ಪ್ಯಾರಿಸ್'ನಲ್ಲಿ ಸ್ವಂತ ಅಥವಾ ಬಾಡಿಗೆ ಯಾವುದೇ ಫ್ಲ್ಯಾಟ್ ಹೊಂದಿಲ್ಲ: ಮಲ್ಲಿಕಾ ಶರಾವತ್ ಸ್ಪಷ್ಟನೆ
ಪ್ಯಾರಿಸ್'ನಲ್ಲಿರುವ ಫ್ಲ್ಯಾಟ್ ನಿಂದ ಹೊರಹಾಕಲಾಗಿದೆ ಎಂಬ ವದಂತಿಗಳನ್ನು ತಳ್ಳಿಹಾಕಿರುವ ಬಾಲಿವುಡ್'ನ ಮಾದಕ ನಟಿ ಮಲ್ಲಿಕಾ ಶರಾವತ್ ಅವರು, ಪ್ಯಾರಿಸ್ ನಲ್ಲಿ ನಾನು ಯಾವುದೇ ರೀತಿಯ ಸ್ವಂತ ಅಥವಾ ಬಾಡಿಗೆಯ ಫ್ಲ್ಯಾಟ್'ನ್ನು ಹೊಂದಿಲ್ಲ ಎಂದು...

Published On :
ಮುಂಬೈ; ಪ್ಯಾರಿಸ್'ನಲ್ಲಿರುವ ಫ್ಲ್ಯಾಟ್ ನಿಂದ ಹೊರಹಾಕಲಾಗಿದೆ ಎಂಬ ವದಂತಿಗಳನ್ನು ತಳ್ಳಿಹಾಕಿರುವ ಬಾಲಿವುಡ್'ನ ಮಾದಕ ನಟಿ ಮಲ್ಲಿಕಾ ಶರಾವತ್ ಅವರು, ಪ್ಯಾರಿಸ್ ನಲ್ಲಿ ನಾನು ಯಾವುದೇ ರೀತಿಯ ಸ್ವಂತ ಅಥವಾ ಬಾಡಿಗೆಯ ಫ್ಲ್ಯಾಟ್'ನ್ನು ಹೊಂದಿಲ್ಲ ಎಂದು ಬುಧವಾರ ಸ್ಪಷ್ಟಪಡಿಸಿದ್ದಾರೆ.
ವದಂತಿ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸ್ಪಷ್ಟಪಡಿಸಿರುವ ಅವರು, ನಾನು ಈ ಹಿಂದೆ ಕೂಡ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ, ಪ್ಯಾರಿಸ್ ನಲ್ಲಿ ನಾನು ಯಾವುದೇ ರೀತಿಯ ಸ್ವಂತ ಅಥವಾ ಬಾಡಿಗೆಯ ಫ್ಲ್ಯಾಟ್'ನ್ನು ಹೊಂದಿಲ್ಲ. ಕಳೆದ 8 ತಿಂಗಳಿಂದಲೂ ನಾನು ಲಾಸ್ ಏಂಜಲೀಸ್ ಹಾಗೂ ಭಾರತದಲ್ಲಿಯೇ ಇದ್ದೇನೆಂದು ಹೇಳಿದ್ದಾರೆ.
ಪ್ಯಾರಿಸ್ ನಲ್ಲಿ ನಾನು ವಾಸಿಸುತ್ತಿಲ್ಲ, ದಯವಿಟ್ಟು ವದಂತಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಿ ಎಂದು ತಿಳಿಸಿದ್ದಾರೆ.
ಬಾಡಿಗೆ ಬಾಕಿ ಉಳಿಸಿಕೊಂಡ ಕಾರಣಕ್ಕೆ ಮಲ್ಲಿಕಾ ಶರಾವತ್'ಗೆ ಅಪಾರ್ಟ್'ಮೆಂಟ್ ತೆರವುಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು.
2017 ಜ.1ರಂದು ರೂ.4.59 ಲಕ್ಷ ಮಾಸಿಕ ಹಣಕ್ಕೆ ಅಪಾರ್ಟ್'ಮೆಂಟ್'ನ್ನು ಶರಾವತ್ ಮತ್ತು ಪತ್ನಿ ಸೈಕ್ರಿಲ್ಲೆ ಆಕ್ಸೆಫಾನ್ಸ್ ಬಾಡಿಗೆ ಪಡೆದಿದ್ದರು. ರೂ.60 ಲಕ್ಷ ಪಾವತಿಸುವಂತೆ ಡಿ.14 ರಂದು ನ್ಯಾಯಾಲಯ ಸೂಚಸಿತ್ತು. ಅಲ್ಲದೆ ಬಾಕಿ, ಹಣಕ್ಕೆ ಬದಲಾಗಿ ಮನೆಯ ಪೀಠೋಪಕರಣ ಜಪ್ತಿಗೆ ನ್ಯಾಯಾಲಯ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bollywoodಬಾಲಿವುಡ್Mallika Sherawatಮಲ್ಲಿಕಾ ಶೆರಾವತ್Parisಪ್ಯಾರಿಸ್French courtApartment Rentಫ್ರೆಂಚ್ ನ್ಯಾಯಾಲಯಆಪಾರ್ಟ್ ಮೆಂಟ್ ಬಾಡಿಗೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


