ಸಿನಿಮಾ ಸುದ್ದಿ

ಶಾರೂಖ್ ಅಭಿನಯದ ' ಝೀರೋ ' ಮೆಚ್ಚಿದ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ

ಇತ್ತೀಚಿಗೆ ಬಿಡುಗಡೆಗೊಂಡ ಶಾರೂಖ್ ಖಾನ್ ಅಭಿನಯದ ' ಝೀರೋ ಚಿತ್ರ ನಿರೀಕ್ಷಿತ ರೀತಿಯಲ್ಲಿ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗದಿದ್ದರೂ ಈ ಚಿತ್ರದ ಬಗ್ಗೆ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಪಾಕಿಸ್ತಾನದ ಮಲಾಲ ಯೂಸಫ್ ಝಾಯಿ ಮೆಚ್ಚಿಕೊಂಡಿದ್ದಾರೆ.

ಶಾರೂಖ್  ಅಭಿನಯದ ' ಝೀರೋ ' ಮೆಚ್ಚಿದ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ
ಸಂಗ್ರಹ ಚಿತ್ರ
Published On :

ಮುಂಬೈ: ಇತ್ತೀಚಿಗೆ ಬಿಡುಗಡೆಗೊಂಡ ಶಾರೂಖ್ ಖಾನ್ ಅಭಿನಯದ ' ಝೀರೋ ಚಿತ್ರ  ನಿರೀಕ್ಷಿತ ರೀತಿಯಲ್ಲಿ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗದಿದ್ದರೂ ಈ ಚಿತ್ರದ ಬಗ್ಗೆ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಪಾಕಿಸ್ತಾನದ ಮಲಾಲ ಯೂಸಫ್ ಝಾಯಿ ಮೆಚ್ಚಿಕೊಂಡಿದ್ದಾರೆ.

ಆನಂದ್ ಎಲ್ ರಾಯ್ ನಿರ್ದೇಶನದ ಶಾರೂಖ್ ಅಭಿನಯದ ಚಿತ್ರವನ್ನು  ಕುಟುಂಬದೊಂದಿಗೆ ವೀಕ್ಷಿಸಿರುವುದಾಗಿ  ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ವಿಡಿಯೋದಲ್ಲಿ ಮಲಾಲ ಹೇಳಿಕೊಂಡಿದ್ದಾರೆ.

ಹಲೋ ಶಾರೂಖ್ , ನಿಮ್ಮ ಸಿನಿಮಾ ತುಂಬಾ ಚೆನ್ನಾಗಿದೆ. ಇದು ತುಂಬಾ ಮನೋರಂಜನಾತ್ಮಕವಾಗಿದ್ದು, ಇಡೀ ಕುಟುಂಬವೇ ಮೆಚ್ಚಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಲಾಲಾ ಈ ಹಿಂದೆ ಶಾರೂಖ್ ಖಾನ್ ಅವರನ್ನು  ಆಕ್ಸ್ ಪರ್ಡ್ ವಿಶ್ವವಿದ್ಯಾಲಯಕ್ಕೆ ಬಂದು ಉಪನ್ಯಾಸ ಮಾಡುವಂತೆ ಕೋರಿಕೊಂಡಿದ್ದರು. ತಾವೂ ಶಾರೂಖ್ ಖಾನ್ ಅವರ ಅಭಿಮಾನಿಯಾಗಿದ್ದು, ಒಂದಲ್ಲಾ ಒಂದು ದಿನ ಭೇಟಿಯಾಗುವುದಾಗಿ ಮಲಾಲಾ ಟ್ವೀಟರ್ ನಲ್ಲಿ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.