ಸಿನಿಮಾ ಸುದ್ದಿ

ರಶ್ಮಿಕಾ ಮಂದಣ್ಣ - ರಕ್ಷಿತ್‌ ಶೆಟ್ಟಿ ಬ್ರೇಕ್‌ ಅಪ್‌: ಆಪ್ತ ಮೂಲಗಳಿಂದ ಮಾಹಿತಿ

'ಕಿರಿಕ್ ಪಾರ್ಟಿ' ಖ್ಯಾತಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರ ನಿಶ್ಚಿತಾರ್ಥ ಮುರಿದು ಬಿದ್ದಿದ್ದು, ವೃತ್ತಿ ...

ರಶ್ಮಿಕಾ ಮಂದಣ್ಣ - ರಕ್ಷಿತ್‌ ಶೆಟ್ಟಿ ಬ್ರೇಕ್‌ ಅಪ್‌: ಆಪ್ತ ಮೂಲಗಳಿಂದ ಮಾಹಿತಿ
ರಶ್ಮಿಕಾ ಮಂದಣ್ಣ - ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥದ ಚಿತ್ರ
Published On :
'ಕಿರಿಕ್ ಪಾರ್ಟಿ' ಖ್ಯಾತಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರ ನಿಶ್ಚಿತಾರ್ಥ ಮುರಿದು ಬಿದ್ದಿದ್ದು, ವೃತ್ತಿ ಕಾರಣದಿಂದಾಗಿ ಇಬ್ಬರೂ ದೂರವಾಗಲು ನಿರ್ಧಾರ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಸದ್ಯ ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಅವರು ಕಳೆದ ವರ್ಷ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಕಾರಣಾಂತರಗಳಿಂದ ಕಿರಿಕ್‌ ಪಾರ್ಟಿಯ ಕರ್ಣ ಮತ್ತು ಸಾನ್ವಿ ಪರಸ್ಪರ ದೂರವಾಗುತ್ತಿದ್ದಾರೆ.
ರಶ್ಮಿಕಾ ಅಭಿನಯದ ತೆಲುಗಿನ ಮೊದಲ ಸಿನಿಮಾ 'ಛಲೋ' ಅವರಿಗೆ ಸಾಕಷ್ಟು ಹೆಸರು ತಂದಿತು. ಮೊನ್ನೆಯಷ್ಟೇ ಬಿಡುಗಡೆಯಾದ ವಿಜಯ್‌ ದೇವರಕೊಂಡ ನಟನೆಯ 'ಗೀತ ಗೋವಿಂದಂ' ಸಿನಿಮಾ ರಶ್ಮಿಕಾಗೆ ಸ್ಟಾರ್‌ ಪಟ್ಟ ತಂದುಕೊಟ್ಟಿತು. ಇದರ ಬೆನ್ನಲ್ಲೇ ರಶ್ಮಿಕಾ ಮತ್ತು ರಕ್ಷಿತ್‌ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಗುಸು-ಗುಸು ಆರಂಭವಾಗಿತ್ತು. ಇಬ್ಬರೂ ಬ್ರೇಕ್ ಆಪ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಇದು ಸುಳ್ಳು ಎಂದೇ ಇಬ್ಬರೂ ಹೇಳಿಕೊಂಡಿದ್ದರು. ಆದರೆ, ಈಗ ಅದುವೇ ನಿಜವಾಗಿದೆ. ಎರಡು ಕುಟುಂಬಗಳು ಕುಳಿತು ಮಾತನಾಡಿ ನಿಶ್ಚಿತಾರ್ಥ ಮುರಿದುಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಿಶ್ಛಿತಾರ್ಥ ಮುರಿದುಕೊಳ್ಳುವ ಮುನ್ನ ಇಬ್ಬರ ಕುಟುಂಬದ ಹಿರಿಯರು ಮತ್ತು ಸ್ನೇಹಿತರ ಜತೆ ಸಮಾಲೋಚನೆ ನಡೆಸಿ ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾರ ವೃತ್ತಿ ಜೀವನವನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನಕ್ಕೆ ಬರಲಾಗಿದೆ. ಇನ್ನುಮುಂದೆ ಇಬ್ಬರೂ ಎಂದಿನಂತೆ ಸ್ನೇಹಿತರಾಗಿ ಉಳಿಯುತ್ತಾರೆ ಎಂದು ಆಪ್ತರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.