'ಟಗರು' ರಾಮನಂತೆ ಬುದ್ಧಿ ಉಪಯೋಗಿಸಿ ಜೀವನದಲ್ಲಿ ಹೋರಾಡಿ: ಶಿವರಾಜ್ ಕುಮಾರ್
ನಟ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಬಿಡುಗಡೆಗೆ ಸಿದ್ಧವಾಗಿರುವಂತೆಯೇ ಚಿತ್ರದ ಕುರಿತ ನಿರೀಕ್ಷೆಗಳು ಹೆಚ್ಚಾಗಿದ್ದು, ಚಿತ್ರದ ಬಗ್ಗೆ ಶಿವಣ್ಣ ಸಕಾರಾತ್ಮಕವಾಗಿದ್ದು, ಚಿತ್ರದ ಪ್ರತಿಯೊಂದು ಸನ್ನಿವೇಶವೂ ಪ್ರತಿಯೊಬ್ಬ ಜನಸಾಮಾನ್ಯನೊಂದಿಗೂ ಬೆರೆತುಕೊಂಡಿದೆ ಎಂದು ಹೇಳಿದ್ದಾರೆ.

Published On :
ಬೆಂಗಳೂರು: ನಟ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಬಿಡುಗಡೆಗೆ ಸಿದ್ಧವಾಗಿರುವಂತೆಯೇ ಚಿತ್ರದ ಕುರಿತ ನಿರೀಕ್ಷೆಗಳು ಹೆಚ್ಚಾಗಿದ್ದು, ಚಿತ್ರದ ಬಗ್ಗೆ ಶಿವಣ್ಣ ಸಕಾರಾತ್ಮಕವಾಗಿದ್ದು, ಚಿತ್ರದ ಪ್ರತಿಯೊಂದು ಸನ್ನಿವೇಶವೂ ಪ್ರತಿಯೊಬ್ಬ ಜನಸಾಮಾನ್ಯನೊಂದಿಗೂ ಬೆರೆತುಕೊಂಡಿದೆ ಎಂದು ಹೇಳಿದ್ದಾರೆ.
ಚಿತ್ರರಂಗದಲ್ಲಿ ನಟ ಶಿವರಾಜ್ ಕುಮಾರು 32 ವರ್ಷಗಳನ್ನು ಪೂರ್ಣಗೊಳಿಸಿದ್ದು, ಈ ಹೊತ್ತಿನಲ್ಲಿ ಬಿಡುಗಡೆಯಾಗುತ್ತಿರುವ ಟಗರು ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹೊತ್ತು ಬಂದಿದೆ. ಇದೇ ವಾರ ಚಿತ್ರ ತೆರೆ ಕಾಣುತ್ತಿದ್ದು, 55ರ ಹರೆಯದಲ್ಲೂ ಯುವಕರಿಗೆ ಸೆಡ್ಡು ಹೊಡೆದು ನಟಿಸಿರುವ ಶಿವಣ್ಣ ಸಿನಿಮಾ ಮೇಲಿನ ತಮ್ಮ ಉತ್ಸಾಹ ಕಡಿಮೆಯಾಗಿಲ್ಲ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ. ಟಗರು ಚಿತ್ರ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಸಿಟಿ ಎಕ್ಸ್ ಪ್ರೆಸ್ ನೊಂದಿಗೆ ನಟ ಶಿವಣ್ಣ ಟಗರು ಚಿತ್ರದ ಕುರಿತ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
"ಮನರಂಜನೆಗೆ ಯಾವುದೇ ವಯೋ ಮಿತಿ ಇರುವುದಿಲ್ಲ. ಚಿತ್ರರಂಗದಲ್ಲಿ ನನ್ನ ಹಿರಿತನ ಯಾವಾಗಲೂ ನನ್ನ ಜವಾಬ್ದಾರಿಯನ್ನು ಗುರುತು ಮಾಡುತ್ತಿರುತ್ತದೆ. ಜನ ಆಗಾಗ ಕೇಳುತ್ತಿರುತ್ತಾರೆ ನೀವು ಅದೆಲ್ಲಿಂದ ಎನರ್ಜಿ ಪಡೆಯುತ್ತೀರಿ ಎಂದು.. ಆಗ ನಾನು ಅಭಿಮಾನಿಗಳ ಪ್ರೀತಿ ಕಾರಣ ಎಂದು ಹೇಳುತ್ತಿರುತ್ತೇನೆ. ನಿಜಕ್ಕೂ ಈಗಲೂ ಸಿನಿಮಾ ಮೇಲಿನ ನನ್ನ ಪ್ರೀತಿಗೆ ಅಭಿಮಾನಿಗಳೇ ಕಾರಣ ಎಂದು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಶಿವರಾಜ್ ಕುಮಾರ್ ಹೇಳಿದ್ದಾರೆ.
