ಸಿನಿಮಾ ಸುದ್ದಿ

ಮತ್ತೆ ಹುಚ್ಚಾಟ; ನಾನು ಐಶ್ವರ್ಯರನ್ನು ಮದುವೆ ಆಗಿಲ್ಲ ಎಂದ ಹುಚ್ಚ ವೆಂಕಟ್

ಡಿಕ್ಟೇಟರ್ ಹುಚ್ಚಾ ವೆಂಕಟ್ ಚಿತ್ರದ ನಾಯಕ ಐಶ್ವರ್ಯಾ ಅವರನ್ನು ಮದುವೆಯಾಗಿದ್ದೇನೆ ಎಂದು ಹೇಳಿದ್ದ ನಟ ಹುಚ್ಚಾ ವೆಂಕಟ್ ಇದೀಗ ಉಲ್ಟಾ ಹೊಡೆದಿದ್ದು, ನಾನು ಆಕೆಯನ್ನು ವಿವಾಹವಾಗಿಲ್ಲ ಎಂದು ಹೇಳಿದ್ದಾರೆ.

ಮತ್ತೆ ಹುಚ್ಚಾಟ; ನಾನು ಐಶ್ವರ್ಯರನ್ನು ಮದುವೆ ಆಗಿಲ್ಲ ಎಂದ ಹುಚ್ಚ ವೆಂಕಟ್
ಸಂಗ್ರಹ ಚಿತ್ರ
Published On :
ಬೆಂಗಳೂರು: ಡಿಕ್ಟೇಟರ್ ಹುಚ್ಚಾ ವೆಂಕಟ್ ಚಿತ್ರದ ನಾಯಕ ಐಶ್ವರ್ಯಾ ಅವರನ್ನು ಮದುವೆಯಾಗಿದ್ದೇನೆ ಎಂದು ಹೇಳಿದ್ದ ನಟ ಹುಚ್ಚಾ ವೆಂಕಟ್ ಇದೀಗ ಉಲ್ಟಾ ಹೊಡೆದಿದ್ದು, ನಾನು ಆಕೆಯನ್ನು ವಿವಾಹವಾಗಿಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಹುಚ್ಚಾ ವೆಂಕಟ್, ನಾನು ಮತ್ತೊಂದು ಮದುವೆ ಆಗಿಲ್ಲ. ಅದು ಸುಳ್ಳು ಸುದ್ದಿ. ಐಶ್ವರ್ಯ ಅವರನ್ನು ಮದುವೆ ಆಗಿರುವುದು ಸಿನಿಮಾದಲ್ಲಿರುವ ದೃಶ್ಯ. ಅದನ್ನೇ ವಿಡಿಯೋ ಮಾಡಿ ರಿಲೀಸ್ ಮಾಡಿದ್ದೇನೆ. ನಾನು ಯಾವತ್ತಿಗೂ ಒಬ್ಬನೇ, ನನಗೆ ಯಾರೂ ಬೇಕಾಗಿಲ್ಲ ಎಂದು ಹುಚ್ಚ ವೆಂಕಟ್ ತಿಳಿಸಿದ್ದಾರೆ.
ಅಂತೆಯೇ ಮದುವೆಯ ವಿಚಾರದ ಬಗ್ಗೆ ಐಶ್ವರ್ಯ ಅವರೇ ಈ ರೀತಿ ಮಾಡಲು ಹೇಳಿದ್ದರು. ಹಾಗಾಗಿ ನಾನು ಮದುವೆಯಾಗಿದ್ದೇನೆಂದು ವಿಡಿಯೋ ಮಾಡಿದೆ. ಆದರೆ ನನಗೆ ಈ ರೀತಿ ಮಾಡುವುದು ಇಷ್ಟವಿಲ್ಲ. ಅದಕ್ಕಾಗಿ ನಿಮ್ಮ ಮುಂದೆ ಎಲ್ಲವನ್ನೂ ಹೇಳಿದ್ದೇನೆ ಎಂದು ಹುಚ್ಚ ವೆಂಕಟ್ ವಿಡಿಯೋದಲ್ಲಿ ಹೇಳಿದ್ದಾರೆ.
ಈ ಹಿಂದೆ ನಾನು ಮತ್ತೊಂದು ಮದುವೆ ಆಗಿರುವುದಾಗಿ ಸ್ವತಃ ಹುಚ್ಚ ವೆಂಕಟ್ ಫೇಸ್‍ಬುಕ್ ಲೈವ್ ಬಂದು ತಮ್ಮ ಮದುವೆ ಬಗ್ಗೆ ಎಲ್ಲರಿಗೂ ತಿಳಿಸಿದ್ದರು. ಕಳೆದ ವಾರ ತಲಕಾವೇರಿಯಲ್ಲಿ ನಾನು ಐಶ್ವರ್ಯರನ್ನು ಮದುವೆ ಆದೆ. ಮದುವೆ ಆದ ನಂತರ ಐಶ್ವರ್ಯ ಅವರ ದೊಡ್ಡಮ್ಮ ತೀರಿಕೊಂಡರು. ಹಾಗಾಗಿ ಮದುವೆ ಆದ ವಿಷಯವನ್ನು ನಾವು ಮನೆಯವರಿಂದ ಹಾಗೂ ಎಲ್ಲರಿಂದ ಮುಚ್ಚಿಟ್ಟಿದ್ದೀವಿ ಎಂದು ಹೇಳಿಕೊಂಡಿದ್ದರು.  ಅಂತೆಯೇ ನಾವಿಬ್ಬರೂ ಮದುವೆಯಾಗಿ ಜೊತೆಯಲ್ಲಿ ಇದ್ದೇವೆ. ನಾನು ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಹಾಗೂ ಆಕೆಯನ್ನು ತುಂಬ ಪ್ರೀತಿಸ್ತೀನಿ. ಅವಳು ಕೂಡ ನನ್ನನ್ನು ತುಂಬಾನೇ ಪ್ರೀತಿಸುತ್ತಾಳೆ. ನಾವು ಯಾವುದೇ ತಪ್ಪು ಮಾಡಿಲ್ಲ. ಇಬ್ಬರು ಪ್ರೀತಿಸಿ ಮದುವೆ ಆಗಿದ್ದೀವಿ ಹಾಗೂ ನಾವಿಬ್ಬರು ಮೇಜರ್. ಬಲವಂತವಾಗಿ ನಾವು ಮದುವೆಯಾಗಿಲ್ಲ. ನಮ್ಮಿಬ್ಬರನ್ನು ದೂರ ಮಾಡಬೇಡಿ ಎಂದು ಹುಚ್ಚ ವೆಂಕಟ್ ಮನವಿ ಮಾಡಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.