ಸಿನಿಮಾ ಸುದ್ದಿ

'ಒರು ಅಡಾರ್ ಲವ್' ಚಿತ್ರದ ಹಾಡಿನಲ್ಲಿ ಆಕ್ಷೇಪಾರ್ಹ ವಿಚಾರಗಳಿಲ್ಲ; ನಿರ್ದೇಶಕ ಒಮರ್ ಲುಲು

ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಟಿ ಪ್ರಿಯಾ ನಟಿಸಿರುವ ಒರು ಅಡಾರ್ ಲವ್'ನ ಮಾಣಿಕ್ಯ ಮಲರಯ ಪೂವಿ ಹಾಡಿನಲ್ಲಿ ಯಾವುದೇ ರೀತಿಯ ಆಕ್ಷೇಪಾರ್ಹ ವಿಷಯಗಳಿಲ್ಲ ಎಂದು ಚಿತ್ರದ ನಿರ್ದೇಶಕ ಒಮರ್ ಲುಲು ಅವರು ಬುಧವಾರ ಹೇಳಿದ್ದಾರೆ...

'ಒರು ಅಡಾರ್ ಲವ್' ಚಿತ್ರದ ಹಾಡಿನಲ್ಲಿ ಆಕ್ಷೇಪಾರ್ಹ ವಿಚಾರಗಳಿಲ್ಲ; ನಿರ್ದೇಶಕ ಒಮರ್ ಲುಲು
ಒರು ಅಡಾರ್ ಲವ್ ಚಿತ್ರದ ನಿರ್ದೇಶಕ ಒಮರ್ ಲುಲು
Published On :
ತಿರುವನಂತಪುರ: ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಟಿ ಪ್ರಿಯಾ ನಟಿಸಿರುವ ಒರು ಅಡಾರ್ ಲವ್'ನ ಮಾಣಿಕ್ಯ ಮಲರಯ ಪೂವಿ ಹಾಡಿನಲ್ಲಿ ಯಾವುದೇ ರೀತಿಯ ಆಕ್ಷೇಪಾರ್ಹ ವಿಷಯಗಳಿಲ್ಲ ಎಂದು ಚಿತ್ರದ ನಿರ್ದೇಶಕ ಒಮರ್ ಲುಲು ಅವರು ಬುಧವಾರ ಹೇಳಿದ್ದಾರೆ. 
ಒರು ಅಡಾರ್ ಲವ್' ಚಿತ್ರದ ಮಾಣಿಕ್ಯ ಮಲರಯ ಪೂವಿ ಹಾಡಿನಲ್ಲಿ ಮುಸ್ಲಿಂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅಲ್ಲದೆ, ತೆಲಂಗಾಣ ರಾಜ್ಯದಲ್ಲಿ ಚಿತ್ರದ ವಿರುದ್ಧ ದೂರು ಕೂಡ ದಾಖಲಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಒಮರ್ ಲುಲು ಅವರು, ಮುಸ್ಲಿಮರು ಕೇರಳದ ಭಾಗವಾಗಿದ್ದು, ಹಲವು ವರ್ಷಗಳಿಂದಲೂ ಈ ಹಾಡನ್ನು ಹಾಡುತ್ತಿದ್ದಾರೆ. ಸಿಎಂಎ ಜಬ್ಬರ್ ಅವರು ಬರೆದಿರುವ ಈ ಹಾಡನ್ನು ಮದುವೆ ಸಮಾರಂಭಗಳು ಹಾಗೂ ಉತ್ತರ ಕೇರಳದ ಹಲವು ಭಾಗಗಳಲ್ಲಿ ಹಾಡುತ್ತಿದ್ದಾರೆ. 1978ರಿಂದಲೂ ಮಲಬಾರ್ ಮುಸ್ಲಿಮರು ಈ ಹಾಡನ್ನು ಹಾಡುತ್ತಿದ್ದಾರೆ. ಆಗೆಲ್ಲಾ ಇದು ಆಕ್ಷೇಪಾರ್ಹವಾಗಿರಲಿಲ್ಲ ಎಂದಾದ ಮೇಲೆ ಈಗಾಕೆ ಆಕ್ಷೇಪಾರ್ಹವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. 
ಅಕ್ಷೇಪಾರ್ಹ ವಿಚಾರಗಳಿರುವುದೇ ಆದರೆ, ಸೆನ್ಸಾರ್ ಮಂಡಳಿ ಈ ಕುರಿತು ನಿರ್ಧಾರ ಕೈಗೊಳ್ಳಲಿದೆ. ಹಾಡಿನಲ್ಲಿ ನಾವು ಸಂಗೀತವನ್ನಷ್ಟೇ ಬದಲಾಯಿಸಿದ್ದೇವೆ, ಸಾಹಿತ್ಯವನ್ನಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.