ಸಿನಿಮಾ ಸುದ್ದಿ

15 ವರ್ಷದಿಂದ ಇಂಡಸ್ಟ್ರಿಯಲ್ಲಿದ್ದೇನೆ, ಇದ್ದಕ್ಕಿದ್ದಂತೆ ಏಕೆ ಸಿನಿಮಾ ಬಿಡಲಿ: ಭಾವನಾ ಪ್ರಶ್ನೆ?

ನಟ ಹಾಗೂ ನಿರ್ಮಾಪಕರಾಗಿರುವ ನವೀನ್ ಜೊತೆ ಸಪ್ತಪದಿ ತುಳಿದಿರುವ ಭಾವನಾ ಮದುವೆ ನಂತರ ನಮ್ಮಲ್ಲಿ ಯಾವುದೇ ವ್ಯತ್ಯಾಸ ಕಾಣಿಸಿಲ್ಲ, ..

15 ವರ್ಷದಿಂದ ಇಂಡಸ್ಟ್ರಿಯಲ್ಲಿದ್ದೇನೆ, ಇದ್ದಕ್ಕಿದ್ದಂತೆ ಏಕೆ ಸಿನಿಮಾ ಬಿಡಲಿ: ಭಾವನಾ ಪ್ರಶ್ನೆ?
ಭಾವನಾ
Published On :
ಬೆಂಗಳೂರು: ಇತ್ತೀಚೆಗೆ ವಿವಾಹವಾದ ನಟಿ ಭಾವನಾ ಟಗರು ಸಿನಿಮಾದಲ್ಲಿ ನಟಿಸಿದ್ದು, ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ನಟ ಹಾಗೂ ನಿರ್ಮಾಪಕರಾಗಿರುವ ನವೀನ್ ಜೊತೆ ಸಪ್ತಪದಿ ತುಳಿದಿರುವ ಭಾವನಾ ಮದುವೆ ನಂತರ ನಮ್ಮಲ್ಲಿ ಯಾವುದೇ ವ್ಯತ್ಯಾಸ ಕಾಣಿಸಿಲ್ಲ, ನಾವಿಬ್ಬರೂ ಕಳೆದ ಆರು ವರ್ಷಗಳಿಂದಲೂ ಹೀಗಿಯೇ ಇದ್ದೇವೆ ಎಂದು ಹೇಳಿದ್ದಾರೆ. ಟಗರು ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಭಾವನಾ ತನ್ನ ವಿವಾಹ ಹಾಗೂ 15 ವರ್ಷದ ವೃತ್ತಿ ಬದುಕು ಮತ್ತು ಟಗರು ಸಿನಿಮಾ ಬಗ್ಗೆ ತಮ್ಮ ಅನುಭವನಗಳನ್ನು ಹಂಚಿಕೊಂಡಿದ್ದಾರೆ.
ನಿರ್ದೇಶಕ ಸೂರಿ ಜೊತೆ ಭಾವನಾದ್ದಿ ಇದು ಎರಡನೇ ಸಿನಿಮಾ, ಈ ಮೊದಲು 8 ವರ್ಷಗಳ ಹಿಂದೆ ಸೂರಿ ನಿರ್ದೇಶನದ ಜಾಕಿ ಸಿನಿಮಾದಲ್ಲಿ ಪುನೀತ್ ಜೊತೆ ನಟಿಸಿದ್ದರು.  ಇದೇ ಮೊದಲ ಬಾರಿ ಶಿವರಾಜ್ ಕುಮಾರ್ ಜೊತೆ ನಟಿಸಿದ್ದಾರೆ.ಕಥೆಯ ಆಯ್ಕೆಯಲ್ಲಿ ತಾನು ತುಂಬಾ ಚ್ಯೂಸಿಯಾಗಿದ್ದು, ವರ್ಷದಲ್ಲಿ ಒಂದು ಅಥವಾ ಎರಡು ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದಾರೆ.
