ಸಿನಿಮಾ ಸುದ್ದಿ

ಪೈಲ್ವಾನ್ ಗೆಟಪ್ ನಲ್ಲಿ ಸುದೀಪ್ ಪೋಸ್, ಹೊಸ ಟ್ರೆಂಡ್ ಸೃಷ್ಟಿ

ಎಸ್. ಕೃಷ್ಣ ನಿರ್ದೇಶನದ ಹೊಸ ಚಿತ್ರ ಪೈಲಾನದಲ್ಲಿ ಸುದೀಪ್ ಬಾಕ್ಸರ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ತಂಡದೊಂದಿಗೆ ಸುದೀಪ್ ಪೈಲ್ವಾನ ರೀತಿಯಲ್ಲಿ ಪೋಸ್ ನೀಡುತ್ತಿರುವುದು ಟ್ರೆಂಡ್ ಸೃಷ್ಟಿಸಿದೆ.

ಪೈಲ್ವಾನ್ ಗೆಟಪ್ ನಲ್ಲಿ ಸುದೀಪ್ ಪೋಸ್, ಹೊಸ ಟ್ರೆಂಡ್ ಸೃಷ್ಟಿ
ಪೈಲ್ವಾನ್ ಚಿತ್ರತಂಡದೊಂದಿಗೆ ನಟ ಸುದೀಪ್ ಪೋಟೋ
Published On :

ಸುದೀಪ್ ಅವರ ಹೊಸ ಸಿನಿಮಾ ಬಿಡುಗಡೆಗೂ ಮುಂಚಿತವಾಗಿ ವೀಕ್ಷರಲ್ಲಿ ಒಂದು ರೀತಿಯ ಕುತೂಹಲ  ಇದ್ದೇ ಇರುತ್ತದೆ. ಎಸ್. ಕೃಷ್ಣ ನಿರ್ದೇಶನದ ಹೊಸ ಚಿತ್ರ ಪೈಲಾನದಲ್ಲಿ ಸುದೀಪ್ ಬಾಕ್ಸರ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ತಂಡದೊಂದಿಗೆ ಸುದೀಪ್ ಪೈಲ್ವಾನ ರೀತಿಯಲ್ಲಿ ಪೋಸ್  ನೀಡುತ್ತಿರುವುದು ಟ್ರೆಂಡ್ ಸೃಷ್ಟಿಸಿದೆ.

ಎರಡು ಪೋಟೋಗಳು ನಿಮ್ಮಲ್ಲಿರುವ ಪೈಲ್ವಾನನನ್ನು ಹೊರತರುತ್ತದೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಪೈಲಾನ ಚಿತ್ರತಂಡ ಹಾಗೂ ತಂತ್ರಜ್ಞಾನರೊಂದಿಗೆ  ಸುದೀಪ್ ಪೈಲ್ವಾನ ರೀತಿಯಲ್ಲಿ ಪೋಸ್ ನೀಡುತ್ತಿದ್ದಾರೆ.

ಪ್ರತಿಯೊಬ್ಬರು ಅತ್ಯುತ್ಸಾಹದಿಂದ  ತೊಡಗಿಸಿಕೊಂಡು ಪೈಲ್ವಾನ್ ಮೊದಲ ಹಂತವನ್ನು ಅದ್ಬುತವಾಗಿ ತಯಾರಿಸಿದ್ದು, ಪ್ರತಿಯೊಬ್ಬರು ಇಷ್ಟಪಡುವಂತಿದೆ. ಎರಡನೇ ಹಂತದ ಕಡೆ ಗಮನ ಹರಿಸುತ್ತಿರುವುದಾಗಿ ಸುದೀಪ್ ಇದಕ್ಕೂ ಮುನ್ನ ಮಾಡಿದ್ದ ಟ್ವೀಟರ್ ನಲ್ಲಿ ತಿಳಿಸಿದ್ದಾರೆ.

ಚೆನ್ನೈನಲ್ಲಿನ ಚಿತ್ರೀಕರಣದ ಕೊನೆಯ ಶಾಟ್ ಇದಾಗಿದ್ದು, ಚಿತ್ರೀಕರಣ ಸ್ಥಳಕ್ಕೆ ಬಂದಿದ್ದ ಜನರು ಮುಗುಳಗೆಯೊಂದಿಗೆ ಪೋಟ್  ತೆಗೆಸಿಕೊಂಡಿದ್ದಾರೆ. ಆದರೆ, ಪೈಲ್ವಾನ ಚಿತ್ರೀಕರಣ ಸ್ಥಳಕ್ಕೆ ಬಂದವರು ಕ್ರೀಡಾಮನೋಭಾವದಿಂದ  ಪೋಸ್ ನೀಡಿದ್ದಾರೆ. ಕ್ರಿಕೆಟರ್  ಕೆ. ಸಿ. ಕಾರಿಯಪ್ಪ ಸೇರಿದಂತೆ  ಹಲವು ಮಂದಿ  ಸುದೀಪ್ ಭೇಟಿ ಮಾಡಿ ಬಾಕ್ಸರ್ ಶೈಲಿಯಲ್ಲಿ ಕುತೂಹಲದಿಂದ ಪೋಟೋ ತೆಗೆಸಿಕೊಂಡಿರುವುದಾಗಿ  ಅವರು ಹೇಳಿದ್ದಾರೆ.

Story image
 ಚೆನ್ನೈಯಿಂದ ವಾಪಾಸ್ ಬಂದಿರುವ ಚಿತ್ರೀತಂಡ ಇಂದಿನಿಂದ ಬೆಂಗಳೂರಿನಲ್ಲಿ  ಚಿತ್ರೀಕರಣ ನಡೆಸಲಿದೆ. 12 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ನಟ ಸುದೀಪ್ ಹಾಗೂ ಹಿರೋಯಿನ್ ಆಕಾಂಕ್ಷ ಸಿಂಗ್ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಜುಲೈ ತಿಂಗಳಲ್ಲಿ ಹೈದ್ರಾಬಾದ್ ನಲ್ಲಿ ನಡೆಯಲಿರುವ ಚಿತ್ರೀಕರಣದ ವೇಳೆಯಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಜೊತೆಯಾಗಲಿದ್ದಾರೆ. ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಎರಡು ಶೆಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕಾಗಿ ಮೂರು ತಿಂಗಳಿನಿಂದ ವರ್ಕ್ ಔಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.