ಸಿನಿಮಾ ಸುದ್ದಿ

ಆಕ್ಸಫರ್ಡ್ ಡಿಕ್ಷನರಿಯನ್ನೂ ಮೀರಿಸಿದ ಇಂಗ್ಲೀಷ್: ನಟಿ ಮಾನ್ವಿತಾ ಟ್ವೀಟ್ ಗೆ ತಲೆಕೆಡಿಸಿಕೊಂಡ ಸುದೀಪ್

ನಿರ್ದೇಶಕ ಅನೂಪ್ ಭಂಡಾರಿ ಮತ್ತು ನಟ ಕಿಚ್ಚಾ ಸುದೀಪ್ ಜೋಡಿಯ 'ಬಿಲ್ಲ ರಂಗ ಬಾಷಾ' ಚಿತ್ರದ ಪೋಸ್ಟರ್ ಬಿಡುಗಡೆಯಾದ ಬೆನ್ನಲ್ಲೇ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅಂತೆಯೇ ಚಿತ್ರಕ್ಕೆ ಸಂಬಂಧಿಸಿದಂತೆ ನಟಿ ಮಾನ್ವಿತಾ ಮಾಡಿರುವ ಟ್ವೀಟ್ ಕೂಡ ಸುದೀಪ್ ಅವರ ತಲೆ ಕೆಡಿಸಿದೆ.

ಆಕ್ಸಫರ್ಡ್ ಡಿಕ್ಷನರಿಯನ್ನೂ ಮೀರಿಸಿದ ಇಂಗ್ಲೀಷ್: ನಟಿ ಮಾನ್ವಿತಾ ಟ್ವೀಟ್ ಗೆ ತಲೆಕೆಡಿಸಿಕೊಂಡ ಸುದೀಪ್
ಸಂಗ್ರಹ ಚಿತ್ರ
Published On :
ಬೆಂಗಳೂರು: ನಿರ್ದೇಶಕ ಅನೂಪ್ ಭಂಡಾರಿ ಮತ್ತು ನಟ ಕಿಚ್ಚಾ ಸುದೀಪ್ ಜೋಡಿಯ 'ಬಿಲ್ಲ ರಂಗ ಬಾಷಾ' ಚಿತ್ರದ ಪೋಸ್ಟರ್ ಬಿಡುಗಡೆಯಾದ ಬೆನ್ನಲ್ಲೇ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅಂತೆಯೇ ಚಿತ್ರಕ್ಕೆ ಸಂಬಂಧಿಸಿದಂತೆ ನಟಿ ಮಾನ್ವಿತಾ ಮಾಡಿರುವ ಟ್ವೀಟ್ ಕೂಡ ಸುದೀಪ್ ಅವರ ತಲೆ ಕೆಡಿಸಿದೆ.
ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಅವರು 'ಬಿಲ್ಲ ರಂಗ ಬಾಷಾ' ಸಿನಿಮಾ ಮಾಡುತ್ತಿದ್ದು, ಈ ಸಿನಿಮಾವನ್ನು ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮತ್ತು ಕೆಆರ್ ಕೆ ಶೋರೀಲ್ ನಿರ್ಮಾಣ ಮಾಡುತ್ತಿದೆ. ಇದಕ್ಕೆ ನಿಮ್ಮ ಆಶೀರ್ವಾದ ಮತ್ತು ಬೆಂಬಲ ಬೇಕು ಎಂದು ಟ್ವೀಟ್ ಮಾಡಿದ್ದರು.
ಅನೂಪ್ ಭಂಡಾರಿ ಮಾಡಿದ್ದ ಟ್ವೀಟ್ ಗೆ ನಟಿ ಮಾನ್ವಿತಾ ಅವರು, 'ಸೂಪರ್-ಇನ್-ದಿ-ಮಾರ್ಕೆಟ್-ಇನ್-ದಿ-ಮೆಜೆಸ್ಟಿಕ್' ಎಂದು ರೀಟ್ವೀಟ್ ಮಾಡಿದ್ದರು. ಆದರೆ ಮಾನ್ವಿತಾ ಅವರು ಮಾಡಿದ್ದ ಟ್ವೀಟ್ ಸುದೀಪ್ ಅವರಿಗೆ ಅರ್ಥವಾಗಿಲ್ಲ. ಹೀಗಾಗಿ ಮಾನ್ವಿತಾ ಅವರಿಗೆ ಟ್ವೀಟ್ ಮಾಡಿ ಅದರ ಅರ್ಥವನ್ನು ತಿಳಿಸಿ ಎಂದು ಸುದೀಪ್ ಅವರು ಕೇಳಿದ್ದಾರೆ.
ನಟಿ ಮಾನ್ವಿತಾ ಮಾಡಿದ್ದ ಟ್ವೀಟ್ ಅರ್ಥವೇನೆಂದು ತಿಳಯದೆ ಕನ್ಫ್ಯೂಸ್ ಆದ ಕಿಚ್ಚ ಸುದೀಪ್, ನೀವೇ ಅರ್ಥ ತಿಳಿಸಿ ಎಂದು ಕೇಳಿದ್ದಾರೆ. ನಟಿ ಮಾನ್ವಿತಾ ಅವರು ಮಾಡಿದ್ದ ಟ್ವೀಟ್ ಅನ್ನು ಅವರಿಗೆ ಟ್ಯಾಗ್ ಮಾಡಿ ನಟ ಸುದೀಪ್ ಅವರು, Oxford dictionary ಬಿಟ್ಟು ಇಂಗ್ಲೀಷ್ ನಲ್ಲಿ ದಯವಿಟ್ಟು ಇದರ ಅರ್ಥವನ್ನು ವಿವರಿಸಿ ಎಂದು ಹಾಸ್ಯಮಯವಾಗಿ ರೀಟ್ವೀಟ್ ಮಾಡಿದ್ದಾರೆ.
ಸುದೀಪ್ ಕನ್ ಫ್ಯೂಸ್ ಟ್ವೀಟ್ ಗೆ ನಟಿ ಮಾನ್ವಿತಾ ಕೂಡ ತಮಾಷೆಯಾಗಿ ನಕ್ಕಿದ್ದಾರೆ.
ಇದೇ ವೇಳೆ ನಟ ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೆ ನಟಿ ಮಾನ್ವಿತಾ ಶುಭ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.