ಟಗರು ಸಿನಿಮಾದಲ್ಲಿ ನಟಿಸುವಂತೆ ಸೂರಿ ಕೇಳಿದಾಗ ಹಿಂದೆ-ಮುಂದೆ ಯೋಚಿಸದೇ ಪಾತ್ರಕ್ಕೆ ಒಪ್ಪಿಕೊಂಡೆ. 8 ವರ್ಷಗಳ ನಂತರ ಸೂರಿ ಜೊತೆ ಮತ್ತೆ ಕೆಲಸ ಮಾಡುತ್ತಿದ್ದು, ಅವರಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಆದರೆ  ನಿರ್ದೇಶನದ ಶೈಲಿಯಲ್ಲಿ ತಾಂತ್ರಿಕವಾಗಿ ಬದಲಾವಣೆಯಾಗಿದೆ ಎಂದು ಹೇಳಿದ್ದಾರೆ. ಕನ್ನಡದ ಹಿಟ್ ನಿರ್ದೇಶಕ ಎಂದು ಗುರುತಿಸಿಕೊಂಡಿದ್ದರು ಅವರ ಸರಳತೆ ಎಲ್ಲರಿಗೂ ಮೆಚ್ಚುಗೆಯಾಗಿದೆ.
ಕನ್ನಡದಲ್ಲಿ ಪುನೀತ್, ಸುದೀಪ್, ಗಣೇಶ್ ಹಾಗೂ ಶಿವರಾಜ್ ಕುಮಾರ್ ರಂತ ಸ್ಟಾರ್ ನಟರುಗಳ ಜೊತೆ ಭಾವನಾ ನಟಿಸಿದ್ದಾರೆ.ಟಗರು ಸಿನಿಮಾದಲ್ಲಿ ಭಾವನಾ ದಂತವೈದ್ಯೆ ಪಾತ್ರದಲ್ಲಿ ನಟಿಸಿದ್ದು, ಮಾನ್ವಿತಾ ಹರೀಶ್ ಆಕೆಯ ಸಹೋದರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ವಿವಾಹದ ನಂತರ ನಾಯಕಿ ನಟಿಯರು ಏಕೆ ವೃತ್ತಿ ಜೀವನ ತೊರೆಯಬೇಕು ಎಂಬುದು ನನಗೆ ಅರ್ಥವಾಗುತ್ತಿಲ್ಲ, ನಾಯಕಿಯರಿಗೆ ಮಾತ್ರ ಈ ಪ್ರಶ್ನೆ ಕೇಳಲಾಗುತ್ತದೆ. ಯಾವುದೇ ನಾಯಕರು ವಿವಾಹದ ನಂತರ ಅವರನ್ನು ವೃತ್ತಿ ಜೀವನ ತೊರೆಯುವಿರಾ ಎಂದು ಏಕೆ ಕೇಳುವುದಿಲ್ಲ ಎಂದು ಆಶ್ಚರ್ಯ ವ್ಯಕ್ತ ಪಡಿಸಿದ ಭಾವನಾ, ಮದುವೆ' ಯಾವುದೇ ನಾಯಕಿಯ ವೃತ್ತಿ ಜೀವನದ ಅಂತ್ಯವಲ್ಲ ಎಂದು ಹೇಳಿದ್ದಾರೆ.
