ಜಗಪತಿ ಬಾಬು ಸೋದರನ ಪುತ್ರಿ ಜೊತೆ ಎಸ್ಎಸ್ ರಾಜಮೌಳಿ ಪುತ್ರ ಕಾರ್ತಿಕೇಯ ನಿಶ್ಚಿತಾರ್ಥ!
ಬ್ಲಾಕ್ ಬಸ್ಟರ್ ಚಿತ್ರ ಬಾಹುಬಲಿ ಸೃಷ್ಟಿಕರ್ತ ಎಸ್ಎಸ್ ರಾಜಮೌಳಿ ಪುತ್ರ ಎಸ್ಎಸ್ ಕಾರ್ತಿಕೇಯ ಟಾಲಿವುಡ್ ನ ಹಿರಿಯ ನಟ ಜಗಪತಿ ಬಾಬು ಸೋದರನ ಪುತ್ರಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ...

Published On :
ಬ್ಲಾಕ್ ಬಸ್ಟರ್ ಚಿತ್ರ ಬಾಹುಬಲಿ ಸೃಷ್ಟಿಕರ್ತ ಎಸ್ಎಸ್ ರಾಜಮೌಳಿ ಪುತ್ರ ಎಸ್ಎಸ್ ಕಾರ್ತಿಕೇಯ ಟಾಲಿವುಡ್ ನ ಹಿರಿಯ ನಟ ಜಗಪತಿ ಬಾಬು ಸೋದರನ ಪುತ್ರಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಜಗಪತಿ ಬಾಬು ಸಹೋದರ ರಾಮ್ ಪ್ರಸಾದ್ ಪುತ್ರಿ ಪೂಜಾ ಪ್ರಸಾದ್ ಅವರೊಂದಿಗೆ ಎಸ್ಎಸ್ ಕಾರ್ತಿಕೇಯ ಬುಧವಾರ ಗಣ್ಯರ ಸಮಾಕ್ಷಮದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಮೂಲಗಳ ಪ್ರಕಾರ ಇವರಿಬ್ಬರ ಮದುವೆ ಡಿಸೆಂಬರ್ ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಪೂಜಾ ಪ್ರಸಾದ್ ಶಾಸ್ತ್ರಿಯ ಸಂಗೀತ ಕಲಿತಿದ್ದು ಭಕ್ತಿಗೀತೆಗಳನ್ನು ಹಾಡುವ ಮೂಲಕ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಎಸ್ಎಸ್ ಕಾರ್ತಿಕೇಯ ಯೂನಿಟ್ ನಿರ್ದೇಶಕರಾಗಿ ತಂದೆ ಎಸ್ಎಸ್ ರಾಜಮೌಳಿ ಜತೆಗೆ ಕೆಲಸ ಮಾಡುತ್ತಿದ್ದಾರೆ. ಇನ್ನು ಪೂಜಾ ಜತೆಗೆ ನಿಶ್ಚಿತಾರ್ಥ ಆಗಿರುವ ಸಂಗತಿಯನ್ನು ಕಾರ್ತಿಕೇಯ ಟ್ವೀಟರ್ ಮೂಲಕ ಹಂಚಿಕೊಂಡಿದ್ದಾರೆ.
Yesss!! Very excited to dive into this new phase of my life with the love of my life! Pooja❤️
Thank you for the all love that you have been pouring. Can’t thank you all enough! Love always! ❤️
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
engagementBaahubaliಬಾಹುಬಲಿನಿಶ್ಚಿತಾರ್ಥSS Rajamouliಎಸ್ಎಸ್ ರಾಜಮೌಳಿJagapathi Babuಜಗಪತಿ ಬಾಬುKarthikeyaPooja Prasadಕಾರ್ತಿಕೇಯಪೂಜಾ ಪ್ರಸಾದ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


