ಜ.25 ಕ್ಕೆ ಪದ್ಮಾವತ್ ಚಿತ್ರದ ಬಿಡುಗಡೆ ಖಚಿತ
ಕೊನೆಗೂ ಪದ್ಮಾವತಿ ಚಿತ್ರದ ಬಿಡುಗಡೆಗೆ ದಿನಾಂಕ ಅಧಿಕೃತವಾಗಿದ್ದು ಜ.25 ರಂದು ಚಿತ್ರ ಬಿಡುಗಡೆಯಾಗಲಿದೆ.

Published On :
ಮುಂಬೈ: ಕೊನೆಗೂ ಪದ್ಮಾವತಿ ಚಿತ್ರದ ಬಿಡುಗಡೆಗೆ ದಿನಾಂಕ ಅಧಿಕೃತವಾಗಿದ್ದು ಜ.25 ರಂದು ಚಿತ್ರ ಬಿಡುಗಡೆಯಾಗಲಿದೆ.
ಚಿತ್ರ ತಂಡ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಶೀರ್ಷಿಕೆ ಬದಲಾವಣೆ ಸೇರಿದಂತೆ ಒಟ್ಟು 5 ಬದಲಾವಣೆಗಳನ್ನು ಮಾಡಿದ ನಂತರ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. " ಪದ್ಮಾವತ್ ನನ್ನ ಕನಸಾಗಿದ್ದು, ಈಗ ನನಸಾಗುತ್ತಿದೆ. ರಜಪೂತರ ಶೌರ್ಯ, ಬಲಿದಾನಗಳ ಕುರಿತು ಆಕರ್ಷಿತನಾಗಿದ್ದೇನೆ, ಈ ಚಿತ್ರ ರಜಪೂತರ ಶೌರ್ಯ ಬಲಿದಾನಗಳಿಗೆ ಗೌರವಾರ್ಪಣೆ ಎಂದು ನಿರ್ದೇಶಕ ಬನ್ಸಾಲಿ ಹೇಳಿದ್ದಾರೆ. ಇದೇ ವೇಳೆ ಚಿತ್ರ ಬಿಡುಗಡೆಗೆ ಬೆಂಬಲಿಸಿದ ಎಲ್ಲರಿಗೂ ಬನ್ಸಾಲಿ ಧನ್ಯವಾದ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


