'ದಾರಿ ತಪ್ಪಿದ ಮಗ' ನಾಗಿ ಡಾ.ರಾಜ್ ಮೊಮ್ಮಗ ಧೀರೆನ್ ಸ್ಯಾಂಡಲ್ ವುಡ್ ಎಂಟ್ರಿ
ವರನಟ ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿವೆ. ಮತ್ಯಾರೂ ಅಲ್ಲ ಪೂರ್ಣಿಮಾ ಮತ್ತು ರಾಮ್ ಕುಮಾರ್...

Published On :
ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿವೆ. ಮತ್ಯಾರೂ ಅಲ್ಲ ಪೂರ್ಣಿಮಾ ಮತ್ತು ರಾಮ್ ಕುಮಾರ್ ದಂಪತಿ ಪುತ್ರ 'ಧೀರೆನ್' ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ,
1975 ರಲ್ಲಿ ತನ್ನ ತಾತ ಡಾ.ರಾಜ್ ಕುಮಾರ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ದಾರಿ ತಪ್ಪಿದ ಮಗ ಸಿನಿಮಾ ಟೈಟಲ್ ಮೂಲಕ ಧೀರೆನ್ ಎಂಟ್ರಿಯಾಗುತ್ತಿದೆ. ಜಯಣ್ಣ ಕಂಬೈನ್ಸ್ ಚಿತ್ರವಾಗಿರುವ ಈ ಸಿನಿಮಾವನ್ನು ಅನಿಲ್ ಕುಮಾರ್ ನಿರ್ದೇಶಿಸಲಿದ್ದಾರೆ.
ಡಾ. ರಾಜ್ ಅಭಿನಯದ ದಾರಿ ತಪ್ಪಿದ ಮಗ ಸಿನಿಮಾವನ್ನು ಪೆಕೇಟಿ ಶಿವರಾಜ್ ನಿರ್ದೇಶಿಸಿದ್ದರು. ಧೀರೆನ್ ಅಭಿನಯದ ಸಿನಿಮಾ ಕಥೆ ಸಿದ್ದವಾಗುತ್ತಿದೆ. ನಟನಾಗಿ ಗುರುತಿಸಿಕೊಳ್ಳಲು ಧೀರೆನ್ ತಯಾರಿ ನಡೆಸುತ್ತಿದ್ದಾರೆ. ಮುಂದಿನ ವರ್ಷ ಸಿನಿಮಾ ಶೂಟಿಂಗ್ ಆರಂಭವಾಗುವ ಸಾಧ್ಯತೆಯಿದೆ.
ಅನಿಲ್ ಸದ್ಯ ಯಶ್ ನಟನೆಯ ಮೈ ನೇಮ್ ಇಸ್ ಕಿರಾತಕರ ಚಿತ್ರದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ, ಅದು ಮುಗಿದ ನಂತರ ದಾರಿ ತಪ್ಪಿದ ಮಗ ಆರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


