ಸಿನಿಮಾ ಸುದ್ದಿ

'ಗಂಡ ಹೆಂಡತಿ' ಇಲ್ಲದೇ ಇರುತ್ತಿದ್ದರೆ, ರಮ್ಯಾ, ರಕ್ಷಿತಾ ಸಾಲಿಗೆ ನಾನೂ ಸೇರಿರುತ್ತಿದ್ದೆ: ಸಂಜನಾ

ನಿರ್ದೇಶಕ ರವಿ ಶ್ರೀ ವತ್ಸ ವಿರುದ್ಧ ತಿರುಗಿ ಬಿದ್ದಿರುವ ನಟಿ ಸಂಜನಾ, 'ಗಂಡ ಹೆಂಡತಿ' ಚಿತ್ರ ಇಲ್ಲದೇ ಇರುತ್ತಿದ್ದರೆ, ರಮ್ಯಾ, ರಕ್ಷಿತಾ ಸಾಲಿಗೆ ನಾನೂ ಸೇರಿರುತ್ತಿದ್ದೆ ಎಂದು ಹೇಳಿದ್ದಾರೆ.

'ಗಂಡ ಹೆಂಡತಿ' ಇಲ್ಲದೇ ಇರುತ್ತಿದ್ದರೆ, ರಮ್ಯಾ, ರಕ್ಷಿತಾ ಸಾಲಿಗೆ ನಾನೂ ಸೇರಿರುತ್ತಿದ್ದೆ: ಸಂಜನಾ
ಸಂಗ್ರಹ ಚಿತ್ರ
Published On :
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ #MeToo ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ನಿರ್ದೇಶಕ ರವಿ ಶ್ರೀ ವತ್ಸ ವಿರುದ್ಧ ತಿರುಗಿ ಬಿದ್ದಿರುವ ನಟಿ ಸಂಜನಾ, 'ಗಂಡ ಹೆಂಡತಿ' ಚಿತ್ರ ಇಲ್ಲದೇ ಇರುತ್ತಿದ್ದರೆ, ರಮ್ಯಾ, ರಕ್ಷಿತಾ ಸಾಲಿಗೆ ನಾನೂ ಸೇರಿರುತ್ತಿದ್ದೆ ಎಂದು ಹೇಳಿದ್ದಾರೆ.
ಅತ್ತ ನಿರ್ದೇಶಕ ರವಿ ಶ್ರೀವತ್ಸ ಸುದ್ದಿಗೋಷ್ಠಿ ನಡೆಸಿ ಸಂಜನಾ ವಿರುದ್ಧ ಕಿಡಿ ಕಾರಿದ ಬೆನ್ನಲ್ಲೇ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ ಸಂಜನಾ, ನಿರ್ದೇಶಕ ರವಿ ಶ್ರೀ ವತ್ಸ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗಂಡ ಹೆಂಡತಿ ಚಿತ್ರ ನನ್ನ ವೃತ್ತಿ ಬದುಕಿಗೆ ಶಾಪವಾಗಿ ಪರಿಣಮಿಸಿತ್ತು. ಟೀಕೆಗಳ ಕೇಳಲಾರದೇ ಒಮ್ಮೆ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೂ ಹೋಗಿದ್ದೆ ಎಂದು ಹೇಳಿದ್ದಾರೆ.
ಅಂತೆಯೇ ಗಂಡ ಹೆಂಡತಿ ಚಿತ್ರದಲ್ಲಿ ನಾನು ಅಭಿನಯಿಸದೇ ಹೋಗಿದ್ದರೆ, ನಾನು ಇಂದು ಕನ್ನಡ ಚಿತ್ರರಂಗದಲ್ಲಿ ರಮ್ಯಾ, ರಕ್ಷಿತಾ ರಂತಹ ದೊಡ್ಡ ನಟಿಯರ ಸಾಲಿನಲ್ಲಿರುತ್ತಿದ್ದೆ. ಮಾಧ್ಯಮಗಳಲ್ಲಿ ರವಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಹುಶಃ ಅವರಿಗೆ ತಾವು ಏನು ಮಾತನಾಡುತ್ತಿದ್ದೇನೆ ಎಂದು ತಿಳಿಯುತ್ತಿಲ್ಲ ಎಂದು ನಟಿ ಸಂಜನಾ ಹೇಳಿದ್ದಾರೆ.
ಅಂತೆಯೇ ನಿರ್ದೇಶಕ ರವಿಶ್ರೀ ವತ್ಸ ಅವರ ಆಸ್ತಿ ಮತ್ತು ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂಜನಾ, ನನ್ನ ಬಳಿ ಇರುವ ಆಸ್ತಿಗಳೆಷ್ಟು ಎಂಬ ಎಲ್ಲ ಮಾಹಿತಿಯನ್ನೂ ನೀಡುತ್ತೇನೆ. ಹೈದರಾಬಾದ್, ಬೆಂಗಳೂರಿನಲ್ಲೂ ನಾನು ಸೈಟ್ ಹೊಂದಿದ್ದೇನೆ. ಇದಕ್ಕೆ ತೆರಿಗೆ ಕಟ್ಟಿದ್ದೇನೆಯೋ ಇಲ್ಲವೋ ಎಂಬ ಮಾಹಿತಿಯನ್ನೂ ನೀಡುತ್ತೇನೆ ಎಂದು ಸಂಜನಾ ತಿರುಗೇಟು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.