ಸಿನಿಮಾ ಸುದ್ದಿ

ಬಿಡುಗಡೆಯಾದ ಮಾರನೇ ದಿನವೇ 'ಕೆಜಿಎಫ್' ಪೂರ್ತಿ ಚಿತ್ರ ಲೀಕ್!

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತೀ ದೊಡ್ಡ ಪ್ರಮಾಣದ ಹಿಟ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಯಶ್ ನಟನೆಯ ಕೆಜಿಎಫ್ ಚಿತ್ರ ಆನ್ ಲೈನ್ ನಲ್ಲಿ ಸಂಪೂರ್ಣ ಪ್ರಮಾಣದಲ್ಲಿ ಲೀಕ್ ಆಗಿದೆ.

ಬಿಡುಗಡೆಯಾದ ಮಾರನೇ ದಿನವೇ 'ಕೆಜಿಎಫ್' ಪೂರ್ತಿ ಚಿತ್ರ ಲೀಕ್!
ಆನ್ ಲೈನ್ ಕೆಜಿಎಫ್ ಚಿತ್ರ ಲೀಕ್
Published On :
ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತೀ ದೊಡ್ಡ ಪ್ರಮಾಣದ ಹಿಟ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಯಶ್ ನಟನೆಯ ಕೆಜಿಎಫ್ ಚಿತ್ರ ಆನ್ ಲೈನ್ ನಲ್ಲಿ ಸಂಪೂರ್ಣ ಪ್ರಮಾಣದಲ್ಲಿ ಲೀಕ್ ಆಗಿದೆ.
ಆನ್ ಲೈನ್ ಮೂವಿ ಜಾಲತಾಣಗಳಲ್ಲಿ ಚಿತ್ರ ಲೀಕ್ ಆಗಿದ್ದು, ಬಿಡುಗಡೆಯಾದ ದಿನವೇ ಥಿಯೇಟರ್ ನಲ್ಲಿ ಕಿಡಿಗೇಡಿಗಳು ಚಿತ್ರವನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಲೀಕ್ ಮಾಡಿದ್ದಾರೆ. ಪ್ರಸ್ತುತ ದೊರೆತಿರುಲವ ವರದಿಗಳ ಪ್ರಕಾರ ಕೆಜಿಎಫ್ ಚಿತ್ರದ ತೆಲುಗು ಮತ್ತು ಹಿಂದಿ ಅತರಣಿಕೆಯ ಚಿತ್ರಗಳು ಲೀಕ್ ಆಗಿವೆ.
ಮೂವೀಜ್ ರೂಲ್ಸ್ ಎಂಬ ಮೂವಿ ವೆಬ್ ಸೈಟ್ ನಲ್ಲಿ ಕೆಜಿಎಫ್ ಚಿತ್ರದ ಪೂರ್ತಿ ವಿಡಿಯೋ ಲಿಂಕ್ ಅಪ್ಲೋಡ್ ಆಗಿದೆ. ಕೆಜಿಎಫ್ ಬಿಡುಗಡೆಯಾದ ದಿನವೇ ಬಿಡುಗಡೆಯಾಗಿದ್ದ ತೆಲುಗಿನ ಅಂತರಿಕ್ಷಂ ಮತ್ತು ಪಡೀ ಪಡೀ ಲೇಚೆ ಮನಸು ಚಿತ್ರಗಳೂ ಕೂಡ ಲೀಕ್ ಆಗಿವೆ. ತಮಿಳಿನಲ್ಲಿ ಧನುಷ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಮಾರಿ-2 ಕೂಡ ಲೀಕ್ ಆಗಿವೆ.
Story image
ಕೇವಲ ಕೆಜಿಎಫ್ ಮಾತ್ರವಲ್ಲದೇ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಜೀರೋ ಕೂಡ ಲೀಕ್ ಆಗಿದ್ದು, ಈ ಚಿತ್ರ ವಿಡಿಯೋ ಲಿಂಕ್ ಕೂಡ ದೊರೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.