ಚಿತ್ರರಂಗವನ್ನೇ ಬಿಟ್ಟು ಹೋಗಲಿ: ಮತ್ತೆ ಗುಡುಗಿದ ನಟಿ ಹರ್ಷಿಕಾ ಪೂಣಚ್ಚ
ಪ್ರಚಾರಕ್ಕಾಗಿ ಒಬ್ಬರ ಹೆಸರನ್ನು ಯಾರೂ ಕೂಡ ಹಾಳು ಮಾಡಬಾರದು. ಒಂದೊಮ್ಮೆ ಅಂತಹ ಪರಿಸ್ಥಿತಿ ಎದುರಾದರೆ ಆ ಅವಕಾಶವನ್ನು ಬಿಟ್ಟು ಹೋಗುವುದೇ ಉತ್ತಮ ಎಂದು ನಟಿ ಹರ್ಷಿಕಾ ಪೂಣಚ್ಛ ಹೇಳಿದ್ದಾರೆ.

Published On :
ಬೆಂಗಳೂರು: ಪ್ರಚಾರಕ್ಕಾಗಿ ಒಬ್ಬರ ಹೆಸರನ್ನು ಯಾರೂ ಕೂಡ ಹಾಳು ಮಾಡಬಾರದು. ಒಂದೊಮ್ಮೆ ಅಂತಹ ಪರಿಸ್ಥಿತಿ ಎದುರಾದರೆ ಆ ಅವಕಾಶವನ್ನು ಬಿಟ್ಟು ಹೋಗುವುದೇ ಉತ್ತಮ ಎಂದು ನಟಿ ಹರ್ಷಿಕಾ ಪೂಣಚ್ಛ ಹೇಳಿದ್ದಾರೆ.
ಸ್ಯಾಂಡಲ್ ವುಡ್ ಮೀಟೂ ಅಭಿಯಾನಕ್ಕೆ ಸಂಬಂಧಿಸಿದಂತೆ ತಮ್ಮ ಸರಣಿ ಪ್ರತಿಕ್ರಿಯೆಗಳನ್ನು ಮುಂದುವರೆಸಿರುವ ನಟಿ ಹರ್ಷಿಕಾ, ತಮ್ಮ ಈ ಹಿಂದಿನ ಪ್ರತಿಕ್ರಿಯೆಗೆ ಸ್ಪಷ್ಟನೆ ನೀಡಿದ್ದಾರೆ. 'ಚಿತ್ರರಂಗದಲ್ಲಿ ಹೆಸರು ಮಾಡಲು 15 ವರ್ಷ ಕಷ್ಟಪಡಬೇಕು. ಆದರೆ ಯಾರೂ ಕೂಡ ಒಂದು ಕ್ಷಣದಲ್ಲಿ ಅವರ ಕಷ್ಟವನ್ನು ಹಾಳು ಮಾಡಬಾರದು. ಯಾವುದೇ ಕಾರಣಕ್ಕೂ ತಮ್ಮ ಪ್ರಚಾರಕ್ಕಾಗಿ ಒಬ್ಬರ ಹೆಸರನ್ನ ಹಾಳು ಮಾಡಬಾರದು. ಒಂದೊಮ್ಮೆ ಅಂತಹ ಪರಿಸ್ಥಿತಿ ಎದುರಾದರೆ ಆ ಅವಕಾಶವನ್ನು ಬಿಟ್ಟು ಹೋಗುವುದೇ ಉತ್ತಮ ಎಂದು ಕಿಡಿ ಕಾರಿದ್ದಾರೆ.
