ಬಿಗ್‌ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆಡಂ ಪಾಶಾ, ಕವಿತಾ ಗೌಡ ಆಡಂಗೆ ಕೊಟ್ಟಿದ್ದೇನು? ಮನಕಲಕುವ ದೃಶ್ಯ!
ಅಭಿನಯ ಚಕ್ರವರ್ತಿ ಸುದೀಪ್ ನಿರೂಪಿಸಿ ಕೊಡುವ ಕನ್ನಡ ಬಿಗ್‌ಬಾಸ್ ಶೋ ಹಲವು ವಿಚಾರಗಳಿಗೆ ಸುದ್ದಿಯಾಗುತ್ತಿರುತ್ತದೆ...

Published On :
ಬೆಂಗಳೂರು: ಅಭಿನಯ ಚಕ್ರವರ್ತಿ ಸುದೀಪ್ ನಿರೂಪಿಸಿ ಕೊಡುವ ಕನ್ನಡ ಬಿಗ್‌ಬಾಸ್ ಶೋ ಹಲವು ವಿಚಾರಗಳಿಗೆ ಸುದ್ದಿಯಾಗುತ್ತಿರುತ್ತದೆ.
ಬಿಗ್‌ಬಾಸ್ ಕನ್ನಡ ಆರನೇ ಆವೃತ್ತಿಯೂ ಆರಂಭವಾಗಿ ಸ್ಪರ್ಧಿಗಳು ಪ್ರತಿದಿನ ಮನರಂಜನೆಯನ್ನು ನೀಡುತ್ತಿರುತ್ತಾರೆ. ಈ ಬಾರಿ ಬಿಗ್ ಬಾಸ್ ಮನೆಗೆ ಸ್ಪೆಶಲ್ ವ್ಯಕ್ತಿ ಆಡಂ ಪಾಶಾ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಮೂರು ವಾರಗಳಿಂದಲೂ ಒಮ್ಮೆಯೂ ಭಾವುಕರಾಗದ ಆಡಂ ಪಾಶಾ ಶುಕ್ರವಾರ ಪ್ರಸಾರವಾದ ಸಂಚಿಕೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ದೀಪಾವಳಿ ಆಚರಿಸಲಾಗುತ್ತಿತ್ತು. ಹಬ್ಬದ ಪ್ರಯುಕ್ತ ವಿಶೇಷ ಟಾಸ್ಕ್ ಗಳನ್ನು ನೀಡುವ ಮೂಲಕ ಮನೆಯಲ್ಲಿ ದೀಪಾವಳಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಇನ್ನು ಟಾಸ್ಕ್ ಗೆದ್ದ ಸ್ಪರ್ಧಿಗಳಿಗೆ ಅವರ ಪ್ರೀತಿ ಪಾತ್ರರಿಂದ ಬಂದಿರುವ ಉಡುಗೊರೆಯನ್ನು ಸಹ ನೀಡಲಾಗುತ್ತಿತ್ತು.
ಎಲ್ಲಾ ಸ್ಪರ್ಧಿಗಳಿಗೂ ಸಂದೇಶ ಕಳುಹಿಸಲಾಗಿತ್ತು. ಆದರೆ ಆಡಂ ಪಾಶಾಗೆ ಯಾರು ದೀಪಾವಳಿಯ ಸಂದೇಶ ಕಳುಹಿಸಿರಲಿಲ್ಲ. ಹೀಗಾಗಿ ಎಲ್ಲ ಸ್ಪರ್ಧಿಗಳು ತಮ್ಮ ಕುಟುಂಬಸ್ಥರು ನೀಡಿದ ಗಿಫ್ಟ್ ನಿಂದ ಸಂತೋಷದಲ್ಲಿದ್ದ ಕ್ಷಣದಲ್ಲಿ ಆಡಂ ಒಂದು ಕ್ಷಣ ಭಾವುಕರಾದರು. ಈ ವೇಳೆ ಕವಿತಾ ಗೌಡ ತಮಗೆ ಬಂದಿರುವ ಗಿಫ್ಟ್ ಅನ್ನು ಆಡಂಗೆ ನೀಡುವ ಮೂಲಕ ಅವರ ದುಃಖದಲ್ಲಿ ಭಾಗಿಯಾದರು.
ಕವಿತಾ ಗೌಡ ಅವರಿಗೆ ತನ್ನ ಆತ್ಮೀಯ ಸ್ನೇಹಿತರು ಇಸ್ರೇಲ್ ನಿಂದ ತಂದಿದ್ದ ಲಾಕೆಟ್ ಅನ್ನು ಬಿಗ್‌ಬಾಸ್ ಮನೆಗೆ ಕಳುಹಿಸಿದ್ದರು. ಅದೇ ಲಾಕೆಟ್ ಅನ್ನು ಕವಿತಾ ಆಡಂಗೆ ನೀಡಿದರು. ನಾನು ಈ ಲಾಕೆಟ್ ಬಹಳ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದೇನೆ. ಆಡಂಗೆ ಕುಟುಂಬಸ್ಥರು ಎಲ್ಲಿದ್ದಾರೆ? ಏನು ಎಂಬುದು ನನಗೆ ಗೊತ್ತಿಲ್ಲ. ಸದ್ಯ ಆಡಂಗಾಗಿ ಯಾವ ಸಂದೇಶ ಅಥವಾ ಗಿಫ್ಟ್ ಬಂದಿಲ್ಲ. ಹಾಗಾಗಿ ನನ್ನ ಅದೃಷ್ಟದ ಲಾಕೆಟ್ ಅನ್ನು ಆಡಂಗೆ ನೀಡುತ್ತಿದ್ದೇನೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
kannadaBigg Bossಕನ್ನಡಬಿಗ್ಬಾಸ್Emotionalಕಿಚ್ಚಾ ಸುದೀಪ್Kichcha SudeepaKavitha Gowdaಕವಿತಾ ಗೌಡAdam Pashaಆಡಂ ಪಾಶಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


