'ನನಗೆ ಚೈಲ್ಡ್ ಅನ್ನಬೇಡಿ'; ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ತಾಕೀತು ಮಾಡಿದ್ದೇಕೆ?
ರಕ್ಷಿತ್ ಶೆಟ್ಟಿ ಜೊತೆ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ರಶ್ಮಿಕಾ ಮಂದಣ್ಣಗೆ ತೆಲುಗಿನ ಗೀತಾ ಗೋವಿಂದಂ ಚಿತ್ರ ಸೂಪರ್ ಹಿಟ್ ಆದ...

Published On :
ರಕ್ಷಿತ್ ಶೆಟ್ಟಿ ಜೊತೆ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ರಶ್ಮಿಕಾ ಮಂದಣ್ಣಗೆ ತೆಲುಗಿನ ಗೀತಾ ಗೋವಿಂದಂ ಚಿತ್ರ ಸೂಪರ್ ಹಿಟ್ ಆದ ನಂತರ ಟಾಲಿವುಡ್ ನಲ್ಲಿ ಒಂದರ ಹಿಂದೊಂದು ಭರ್ಜರಿ ಆಫರ್ ಗಳು ಬರುತ್ತಿದ್ದು ಇದೀಗ ವಿಜಯ್ ದೇವರಕೊಂಡ ಜತೆ ಮತ್ತೊಂದು ಚಿತ್ರಕ್ಕೆ ಜೊತೆಯಾಗುತ್ತಿದ್ದಾರೆ.
ಡಿಯರ್ ಕಾಮ್ರೇಡ್ ಚಿತ್ರದ ಮೂಲಕ ಈ ಹಾಟ್ ಪೇರ್ ಮತ್ತೊಮ್ಮೆ ಬೆಳ್ಳಿ ಪರದೆ ಮೇಲೆ ಮೋಡಿ ಮಾಡಲಿದೆ. ಇನ್ನು 2018ರಲ್ಲಿ ಗೂಗಲ್ ನಲ್ಲಿ ಅತ್ಯಂತ ಹೆಚ್ಚು ಹುಡುಕಲ್ಪಟ್ಟ ದಕ್ಷಿಣ ಭಾರತೀಯ ನಟಿಯರಲ್ಲಿ ರಶ್ಮಿಕಾ ಮಂದಣ್ಣ 5ನೇ ಸ್ಥಾನ ಪಡೆದುಕೊಂಡಿದ್ದರು. ಈ ವಿಷಯ ತಿಳಿದ ವಿಜಯ್ ದೇವರಕೊಂಡ ರಶ್ಮಿಕಾಗೆ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.
ಹಾಸ್ಯಾತ್ಮಕ ಟ್ವೀಟ್ ಮಾಡಿದ್ದ ವಿಜಯ್ ಡಿಯರ್ ಕಾಮ್ರೇಡ್ ಚಿತ್ರದ ಸ್ಟಿಲ್ ಹಾಕಿ, ಡಿಯರ್ ಕಾಮ್ರೇಡಿ ರಶ್ಮಿಕಾ, ಗೂಗಲ್ ನಲ್ಲಿ ಅತಿಹೆಚ್ಚು ಸರ್ಚ್ ಮಾಡಲ್ಪಟ್ಟ ದಕ್ಷಿಣ ಭಾರತದ ಸ್ಟಾರ್ಸ್ ಗಳಲ್ಲಿ 5ನೇ ಸ್ಥಾನ ಪಡೆದುಕೊಂಡಿರುವ 'ಚೈಲ್ಡ್ ನಟಿಗೆ ಕಂಗ್ರಾಟ್ಸ್'. ಇನ್ನು ಈ ವರ್ಷ ಗೂಗಲ್ ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಚಿತ್ರ, ಅತಿ ಹೆಚ್ಚು ಹುಡುಕಲ್ಪಟ್ಟ 1ನೇ, 4ನೇ ಮತ್ತು 9ನೇ ಹಾಡುಗಳು ಕೂಡ ನಿಮ್ಮದೇ. ಇದೇ ಖುಷಿಯಲ್ಲಿ ನಮಗೆ ಪಾರ್ಟಿ ಬೇಕು. ಇಡೀ ಗೂಗಲ್ ತುಂಬ ನೀವೇ ಆವರಿಸಿಕೊಂಡಿದ್ದೀರಿ! ಎಂದು ವಿಜಯ್ ರಶ್ಮಿಕಾ ಅವರ ಕಾಲೆಳೆದಿದ್ದರು.
ಇದಕ್ಕೆ ರಶ್ಮಿಕಾ ಡಿಯರ್ ಕಾಮ್ರೇಡ್ ವಿಜಯ್ ದೇವರಕೊಂಡ, ಮಿಸ್ಟರ್ ಫಿಲಂ ಫೇರ್-ರೌಡಿವೇರ್ ಖ್ಯಾತಿ ಪಡೆದಿರುವ ವಿಜಯ್ ಅವರೇ ನನಗೆ ಯಾವಾಗ ಪಾರ್ಟಿ ಕೊಡುತ್ತೀರ? ಗೂಗಲ್ ನಲ್ಲಿ ಅತಿಹೆಚ್ಚು ಸರ್ಚ್ ಮಾಡಿರುವ ದಕ್ಷಿಣ ಭಾರತದ ನಟರಲ್ಲಿ 4ನೇ ಸ್ಥಾನ, ಅತಿಹೆಚ್ಚು ಗೂಗಲ್ ನಲ್ಲಿ ಹುಡುಕಲ್ಪಟ್ಟ ಚಿತ್ರ ಹೀರೋ ಆಗಿದ್ದೀರಿ. ಅತಿ ಹೆಚ್ಚು ಹುಡುಕಲ್ಪಟ್ಟ 2ನೇ ಮತ್ತು 4ನೇ ಹಾಡುಗಳು ಕೂಡ ನಿಮ್ಮದೇ. ಹಾಗೇ ಚುನಾವಣಾ ಫಲಿತಾಂಶ ಬಂದ ನಂತರ ಇಡೀ ಚಿತ್ರದ ಸೆಟ್ ಗೆ ಪಾರ್ಟಿ ಕೊಡಿಸುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಿರಿ..ಅದೆಲ್ಲ ಏನಾಯ್ತು? ಹಾಗೇ ಇನ್ನೊಂದು ಮಾತು...ನನ್ನನ್ನು ಚೈಲ್ಡ್ ಎಂದು ಕರೆಯಬೇಡಿ ಎಂದು ಟ್ವೀಟ್ ಮಾಡಿದ್ದಾರೆ.
Wait. Wait. Wait. The party is on us Dear Comrades
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
tollywoodಟಾಲಿವುಡ್Twitterಟ್ವೀಟರ್Rashmika Mandannaರಶ್ಮಿಕಾ ಮಂದಣ್ಣVijay Devarakondaವಿಜಯ್ ದೇವರಕೊಂಡDear Comradeಡಿಯರ್ ಕಾಮ್ರೇಡ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


