ರಶ್ಮಿಕಾ ಒಲ್ಲದ ಮನಸ್ಸಿನಿಂದ 'ಗೀತ ಗೋವಿಂದಂ' ಚಿತ್ರದ ಸಾಂಗ್ ಶೇರ್ ಮಾಡಿದ್ದು ಯಾಕೆ!
ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಡೆಸುತ್ತಿದ್ದು ಇದೀಗ ಅವರು ಅಭಿನಯದ ಗೀತ ಗೋವಿಂದಂ ಚಿತ್ರ ಬಿಡುಗಡೆ ಹಂತದಲ್ಲಿದೆ.

Published On :
ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಡೆಸುತ್ತಿದ್ದು ಇದೀಗ ಅವರು ಅಭಿನಯದ ಗೀತ ಗೋವಿಂದಂ ಚಿತ್ರ ಬಿಡುಗಡೆ ಹಂತದಲ್ಲಿದೆ.
ಇನ್ನು ಚಿತ್ರದ ಕುರಿತಾಗಿ ನಿರೀಕ್ಷೆಗಳನ್ನು ಹೆಚ್ಚಿಸಲು ಚಿತ್ರ ತಂಡ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುತ್ತಿದ್ದು ಚಿತ್ರದ ಮೊದಲ ಹಾಡು ಇಂಕೇಮ್ ಇಂಕೇಮ್ ಕಾವಾಲೇ ಸಾಂಗ್ ಈಗಾಗಲೇ ಟ್ರೆಂಡಿಂಗ್ ನಲ್ಲಿದೆ. ಇದೀಗ ಮತ್ತೊಂದು ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಇನ್ನು ಚಿತ್ರದ ವಾಟ್ ಇಸ್ ಎಫ್...ಅಮ್ಮಾಯಂಟೆ ಟಫ್ ಎರಡನೇ ಹಾಡು ಇದೀಗ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದೆ. ನಟಿ ರಶ್ಮಿಕಾ ಮಂದಣ್ಣ ಈ ಹಾಡನ್ನು ತಮ್ಮ ಟ್ವೀಟರ್ ನಲ್ಲಿ ಬೇಸರದಿಂದ ಶೇರ್ ಮಾಡಿದ್ದಾರೆ. ಹಾಗಂತಾ ರಶ್ಮಿಕಾ ನಿಜವಾಗಿಯೂ ಅಸಮಾಧಾನಗೊಂಡಿಲ್ಲ. ಬದಲಾಗಿ ಕೊಂಚ ತುಂಟತನದ ತರಲೆ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ತಮ್ಮ ಟ್ವೀಟರ್ ಖಾತೆಯಲ್ಲಿ ವಾಟ್ ಇಸ್ ಎಫ್ ಸಾಂಗ್ ರಿಲೀಸ್ ಆಗಿದೆ. ಈ ಚಿತ್ರದ ನಾಯಕಿಯಾಗಿ ನಾನು ಈ ಸಾಂಗ್ ಪ್ರಮೋಟ್ ಮಾಡುತ್ತಿದ್ದೇನೆ. ಎಲ್ಲ ಮುಗ್ಧ ಹುಡುಗರು ಈ ಸಾಂಗ್ ನೋಡಿ. ಏನ್ ಮಾಡೋಕಾಗುತ್ತೆ, ಹುಡುಗಿಯರೆಲ್ಲ ಸೇರಿ ನಾವೊಂದು ಸಾಂಗ್ ಬರೆಯೋಣ ಎಂದು ಬೇಸರದ ಚಿತ್ರಗಳೊಂದಗಿ ಪೋಸ್ಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
tollywoodಟಾಲಿವುಡ್Rashmika Mandannaರಶ್ಮಿಕಾ ಮಂದಣ್ಣVijay Devarakondaವಿಜಯ್ ದೇವರಕೊಂಡGeet Govindamಗೀತ ಗೋವಿಂದಂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


