನಾನು ತುಂಬಾ ದಿನಗಳಿಂದ ಮೌನವಾಗಿದ್ದೆ. ಆದರೆ ನನ್ನ ಬಗ್ಗೆ ಬರುತ್ತಿದ್ದ ಟ್ರೋಲ್ ಗಳನ್ನು ಮೌನವಾಗಿಯೇ ಗಮನಿಸುತ್ತಿದ್ದೇನೆ. ನಿಜಕ್ಕೂ ಇವುಗಳಿಂದ ನಾನು ತೀವ್ರ ತೊಂದರೆ ಅನುಭವಿಸುತ್ತಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವ್ಯಕ್ತಿತ್ವವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ಆದರೆ ಈ ಬಗ್ಗೆ ನಿಮ್ಮನ್ನು ದೂರುವುದಿಲ್ಲ. ಆದರೆ ಒಂದನ್ನು ನೆನಪಿಟ್ಟುಕೊಳ್ಳಿ ನಾಣ್ಯಕ್ಕೆ 2 ಮುಖಗಳಿರುವಂತೆ, ಪ್ರತಿಯೊಂದು ಕಥೆಗೂ, ವಿಚಾರಗಳಿಗೂ ಎರಡು ಆಯಾಮಗಳಿರುತ್ತವೆ. ಒಂದು ದೃಷ್ಟಿಕೋನದಿಂದ ಮಾತ್ರ ಇದು ಸರಿ, ಇದು ತಪ್ಪು ಎಂಬ ಭಾವನೆಗೆ ಬರಬೇಡಿ. ನಾನು ಇಲ್ಲಿ ಯಾರನ್ನೂ ಸಂತೈಸಲು ಬಂದಿಲ್ಲ. ಆದರೆ ನಾನಾಗಲಿ ಅಥವಾ ರಕ್ಷಿತ್ ಶೆಟ್ಟಿಗಾಗಲಿ ಅಥವಾ ಚಿತ್ರರಂಗದ ಇನ್ನಾರಿಗೂ ಇಂತಹ ಪರಿಸ್ಥಿತಿ ಬಾರದಿರಲಿ. ನಮ್ಮನ್ನು ನಮ್ಮ ಪಾಡಿಗೆ ಕೆಲಸ ಮಾಡಲು ಬಿಡಿ. ನಾನು ಕನ್ನಡಿ ಚಿತ್ರಗಳಲ್ಲಿಯೂ ಮುಂದುವರೆಯುತ್ತೇನೆ. ನಾನು ನೆಲೆಸಿರುವುದು ಇಲ್ಲೇ. ನನ್ನ ವೃತ್ತಿ ಜೀವನ ಇಲ್ಲಿಯೂ ಮುಂದುವರೆಯುತ್ತದೆ. ಅಂತೆಯೇ ಇತರೆ ಭಾಷೆಗಳಲ್ಲೂ ನಟಿಸುತ್ತೇನೆ. ಯಾವುದೇ ಚಿತ್ರರಂಗವಾದರೂ ನನ್ನ ಸಂಪೂರ್ಣ ಶ್ರಮ ಹಾಕಿ ಕೆಲಸ ಮಾಡುತ್ತೇನೆ ಎಂದು ರಶ್ಮಿಕಾ ಹೇಳಿದ್ದಾರೆ.
ಇನ್ನು ಪೋಸ್ಟ್ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಫೇಸ್ ಬುಕ್ ಪೋಸ್ಟ್ ಅನ್ನು ರಶ್ಮಿಕಾ ಡಿಲೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.