ನಾನು ಆತನೊಂದಿಗೆ ಹೆಚ್ಚು ಡೇಟಿಂಗ್ ಮಾಡಿಲ್ಲ: ನಟಿ ರಶ್ಮಿಕಾ ಮಂದಣ್ಣ
ಟಾಲಿವುಡ್ ನ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಅಭಿನಯದ ಗೀತ ಗೋವಿಂದಂ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸುವ ಮೂಲಕ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ...

Published On :
ಟಾಲಿವುಡ್ ನ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಅಭಿನಯದ ಗೀತ ಗೋವಿಂದಂ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸುವ ಮೂಲಕ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಹೆಚ್ಚು ಸುದ್ದಿಯಾಗಿದ್ದರು.
ಇನ್ನು ಸ್ಯಾಂಡಲ್ವುಡ್ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಬಿರುಕು ಮೂಡಿದೆ. ಅವರ ನಿಶ್ಚಿತಾರ್ಥ ಮುರಿದು ಬೀಳಲಿದೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಈ ಎಲ್ಲಾ ವದಂತಿಗಳನ್ನು ತಳ್ಳಿ ಹಾಕಿರುವ ರಶ್ಮಿಕಾ ನಾನು ರಕ್ಷಿತ್ ಶೆಟ್ಟಿ ಚೆನ್ನಾಗಿದ್ದೇವೆ. ನಮ್ಮ ನಡುವೆ ಯಾವುದೇ ವೈಮನಸ್ಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ವದಂತಿಗಳ ಕುರಿತು ಪ್ರತಿಕ್ರಿಯಿಸಿರುವ ರಶ್ಮಿಕಾ ಮಂದಣ್ಣ ಅವರು, ನಾವು ಬೇರೆ ಬೇರೆಯಾಗುತ್ತಿದ್ದೇವೆ ಎಂಬ ವದಂತಿ ಕೇಳಿದ್ದ ರಕ್ಷಿತ್ ಗೆ ನಗು ತಡೆಯಲು ಆಗಲಿಲ್ಲ. ನಿಶ್ಚಿತಾರ್ಥಕ್ಕೂ ಮುಂಚೆ ನಮಗೆ ಜೊತೆಯಾಗಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಡೇಟಿಂಗ್ ಕೂಡ ಮಾಡಿರಲಿಲ್ಲ. ನಿಶ್ಚಿತಾರ್ಥದ ನಂತರ ನಾವು ಪ್ರೀತಿಯನ್ನು ತುಂಬಾ ಆನಂದಿಸುತ್ತಿದ್ದೇವೆ. ನಾವು ಮದುವೆ ಆಗೋದು ಪಕ್ಕಾ. ಆದರೆ ಅದು ಯಾವಾಗ ನಡೆಯುತ್ತೆ ಎಂಬುದು ಗೊತ್ತಿಲ್ಲ ಎಂದರು.
ಈ ಮೂಲಕ ರಶ್ಮಿಕಾ ಮಂದಣ್ಣ ತಮ್ಮ ವಿರುದ್ಧದ ವದಂತಿಗಳಿಗೆ ತೆರೆ ಎಳೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
tollywoodಟಾಲಿವುಡ್ರಶ್ಮಿಕಾ ಮಂದಣ್ಣವಿಜಯ್ ದೇವರಕೊಂಡಗೀತ ಗೋವಿಂದಂGeetha GovindamRashmika MandanaVijay Deverakonda
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


