ಸಿನಿಮಾ ಸುದ್ದಿ

ಅರ್ಜುನ್ ಸರ್ಜಾ ವಿರುದ್ಧ MeToo: ಪೊಲೀಸರ ಮುಂದೆ ಶೃತಿ ಆಪ್ತ ಸಹಾಯಕ ಕಿರಣ್, ಮೋನಿಕಾ ಹೇಳಿಕೆ!

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮೀಟೂ ಆರೋಪ ಸಂಬಂಧ ಕಬ್ಬನ್ ಪಾಕ್ ಪೊಲೀಸರು ಇಬ್ಬರು ಸಾಕ್ಷಿಗಳ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ...

ಅರ್ಜುನ್ ಸರ್ಜಾ ವಿರುದ್ಧ MeToo: ಪೊಲೀಸರ ಮುಂದೆ ಶೃತಿ ಆಪ್ತ ಸಹಾಯಕ ಕಿರಣ್, ಮೋನಿಕಾ ಹೇಳಿಕೆ!
ಶೃತಿ ಹರಿಹರನ್-ಅರ್ಜುನ್ ಸರ್ಜಾ
Published On :
ಬೆಂಗಳೂರು: ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮೀಟೂ ಆರೋಪ ಸಂಬಂಧ ಕಬ್ಬನ್ ಪಾಕ್ ಪೊಲೀಸರು ಇಬ್ಬರು ಸಾಕ್ಷಿಗಳ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. 
ವಿಸ್ಮಯ ಚಿತ್ರದ ಸಹ ನಿರ್ದೇಶಕಿ ಮೋನಿಕಾ ಹಾಗೂ ಶೃತಿ ಹರಿಹರನ್ ಆಪ್ತ ಸಹಾಯಕ ಕಿರಣ್ ಹೇಳಿಕೆಯನ್ನು ಪೊಲೀಸರು ರಹಸ್ಯ ಸ್ಥಳದಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಇನ್ಸ್ ಪೆಕ್ಟರ್ ಐಯ್ಯಣ್ಣ ರೆಡ್ಡಿ ಹಾಗೂ ಪಿಎಸ್ಐ ರೇಣುಕಾ ಸಮ್ಮುಖದಲ್ಲಿ ಸಾಕ್ಷಿಗಳ ಈ ಹೇಳಿಕೆ ದಾಖಲು ಮಾಡಿದ್ದಾರೆ. 
ಕಿರಣ್ ಹೇಳಿದ್ದು ಏನು?
ಅರ್ಜುನ್ ಸರ್ಜಾ ಅವರಿಂದ ಶೃತಿ ಹರಿಹರನ್ ಗೆ ಕಿರುಕುಳ ಆಗಿದ್ದು ನಿಜ. ರಿಹರ್ಸಲ್ ವೇಳೆಯೂ ಶೃತಿ ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದರು. ನಾವು ದೇವನಹಳ್ಳಿಯಿಂದ ಹೊರಟಾಗ ಸಿಗ್ನಲ್ ಬಳಿ ಅರ್ಜುನ್ ಸರ್ಜಾ ಅವರು ಉಟಕ್ಕೆ ಕರೆದಿದ್ದು ನಿಜ. ಅಷ್ಟೇ ಅಲ್ಲದೆ ರೆಸಾರ್ಟ್ ಗೆ ಹೋಗೋಣ ಬಾ ಎಂದು ಕರೆದಿದ್ದರು. ಈ ಸಂದರ್ಭದಲ್ಲಿ ನಾನು ಅಲ್ಲೇ ಇದ್ದೆ ಎಂದು ಕಿರಣ್ ಹೇಳಿದ್ದಾರೆ. 
ಮೋನಿಕಾ ಹೇಳಿದ್ದು ಏನು?
ಎರಡು ವರ್ಷಗಳ ಹಿಂದಿನ ಘಟನೆ ನನಗೆ ಏನು ಗೊತ್ತಿಲ್ಲ. ನನಗೆ ಏನೂ ನೆನಪಾಗುತ್ತಿಲ್ಲ. ವಿಸ್ಮಯ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಏನಾಯ್ತು ಅನ್ನೋದು ನನಗೆ ಸರಿಯಾಗಿ ಗೊತ್ತಿಲ್ಲ. ಲೈಂಗಿಕ ಕಿರುಕುಳ ಬಗ್ಗೆ ನನಗೇನೂ ಗೊತ್ತಿಲ್ಲ, ಶೃತಿಯೂ ಈ ಬಗ್ಗೆ ನನ್ನಲ್ಲಿ ಏನು ಹೇಳಿಕೊಂಡಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. 
ಇನ್ನು ವಿಸ್ಮಯ ಚಿತ್ರದ ಸಹ ನಿರ್ದೇಶಕ ಭರತ್ ನೀಲಕಂಠ ಹಾಗೂ ಶೃತಿ ಹರಿಹರನ್ ಆಪ್ತ ಸಹಾಯಕ ಬೋರೇಗೌಡ ಅವರು ಬುಧವಾರ ಪೊಲೀಸರ ಮುಂದೆ ಹೇಳಿಕೆ ನೀಡುವ ಸಾಧ್ಯತೆಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.