ವಿಜಯಪುರಕ್ಕೆ ಹೊರಟ 'ಶ್ರೀಮನ್ನಾರಾಯಣ'
ರಕ್ಷಿತ್ ಶೆಟ್ಟಿ ನಾಯಕನಾಗಿರುವ ’ಅವನೆ ಶ್ರೀಮನ್ನಾರಾಯಣ’ ಚಿತ್ರತಂಡ ಕಡೆ ಕ್ಷಣದಲ್ಲಿ ಚಿತ್ರೀಕರಣ ಸ್ಥಳದಲ್ಲಿ ಬದಲಾವಣೆ ಮಾಡಿಕೊಂಡಿದೆ

Published On :
ಬೆಂಗಳೂರು: ರಕ್ಷಿತ್ ಶೆಟ್ಟಿ ನಾಯಕನಾಗಿರುವ ’ಅವನೆ ಶ್ರೀಮನ್ನಾರಾಯಣ’ ಚಿತ್ರತಂಡ ಕಡೆ ಕ್ಷಣದಲ್ಲಿ ಚಿತ್ರೀಕರಣ ಸ್ಥಳದಲ್ಲಿ ಬದಲಾವಣೆ ಮಾಡಿಕೊಂಡಿದೆ. ರಾಜಸ್ಥಾನದಲ್ಲಿ ಇದ್ದ ಚಿತ್ರದ ಶೂಟಿಂಗ್ ವಿಜಯಪುರಕ್ಕೆ ಸ್ಥಳಾಂತರಾವಗಿದೆ.
ಸಚಿನ್ ರವಿ ನಿರ್ದೇಶನದ ಈ ಚಿತ್ರ ಇದಾಗಲೇ ಬೆಂಗಳೂರಿನಲ್ಲಿ ಒಂದು ಭಾಗದ ಚಿತ್ರೀಕರಣ ಮುಗಿಸಿದೆ. ಇದೇ ಮೇ 15ಕ್ಕೆ ವಿಜಯಪುರದಲ್ಲಿ ಎರಡನೇ ಹಂತದ ಶೂಟಿಂಗ್ ಪ್ರಾರಂಭವಾಗಲಿದೆ. ಅಲ್ಲಿ ಸುಮಾರು 25 ದಿನಗಳ ಕಾಲ ಶೂಟಿಂಗ್ ನಡೆಯಲಿದೆ.
"ಮೊದಲು ನಾವು ರಾಜಸ್ಥಾನದಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಿದ್ದು ಸತ್ಯ, ವಿಜಯಪುರವನ್ನೊಮ್ಮೆ ನೋಡಿದಾಗ ಚಿತ್ರಕಥೆಗೆ ಈ ಸ್ಥಲವೇ ಸೂಕ್ತ ಎನಿಸಿದೆ. ಹೀಗಾಗಿ ರಾಜಸ್ಥಾನದ ಬದಲಿಗೆ ವಿಜಯಪುರದಲ್ಲಿ ಶೂಟಿಂಗ್ ನಡೆಸಲು ತೀರ್ಮಾನಿಸಿದ್ದೇವೆ" ರಕ್ಷಿತ್ ಶೆಟ್ಟಿ ಹೇಳಿದಾರು.
"ವಿಜಯಪುರ ಹಾಗು ಬಾದಾಮಿಯಲ್ಲಿನ ಚಿತ್ರೀಕರಣ ಮಾತ್ರ ಚಿತ್ರದಲ್ಲಿನ ಔಟ್ ಡೋರ್ ಶೂಟಿಂಗ್ ಭಾಗವಾಗಿದೆ. ಇನ್ನುಳಿದ ಬಹುತೇಕ ಚಿತ್ರವು ಒಳಾಂಗಣ ಚಿತ್ರೀಕರಣ ಸೆಟ್ ನಲ್ಲಿ ಚಿತ್ರೀಕರಿಸಲ್ಪಟ್ಟಿದೆ" ಇದಕ್ಕಾಗಿ ನಾವು ದೊಡ್ಡ ಸೆಟ್ ಗಳನ್ನು ಹಾಕಿದ್ದೆವು" ಅವರು ಹೇಳಿದರು.
’ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಾಜಿ ಮನೋಹರ್, ಅಚ್ಯುತ್ ರಾವ್ ಸೇರಿ ಅನೇಕರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದು ಪುಷ್ಕರ್ ಫಿಲ್ಮ್ಸ್, ಪರಮ್ವತ್ ಸ್ಟುಡಿಯೋಸ್ ಹಾಗೂ ಶ್ರೀದೇವಿ ಎಂಟರ್ಪ್ರೈಸಸ್ ಜಂಟಿ ಸಹಯೋಗದಲ್ಲಿ ಚಿತ್ರವು ನಿರ್ಮಾಣವಾಗುತ್ತಿದೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ನಿಡಿದ್ದರೆ ಕರಮ್ ಚಾವ್ಲಾ ಛಾಯಾಗ್ರಹಣ ಮಾಡಿದ್ದಾರೆ.
ಜೂನ್ ಅಂತ್ಯಕ್ಕೆ 777 ಚಾರ್ಲಿ ಚಿತ್ರೀಕರಣ ಪ್ರಾರಂಭ
ಕಿರಣ್ ರಾಜ್ ನಿರ್ದೇಶನದ ರಕ್ಷಿತ್ ಶೆಟ್ಟಿ ನಾಯಕನಾದ ಚಿತ್ರ 777 ಚಾರ್ಲಿ ಚಿತ್ರದ ರಕ್ಷಿತ್ ಭಾಗದ ಚಿತ್ರೀಕರಣ ಜೂನ್ ನಲ್ಲಿ ಪ್ರಾರಂಭವಾಗಲಿದೆ. ಎರಡು ವಾರಗಳಲ್ಲಿ ಚಿತ್ರದ ನಾಯಕಿಯನ್ನು ಅಂತಿಮಗೊಳಿಸುವುದಾಗಿ ಚಿತ್ರತಂಡ ಹೇಳಿದೆ" ರಕ್ಶ್ಃಇತ್ ಶೆಟ್ಟಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
VijayapuraShanvi Srivastavaರಕ್ಷಿತ್ ಶೆಟ್ಟಿವಿಜಯಪುರRakshit Shettyಶಾನ್ವಿ ಶ್ರೀವಾಸ್ತವAvane Srimannarayanaಅವನೆ ಶ್ರೀಮನ್ನಾರಾಯಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


