ಸಿನಿಮಾ ಸುದ್ದಿ

'ಪಡ್ಡೆಹುಲಿ'ಗಾಗಿ ಶ್ರೇಯಸ್ ಮಂಜು ಸಖತ್ ಸ್ಟಂಟ್ಸ್!

ಪಡ್ಡೆಹುಲಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಶ್ರೇಯಸ್ ಮಂಜು ಪರಿಚಯವಾಗುತ್ತಿದ್ದು, ಚಿತ್ರತಂಡ ಚಿತ್ರೀಕರಣಕ್ಕೂ ಮುನ್ನ ಪ್ರಚಾರ ಪರಿಚಯದ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಿದೆ.

'ಪಡ್ಡೆಹುಲಿ'ಗಾಗಿ ಶ್ರೇಯಸ್ ಮಂಜು ಸಖತ್ ಸ್ಟಂಟ್ಸ್!
Published On :
ಪಡ್ಡೆಹುಲಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ  ಶ್ರೇಯಸ್ ಮಂಜು ಪರಿಚಯವಾಗುತ್ತಿದ್ದು, ಚಿತ್ರತಂಡ ಚಿತ್ರೀಕರಣಕ್ಕೂ ಮುನ್ನ ಪ್ರಚಾರ ಪರಿಚಯದ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಿದೆ. 
ಸಿಟಿ ಎಕ್ಸ್ ಪ್ರೆಸ್ ಗೆ ಚಿತ್ರಗಳು ಲಭ್ಯವಾಗಿದ್ದು, ಪಡ್ಡೆ ಹುಲಿ ಚಿತ್ರಕ್ಕಾಗಿ ಶ್ರೇಯಸ್ ಮಂಜು  ಸಖತ್ ಸ್ಟಂಟ್ಸ್ ಮಾಡಿದ್ದಾರೆ. 
ಸಾಹಸಮಯ ಚಿತ್ರೀಕರಣದ ದೃಶ್ಯ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದ್ದು, ಚಿತ್ರೀಕರಣದಲ್ಲಿ ತೊಡಗಿದ್ದ ಶ್ರೇಯಸ್ ಸಮರ ಕಲೆಗಳನ್ನೂ ಕರಗತ ಮಾಡಿಕೊಂಡಿದ್ದಾರೆ. ಸಾಹಸಮಯ ಚಿತ್ರೀಕರಣದಲ್ಲಿ ಶ್ರೇಯಸ್ ಮಂಜುಗೆ ಬಾಲಿವುಡ್ ನ  ಟೈಗರ್ ಶ್ರಾಫ್ ಅವರೇ ಸ್ಪೂರ್ತಿಯಾಗಿದ್ದು" ಟೈಗರ್ ಅವರ ಆಕ್ಷನ್ ಕಲೆಗಳು ಇಷ್ಟವಾಗುತ್ತವೆ. ಆದರೆ ನನಗೆ ನನ್ನದೇ ಆದ ಛಾಪು ಮೂಡಿಸಿ ನನ್ನ ಪ್ರತಿಭೆಯ ಮೂಲಕ ಗುರುತಿಸಿಕೊಳ್ಳಬೇಕೆಂಬ ಆಸೆ ಇದೆ ಎಂದಿದ್ದಾರೆ. 
ಈ ಪ್ರೋಮೋ ಮೂಲಕ ಚಿತ್ರ ತಂಡ ನನ್ನನ್ನು ಪರಿಚಯ ಮಾಡಲಿದ್ದು ಮುಹೂರ್ತ ನಡೆದ ಮರುದಿನವೇ ಪ್ರೋಮೋ ಬಿಡುಗಡೆಯಾಗಲಿದೆ ಎಂದು ಶ್ರೇಯಸ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.