'ಕಷ್ಟದಲ್ಲಿ ಇರುವ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಅಭಿಯಾನ ಮೀಟೂ. ಸಂತ್ರಸ್ಥ ಮಹಿಳೆಯರಿಗೆ ಸದ್ಭಳಕೆಯಾಗಬೇಕಾದ ಅಭಿಯಾನ ಇದೀಗ ದುರುಪಯೋಗವಾಗುತ್ತಿದೆ. ಅದನ್ನು ಪ್ರಚಾರಕ್ಕಾಗಿ ಬಳಕೆ ಕೆಲವರು ಮಾಡಿಕೊಳ್ಳುತ್ತಿರುವುದರಿಂದ ನಿಜವಾಗಿ ತೊಂದರೆ ಅನುಭವಿಸಿದ ಹೆಣ್ಣು ಮಕ್ಕಳು ಅಭಿಯಾನದಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ. ನಾವು ಬೇಡ ಅಂದರೆ ಚಿತ್ರರಂಗದಲ್ಲಿ ಯಾರೂ ಬಲವಂತ ಮಾಡಲ್ಲ. ನಿಮಗೆ ತೊಂದರೆ ಆದರೆ ಚಿತ್ರರಂಗ ಬಿಟ್ಟು ಹೋಗಿ ಎಂದು ಹರ್ಷಿಕಾ ಪೂಣಚ್ಚ ಖಡಕ್ ಆಗಿ ಹೇಳಿದ್ದಾರೆ.
ಇದೇ ವೇಳೆ ತಮ್ಮ ಮೀಟೂ ಅನುಭವದ ಕುರಿತು ಮಾಹಿತಿ ನೀಡಿದ ಪೂಣಚ್ಚ, ನನಗೂ ಬಾಲಿವುಡ್ ರಂಗದಿಂದ ಆಫರ್ ಬಂದಿತ್ತು. ಇದರಲ್ಲಿ ಲೈಂಗಿಕ ಕಿರುಕುಳ ನೀಡುವ ವಿಷಯ ಕಂಡು ಬಂತು. ಅದ್ದರಿಂದ ನಾನು ಆ ಸಿನಿಮಾವನ್ನು ಬಿಟ್ಟು ಬಂದೆ. ನಮಗೆ ಚಿತ್ರರಂಗದಲ್ಲಿ ಒಂದೇ ಸಿನಿಮಾ ಎಂದೇನೂ ಇಲ್ಲ. ಜೀವನದಲ್ಲಿ ನಮಗೆ ಸಾಕಷ್ಟು ಅವಕಾಶಗಳಿರುತ್ತವೆ. ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಆಗುತ್ತೆ. ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ನಾನು 2 ವರ್ಷ, 10 ವರ್ಷದ ಹಿಂದಿನ ಮಾತು ಹೇಳುತ್ತಿಲ್ಲ. ಅದ್ದರಿಂದ ಇದು ತಪ್ಪು ಎಂದು ಅನಿಸುತ್ತಿದೆ ಎಂದರು.
ಚಿತ್ರರಂಗದ ಪರ ನಿಲ್ಲುತ್ತೇನೆ
ಸಿನಿಮಾ ರಂಗ ಎಂಬುವುದು ನಮಗೆ ಊಟ ನೀಡುವ ಕ್ಷೇತ್ರ. ನಮ್ಮ ಕನಸು ನನಸಾಗುವುದು ಇಲ್ಲಿ, ಹರ್ಷಿಕಾ ಪೂಣಚ್ಚ ಎಂಬ ಹೆಸರು ಜನರಿಗೆ ತಿಳಿದಿರುವುದು ಸಿನಿಮಾದಿಂದಲೇ. ಅದ್ದರಿಂದ ನಾನು ಅಷ್ಟು ಬೇಗ ಇದನ್ನು ಬಿಟ್ಟುಕೊಡುವುದಿಲ್ಲ. ನಾನು ಸಿನಿಮಾ ಕ್ಷೇತ್ರದ ಪರವೇ ನಿಲುತ್ತೇನೆ. ಅಡ್ವಾಂಟೇಜ್ ಕೊಟ್ಟರೆ ಮಾತ್ರ ತೆಗೆದುಕೊಳುತ್ತಾರೆ. ನೀವು ಕೊಡಲ್ಲ ಎಂದು ತಿಳಿದ ಮರು ಕ್ಷಣ ಅವರು ಸುಮ್ಮನಾಗುತ್ತಾರೆ ಎಂದು ಹರ್ಷಿಕಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


