ಸಿನಿಮಾ ಸುದ್ದಿ

ಬೆಳ್ಳಿತೆರೆಗೆ ಮತ್ತೆ ಅಮೂಲ್ಯ, ನಟನೆಗೇ ನನ್ನ ಮೊದಲ ಆದ್ಯತೆ ಎಂದ ನಟಿ

ಚೆಲುವಿನ ಚಿತ್ತಾರದ ಚೆಲುವೆಗೆ ನಟನೆ ಮೇಲೆ ಮೊದಲ ಲವ್ ಅಂತೆ, ಹೀಗಾಗಿ ಕಳೆದ 1 ವರ್ಷದಿಂದ ಚಿತ್ರರಂಗದಿಂದ ದೂರವಿದ್ದ ನಟಿ ಅಮೂಲ್ಯ ಮತ್ತೆ ಬೆಳ್ಳಿ ...

ಬೆಳ್ಳಿತೆರೆಗೆ ಮತ್ತೆ ಅಮೂಲ್ಯ, ನಟನೆಗೇ ನನ್ನ ಮೊದಲ ಆದ್ಯತೆ ಎಂದ ನಟಿ
ಅಮೂಲ್ಯ
Published On :
ಬೆಂಗಳೂರು: ಚೆಲುವಿನ ಚಿತ್ತಾರದ ಚೆಲುವೆಗೆ ನಟನೆ ಮೇಲೆ ಮೊದಲ ಲವ್ ಅಂತೆ, ಹೀಗಾಗಿ ಕಳೆದ 1 ವರ್ಷದಿಂದ ಚಿತ್ರರಂಗದಿಂದ ದೂರವಿದ್ದ ನಟಿ ಅಮೂಲ್ಯ ಮತ್ತೆ ಬೆಳ್ಳಿ ತೆರೆಗೆ ವಾಪಾಸಾಗುವ ಸುಳಿವು ನೀಡಿದ್ದಾರೆ. 
ಮಾಸ್ತಿಗುಡಿ ಚಿತ್ರದಲ್ಲಿ ಕೊನೆಯ ಬಾರಿಗೆ ನಟಿಸಿದ್ದ ಅಮೂಲ್ಯ ತನ್ನ ಮಾವನ ರಾಜಕೀಯ ಕೆಲಸಗಳಿಗಾಗಿ ಚಿತ್ರರಂಗದಿಂದ ದೂರವಿದ್ದರು, ಮತ್ತೆ ಬೆಳ್ಳಿ ತೆರೆಗೆ ಮರಳಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಅಮೂಲ್ಯ ಹೇಳಿದ್ದಾರೆ.
ಮದುವೆಯಾಗಿ 1 ವರ್ಷವಾಯಿತು, ನನ್ನ ಮಾವನ ರಾಜಕೀಯ ರಂಗದ ಕೆಲವು ಕೆಲಸಗಳಿಗೆ ಸಹಾಯ ಮಾಡುತ್ತಿದ್ದೆ, ಈಗಲ ಕೆಲಸ ಮುಗಿದಿದೆ. ನನ್ನ ಮನಸ್ಸು ಈಗ ಕ್ಲಿಯರ್ ಆಗಿದೆ, ನಾನು ಸಿನಿಮಾಗಳ ಕಡೆ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ.
ಆರು ತಿಂಗಳ ಹಿಂದೆ ಒಂದು ಸುಂದರವಾದ ಕಥೆ ಬಂದಿತ್ತು, ಅದೊಂದು ಪ್ರಶಸ್ತಿ ವಿಜೇತ ಪಾತ್ರ, ಆದರೆ ಚುನಾವಣೆ ಮತ್ತು ಹಲವು ಹಿಂದಿನ ಕಮಿಟ್ ಮೆಂಟ್ ಗಳಿಂದಾಗಿ ಅದನ್ನು ಪೆಂಡಿಂಗ್ ಇಟ್ಟಿದ್ದೆವು. ನಾವು ಈಗ ಎಲ್ಲಾ ಕೆಲಸಗಳನ್ನು ಮುಗಿಸಿದ್ದು ಆಗಸ್ಟ್ ನಿಂದ ಮತ್ತೆ ಕೆಲಸ ಆರಂಭಿಸುತ್ತೇವೆ,ಎಲ್ಲವೂ ನಾವು ಅಂದುಕೊಂಡಂತೆ ಆದರೇ ಆಗಸ್ಟ್ ತಿಂಗಳಲ್ಲಿ ಕೆಲಸ ಆರಂಭವಾಗುತ್ತದೆ ಎಂದು ಹೇಳಿದ್ದಾರೆ.
ಪಾತ್ರಗಳ ಆಯ್ಕೆಯಲ್ಲಿ ಅಮೂಲ್ಯ ತುಂಬಾ ಚ್ಯೂಸಿ, ವರ್ಷದಲ್ಲಿ ಒಂದು ಅಥವಾ ಎರಡು ಸಿನಿಮಾದಲ್ಲಿ ಮಾತ್ರ ನಟಿಸುತ್ತಾರೆ, ನಿರ್ಧಿಷ್ಟ ಪಾತ್ರಕ್ಕೆ ಅಂಟಿಕೊಂಡು ಕೂರುವುದಿಲ್ಲ, ಜಗದೀಶ್ ವಿಶಾಲ ಮನೋಭಾವದ ವ್ಯಕ್ತಿ, ನಾನು ಆಯ್ಕೆ ಮಾಡಿಕೊಂಡ ವಿಷಯಗಳ ಬಗ್ಗೆ ಏನು ಹೇಳುವುದಿಲ್ಲ, 
ಒಬ್ಬ ಕಲಾವಿದೆಯಾಗಿ, ಹಾಗೂ ವಿವಾಹಿತೆಯಾಗಿ ನಾನು ನನ್ನ ಆಯ್ಕೆಯಲ್ಲಿ ನಿರ್ದಿಷ್ಟವಾಗಿದ್ದೇನೆ,. ಉತ್ತಮವಾದದ್ದು ಮಾತ್ರ ನನಗೆ ಬೇಕು. ನಾನು ನಯನಾತಾರ ಅವರ ಸಿನಿಮಾಗಳಿಂದ ಪ್ರೇರಿತಳಾಗಿದ್ದೇನೆ, ಅವರು ನಟಿಸದಂತ ಪಾತ್ರಗಳನ್ನು ನಾನು ನಟಿಸಬೇಕು ಎಂಬುದು ನನ್ನ ಆಸೆಯಾಗಿದೆ.
ಅಮೂಲ್ಯ ರಜೆ ಕಳೆಯಲು ಪತಿಯ ಜೊತೆ ಲಂಡನ್ ಗೆ ತೆರಳುತ್ತಿದ್ದು, ಅಲ್ಲಿಂದ ವಾಪಸ್ ಆದ ನಂತರ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ, ವೃತ್ತಿ ಜೀವನ ಹಾಗೂ ವಯಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡುವುದನ್ನು ನನಗೆ ಮದುವೆ ಕಲಿಸಿಕೊಟ್ಟಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.