ಇನ್ನು ಟಗರು ಚಿತ್ರದ ಕುರಿತು ಮಾತನಾಡಿದ ಶಿವರಾಜ್ ಕುಮಾರ್, ಟಗರು ಚಿತ್ರ ನಮಗೆ ಒಂದು ಸಂದೇಶ ನೀಡುತ್ತದೆ. ಟಗರುಗಳು ಹೇಗೆ ತಮ್ಮ ತಲೆಯಿಂದ ಗುದ್ದಾಡುತ್ತವೆಯೋ ಹಾಗೆಯೇ ನಾವು ನಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಮ್ಮ ಬುದ್ಧಿ ಶಕ್ತಿ ಮತ್ತು ಬಲದಿಂದ ಎದುರಿಸಬೇಕು ಎಂಬುದನ್ನು ಟಗರು ಚಿತ್ರದಲ್ಲಿ ಅತ್ಯುತ್ತಮವಾಗಿ ತೋರಿಸಲಾಗಿದೆ. ಒಂದು ಸಾಮಾನ್ಯ ಕಥೆಯನ್ನು ವಿಭಿನ್ನ ಮತ್ತು ವಿಶೇಷವಾಗಿ ಹೇಗೆ ತೋರಿಸಬಹುದು ಎಂಬುದನ್ನು ಸೂರಿ ತೋರಿಸಿಕೊಟ್ಟಿದ್ದಾರೆ. ನಾನೂ ಕೂಡ ಸೂರಿಯ ಈ ವಿಭಿನ್ನ ಪ್ರಯತ್ನಕ್ಕೆ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನೋಡಲು ಕಾತುರನಾಗಿದ್ದೇನೆ. ಪ್ರತೀಯೊಬ್ಬರೂ ಚಿತ್ರ ವೀಕ್ಷಿಸಬೇಕು ಎಂಬುದು ನನ್ನ ಭಾವನೆ. ಚಿತ್ರ ಅತ್ಯುತ್ತಮ ಎಂದು ನಾವು ಹೇಳುವುದಕ್ಕಿಂತ ಜನರೇ ಚಿತ್ರಮಂದಿರಕ್ಕೆ ಆಗಮಿಸಿ ಬಳಿಕ ಚಿತ್ರ ಉತ್ತಮವಾಗಿದ್ದರೆ ಇತರರಿಗೆ ತಿಳಿಸಬೇಕು. ನಾವು ಮಾಡುವ ಪ್ರಚಾರಕ್ಕಿಂತ ಜನರ ಪ್ರಚಾರವೇ ಚಿತ್ರದ ಭವಿಷ್ಯವನ್ನು ನಿರ್ಧರಿಸುತ್ತದೆ.
ಇದೇ ವೇಳೆ ಟಗರು ಚಿತ್ರದಲ್ಲಿ ತಮ್ಮದು ಪೊಲೀಸ್ ಆಧಿಕಾರಿಯ ಪಾತ್ರ ಎಂದು ಹೇಳಿದ ಶಿವಣ್ಣ, ಖಾಕಿ ಧರಿಸಿ ಅಭಿನಯ ಮಾಡುವುದು ಇನ್ನೂ ದೊಡ್ಡ ಸವಾಲು, ಇದೇ ಕೇವಲ ಬೆಳ್ಳಿ ತೆರೆಗೆ ಸೀಮಿತವಾಗಿದ್ದರೂ, ದೊಡ್ಡ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಎಲ್ಲಿಯವರೆಗೂ ಸಮಾಜ ಎಚ್ಚೆತ್ತುಕೊಳ್ಳುವುದಿಲ್ಲವೇ ಅಲ್ಲಿಯವರೆಗೂ ದುಷ್ಟರ ಸಮಸ್ಯೆಗಳು ಮುಂದುವರೆಯುತ್ತವೆ. ಸಮಾಜದ ಪ್ರತೀಯೊಬ್ಬ ನಾಗರೀಕನೂ ತನ್ನ ಜವಾಬ್ದಾರಿ ಅರಿತರೆ ಮಾತ್ರ ಸಮಾಜ ಬದಲಾಗುತ್ತದೆ. ತಾನು ಮಾಡುತ್ತಿರುವುದು ತಪ್ಪು ಎಂದು ಆತನಿಗೆ ಮನವರಿಕೆಯಾದಾಗ ತಪ್ಪುಗಳು ಕ್ಷೀಣಿಸುತ್ತವೆ. ಈಗೀಗ ಜನರಿಗೆ ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿದಿದ್ದರೂ ಕಾನೂನಿಂದ ತಪ್ಪಿಸಿಕೊಳ್ಳಬಹುದು ಎಂಬ ಭಾವನೆಯಿಂದ ಪದೇ ಪದೇ ತಪ್ಪುಗಳನ್ನು ಮಾಡುತ್ತಿದ್ದಾರೆ. ಇಂತಹವುಗಳಿಗೆ ಆಸ್ಪದ ನೀಡಬಾರದು. ಇದೇ ಸಂದೇಶವನ್ನು ಚಿತ್ರದಲ್ಲಿ ವಿಭಿನ್ನವಾಗಿ ತೋರಿಸಲಾಗಿದೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


