ರಾಘವ ಲಾರೆನ್ಸ್ ಸವಾಲಿಗೆ ಹಾಟ್ ವಿಡಿಯೋ ಮೂಲಕ ಶ್ರೀರೆಡ್ಡಿ ಉತ್ತರ!
ಟಾಲಿವುಡ್ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ ಸುದ್ದಿಯಾಗಿರುವ ನಟಿ ಶ್ರೀರೆಡ್ಡಿಗೆ ನಿರ್ದೇಶಕ ರಾಘವ ಲಾರೆನ್ಸ್ ಸವಾಲ್ಲೊಂದನ್ನು ಹಾಕಿದ್ದರು...

Published On :
ಹೈದರಾಬಾದ್: ಟಾಲಿವುಡ್ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ ಸುದ್ದಿಯಾಗಿರುವ ನಟಿ ಶ್ರೀರೆಡ್ಡಿಗೆ ನಿರ್ದೇಶಕ ರಾಘವ ಲಾರೆನ್ಸ್ ಸವಾಲ್ಲೊಂದನ್ನು ಹಾಕಿದ್ದರು.
ಈ ಸವಾಲನ್ನು ಸ್ವೀಕಿಸಿದ ನಟಿ ಶ್ರೀರೆಡ್ಡಿ ಇದೀಗ ತಮ್ಮ ಫೇಸ್ ಬುಕ್ ನಲ್ಲಿ ತಮ್ಮದೊಂದು ಹಾಟ್ ವಿಡಿಯೋವನ್ನು ಹಾಕುವ ಮೂಲಕ ಗಮನ ಸೆಳೆದಿದ್ದಾರೆ.
ರಾಘವ ಲಾರೆನ್ಸ್ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಶ್ರೀರೆಡ್ಡಿಗೆ ಸವಾಲೊಂದನ್ನು ಹಾಕಿದ್ದರು. ನೀವು ನಿಜವಾಗಿಯೂ ನಟಿಯಾಗಿದ್ದರೆ, ನಿಮ್ಮಲ್ಲಿ ನಟನಾ ಕೌಶಲ್ಯವಿದ್ದರೆ, ಅದನ್ನು ಸಾಬೀತು ಪಡಿಸಿ. ನಿಮ್ಮ ಪ್ರತಿಭೆ ಮೂಲಕ ನಮ್ಮನ್ನು ಇಂಪ್ರೆಸ್ ಮಾಡಿದ್ರೆ ನನ್ನ ಮುಂದಿನ ಚಿತ್ರದಲ್ಲಿ ನಿಮಗೆ ಖಂಡಿತವಾಗಿಯೂ ಅವಕಾಶ ನೀಡುತ್ತೇನೆ ಎಂದು ಹೇಳಿದ್ದರು.
ಇದಕ್ಕೆ ಶ್ರೀರೆಡ್ಡಿ ಹಾಟ್ ವಿಡಿಯೋ ಶೇರ್ ಮಾಡಿದ್ದು ಇದರ ಜತೆಗೆ ಇದು ನನ್ನ ಸಾಮಾನ್ಯ ಪ್ರತಿಭೆ, ದಯವಿಟ್ಟು ನೋಡಿ. ನಿಮಗಾಗಿಯೇ ಇದನ್ನು ಮಾಡಿದ್ದು ಎಂದು ಬರೆದುಕೊಂಡಿದ್ದಾರೆ.
ತೆಲುಗು ಚಿತ್ರರಂಗದಲ್ಲಿನ ನಡೆಯುತ್ತಿರುವ ಕಾಸ್ಟಿಂಗ್ ಕೌಚ್(ಲೈಂಗಿಕ ಕಿರುಕುಳ) ನಿಲ್ಲಿಸಬೇಕು ಎಂದು ಒತ್ತಾಯಿಸಿ ಟಾಲಿವುಡ್ ನಟಿ ಶ್ರೀರೆಡ್ಡಿ ಅವರು ಈ ಹಿಂದೆ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಮಾಧ್ಯಮಗಳ ಮುಂದೆಯೇ ಬಟ್ಟೆ ಕಳಚಿ ಅರೆನಗ್ನ ಪ್ರತಿಭಟನೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
tollywoodಟಾಲಿವುಡ್ರಾಘವ ಲಾರೆನ್ಸ್Casting couchಕಾಸ್ಟಿಂಗ್ ಕೌಚ್Raghava LawrenceSri Reddyಶ್ರೀರೆಡ್ಡಿHot Videoಹಾಟ್ ವಿಡಿಯೋ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


