ಸಿನಿಮಾ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ ಆಟೋಗಳ ಸಾಲು ನಿಂತದ್ದೇಕೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ ಸಾಲು ಸಾಲು ಆಟೋಗಳು! ಇಷ್ಟಕ್ಕೂ ಆಟೋ ಚಾಲಕರಿಗೆ ದರ್ಶನ್ ಮನೆ ಮುಂದೇನು ಕೆಲಸ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ ಆಟೋಗಳ ಸಾಲು ನಿಂತದ್ದೇಕೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ ಆಟೋಗಳ ಸಾಲು ನಿಂತದ್ದೇಕೆ?
Published On :
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ ಸಾಲು ಸಾಲು ಆಟೋಗಳು! ಇಷ್ಟಕ್ಕೂ ಆಟೋ ಚಾಲಕರಿಗೆ ದರ್ಶನ್ ಮನೆ ಮುಂದೇನು ಕೆಲಸ? ಹೀಗೆಂದು ನೀವು ಕೇಳಿದರೆ ಅವರು ಕೇವಲ ಆಟೋ ಚಾಲಕರಲ್ಲ ಅವರೆಲ್ಲ ನಟ ದರ್ಶನ್ ಅಭಿಮಾನಿಗಳೂ ಹೌದು.
ಕಳೆದೆರಡು ದಿನಗಳಿಂಡ 'ಸಾರಥಿ' ದರ್ಶನ್ ಮನೆ ಮುಂದೆ ತಮ್ಮ ಆಟೋ ಸಮೇತವಾಗಿ ಜಮಾಯಿಸಿರುವ ಈ ಆಟೋ ಚಾಲಕರು ತಮ್ಮ ಅಭಿಮಾನಿ ನಟನ ಆಟೋಗ್ರಾಫ್ ಸದಾ ನಮ್ಮನೆನಪಲ್ಲಿ ಉಳಿಯಬೇಕೆಂದು ತಮ್ಮ ಜೀವನಾಧಾರವಾಗಿರುವ ಆಟೋಗಳ ಮೇಲೆ ದರ್ಶನ್ ಆಟೋಗ್ರಾಫ್ ಹಾಕಿಸಿಕೊಳ್ಳುತ್ತಿದ್ದಾರೆ.
ದರ್ಶನ್ ಅವರ ಸಾವಿರಾರು ಅಭಿಮಾನಿಗಳ ನಡುವೆ ನಾವು ಪ್ರತ್ಯೇಕವಾಗಿ ಕಾಣಬೇಕೆನ್ನುವ ಹಂಬಲದೊಡನೆ ಆಟೋ ಚಾಲಕರು ಈ ಹೊಸ ಆಲೋಚನೆ ಮಾಡಿದ್ದರು.
Story image
ಹೀಗೆ ತಮ್ಮ ಮನೆ ಬಳಿ ಬಂದ ಆಟೋ ಚಾಲಕರ ಆಟೋಗಳ ಮೇಲೆ ನಟ ದರ್ಶನ್ ಆಟೋಗ್ರಾಫ್ ಹಾಕುತ್ತಿರುವ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಇದರಿಂದ ಸ್ಪೂರ್ತಿಗೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ಆಟೋಈ ಚಾಲಕರೂ ತಮ್ಮ ತಮ್ಮ ಆಟೋಗಳಿಗೆ ತಮಗಿಷ್ಟದ ನಟರಿಂದ ಹೀಗೆ ಆಟೋಗ್ರಾಫ್ ಹಾಕಿಸಿಕೊಂಡರೆ ಅಚ್ಚರಿ ಇಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.