ತಮ್ಮ ಪತಿ ನವೀನ್ ಗೆ ಸಿನಿಮಾ ರಂಗದ ಪರಿಚಯವಿದೆ. ಹೀಗಾಗಿ ಅವರಿಗೆ ನಾನು ಮನೆಯಲ್ಲಿ ಕುಳಿತು ಕೊಳ್ಳುವುದು ಇಷ್ಟವಿಲ್ಲ, ಸಿನಮಾದಲ್ಲಿ ನಟನೆ ಮುಂದುವರಿಸುವಂತೆ ಹೇಳಿದ್ದಾರೆ,.ಕಳೆದ 15 ವರ್ಷಗಳಿಂದ ನಾನು ಸಿನಿಮಾ ಇಂಡಸ್ಟ್ರಿಯಲ್ಲಿದ್ದೇನೆ,  ಇದ್ದಕ್ಕಿದ್ದಂತೆ  ನಾನು ಏಕೆ ಸಿನಿಮಾ ಬಿಡಬೇಕು? ಒಂದರ ಹಿಂದೆ ಒಂದು ಸಿನಿಮಾಗಳಿಗೆ ಸಹಿ ಮಾಡುವ ನಟಿ ನಾನಲ್ಲ, ಪ್ರತಿಯೊಂದು ಸಿನಿಮಾಗೆ ಎರಡು ಮೂರು ತಿಂಗಳ ಗ್ಯಾಪ್ ಇರುತ್ತದೆ, ಈ ವೇಳೆ ನಾನು ನನ್ನ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತೇನೆ, ಪುಸ್ತಕ ಓದುತ್ತೇನೆ ಎಂದು ಹೇಳಿದ್ದಾರೆ,.
ನನಗೆ ಆಫರ್ ಗಳು ಬಂದಾಗ ನವೀನ್ ನನಗೆ ಕಥೆ ಇಷ್ಟವಾಯಿತೆ ಎಂದು ಕೇಳುತ್ತಾರೆ, ಹೀಗಾಗಿ ನಾನು ಇನ್ಸ್ ಪೆಕ್ಟರ್ ವಿಕ್ರಮ್  ಚಿತ್ರದಲ್ಲಿ ನಟಿಸಲು ಒಪ್ಪಿದೆ ಎಂದು ಹೇಳಿದ್ದಾರೆ. ಉತ್ತಕ ಕಥೆಗಳಿರುವ ಚಿತ್ರಕ್ಕೆ ಅವಕಾಶ ಬಂದರೇ ಖಂಡಿತ ನಾನು ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
15 ವರ್ಷಗಳ ವೃತ್ತಿ ಜೀವನದಲ್ಲಿ 4 ಭಾಷೆಗಳಲ್ಲಿ ಸುಮಾರು 80 ಸಿನಿಮಾಗಳಲ್ಲಿ ನಟಿಸಿರುವ ಭಾವನಾ ಕ್ಯಾಮೆರಾ ಮುಂದೆ ಸರಾಗವಾಗಿ ಅಭಿನಯಿಸುವ ತಮ್ಮ ಕಲೆಯನ್ನು ಪ್ರೀತಿಸುತ್ತಾರೆ. ಬಾಲ್ಯದಿಂದಲೂ ನನಗೆ ನಟಿಯಾಗಬೇಕೆಂಬ ಮಹಾದಾಸೆಯಿತ್ತು. ಇದನ್ನು ನನ್ನ ಪೋಷಕರ ಮುಂದೆ ಹೇಳುತ್ತಿದ್ದೆ, ಈ ಹಂಬಲವೇ ನಾನು ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾ ಪ್ರೀತಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಮೊದಲನೇ ಸಿನಿಮಾ ಮಾಡಿದಾಗ ನನಗೆ 15ನೇ ವಯಸ್ಸು, ಆಗ ತಾನೇ ಶಾಲಾಶಿಕ್ಷಣ ಮುಗಿಸಿದ್ದೆ, ನನಗೆ ಹಲವು ಕನಸಿನ ಪಾತ್ರಗಳನ್ನು ಮಾಡಬೇಕೆಂಬ ಬಯಕೆಯಿದೆ. ಒಮ್ಮನಕುಟ್ಟುಮ್ ನಲ್ಲಿ ಸಾಹಸಿ ಪಾತ್ರ ನನಗೆ ಖುಷಿ ತಂದಿದೆ. ಅದರಲ್ಲಿರುವ ಪಲ್ಲವಿ ಪಾತ್ರ ವಿಚಿತ್ರವಾದದ್ದು,  ಮತ್ತೆ ಅಂಥಹ ಪಾತ್ರಗಳಲ್ಲಿ ನಟಿಸುವ ಅವಕಾಶ ಬರುತ್ತದೆ ಎಂಬ ನಂಬಿಕೆಯಲ್ಲಿರುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.