ನಿಲ್ಲದ #MeToo ಸಮರ: ಶ್ರುತಿ ಹರಿಹರನ್ ವಿರುದ್ಧ ಕಿಡಿಕಾರಿ, ಸರ್ಜಾ ಬೆನ್ನಿಗೆ ನಿಂತ ಹರಿಪ್ರಿಯ, ವಿಜಯಲಕ್ಷ್ಮಿ!
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿದ್ದ ಮೀ ಟೂ ಆರೋಪ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದು ಇದಕ್ಕೆ ಪರ ವಿರೋಧ ಹೇಳಿಕೆಗಳು ಬರುತ್ತಿವೆ...

Published On :
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿದ್ದ ಮೀ ಟೂ ಆರೋಪ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದು ಇದಕ್ಕೆ ಪರ ವಿರೋಧ ಹೇಳಿಕೆಗಳು ಬರುತ್ತಿವೆ.
ಅರ್ಜುನ್ ಸರ್ಜಾ ಅವರ ವಿರುದ್ಧದ ಮೀ ಟೂ ಆರೋಪಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹರಿಪ್ರಿಯಾ, ಅರ್ಜುನ್ ಸರ್ಜಾಗೆ ತಮ್ಮ ಬೆಂಬಲ ನೀಡುವುದಾಗಿ ತನ್ನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಮೂಲಕ ತಿಳಿಸಿದ್ದಾರೆ.
ನಾನು ಚಿಕ್ಕ ವಯಸ್ಸಿನಿಂದಲೂ ಅರ್ಜುನ್ ಸರ್ ನ ನೋಡಿ ಬೆಳೆದಿದ್ದೇನೆ. ಅವರು ಈ ರೀತಿ ಮಾಡಲು ಸಾಧ್ಯವೇ ಇಲ್ಲ. ನಾನು ವಲ್ಲಕುಟೈ ತಮಿಳು ಸಿನಿಮಾದಲ್ಲಿ ಅವರ ಜತೆ ನಟಿಸಿದ್ದೇನೆ. ನನ್ನ ಅರ್ಜುನ್ ಸರ್ ಕನ್ನಡದಲ್ಲೇ ಮಾತನಾಡುತ್ತಿದ್ದರು. ಹೀಗಾಗಿ ಅವರ ಜತೆ ನಟಿಸಲು ತುಂಬಾನೇ ಕಂಫರ್ಟ್ ಆಗಿ ಅಭಿನಯಿಸಿದ್ದೆ. ಇನ್ನು ಶೂಟಿಂಗ್ ವೇಳೆ ನನ್ನ ಮತ್ತು ನನ್ನ ತಾಯಿಗೆ ತುಂಬಾನೆ ಗೌರವ ಕೊಟ್ಟು ಮಾತನಾಡಿಸುತ್ತಿದ್ದರು ಎಂದಿದ್ದಾರೆ.
ಚಿತ್ರೀಕರಣದ ವೇಳೆ ಅರ್ಜುನ್ ಸರ್ ಸಹ ನಟಿಯರಿಗೆ ಗೌರವ ಕೊಡುತ್ತಿದ್ದರು. ಈ ರೀತಿ ಆಗಿದ್ದಕ್ಕೆ ನನಗೆ ಭಾರೀ ನೋವಾಗಿದೆ. ಅರ್ಜುನ್ ಸರ್ ಗೆ ನನ್ನ ಬೆಂಬಲ ಇದೆ ಎಂದು ಹೇಳಿದ್ದಾರೆ.
ಇನ್ನು ನಟಿ ವಿಜಯಲಕ್ಷ್ಮಿ ಕೂಡ ಅರ್ಜುನ್ ಸರ್ಜಾಗೆ ಬೆಂಬಲ ನೀಡಿದ್ದು ಸರ್ಜಾ ಅವರು ನನ್ನ ಗುರು. ಬಹಳ ವರ್ಷಗಳ ಹಿಂದೆ ನಾನು ಅವರ ಜತೆ ನಟಿಸಿದ್ದೇನೆ. ಸೆಟ್ ನಲ್ಲಿ ಅವರು ತುಂಬಾ ಸೌಮ್ಯ ಸ್ವಾಭಾವದಿಂದ ನಡೆದುಕೊಳ್ಳುತ್ತಿದ್ದರು. ನಾನು ನನ್ನ ಕುಟಂಬ ಕಷ್ಟದಲ್ಲಿದ್ದಾಗ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕನ್ನಡದ ಕಲಾವಿದರ ಸಂಘ, ನಿರ್ದೇಶಕ-ನಿರ್ಮಾಪಕರ ಸಂಘ ಇನ್ನು ಬದುಕಿವೆ. ಎಲ್ಲವೂ ಇದ್ದಾಗ ಫೈರ್ ಅನ್ನುವ ಸಂಸ್ಥೆ ಯಾಕೆ? ಫೈರ್ ಸಂಸ್ಥೆ ಚಿತ್ರರಂಗವನ್ನು ಹೊಡೆಯುವ ಕೆಲಸ ಮಾಡುತ್ತಿದೆ. ನಿಮ್ಮ ಕುಟುಂಬದ ಜತೆ ಇದ್ದೇನೆ ಎಂದು ಸರ್ಜಾಗೆ ವಿಜಯಲಕ್ಷ್ಮಿ ಬೆಂಬಲವನ್ನು ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುarjun sarjaಅರ್ಜುನ್ ಸರ್ಜಾharipriyaಹರಿಪ್ರಿಯಾSandalwoodಸ್ಯಾಂಡಲ್ ವುಡ್VijayalakshmiSruthi Hariharanಶೃತಿ ಹರಿಹರನ್ವಿಜಯಲಕ್ಷ್ಮಿMeTooಮೀಟೂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


