ವಿಜಯ್-ರಶ್ಮಿಕಾ ಮಂದಣ್ಣ ಲಿಪ್ ಲಾಕ್ ದೃಶ್ಯಗಳು ಸೋರಿಕೆ, ವಿಡಿಯೋ ವೈರಲ್!
ಟಾಲಿವುಡ್ ನ ಬಹುನಿರೀಕ್ಷಿತ ಗೀತ ಗೋವಿಂದಂ ಚಿತ್ರ ಇದೇ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದ್ದು ಇನ್ನು ಚಿತ್ರ ಬಿಡುಗಡೆಗೂ ಮುನ್ನವೇ ಚಿತ್ರದ ಕೆಲ ದೃಶ್ಯಗಳು ಸೋರಿಕೆಯಾಗಿವೆ...

Published On :
ಟಾಲಿವುಡ್ ನ ಬಹುನಿರೀಕ್ಷಿತ ಗೀತ ಗೋವಿಂದಂ ಚಿತ್ರ ಇದೇ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದ್ದು ಇನ್ನು ಚಿತ್ರ ಬಿಡುಗಡೆಗೂ ಮುನ್ನವೇ ಚಿತ್ರದ ಕೆಲ ದೃಶ್ಯಗಳು ಸೋರಿಕೆಯಾಗಿವೆ.
ಚಿತ್ರದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣರ ಲಿಪ್ ಲಾಕ್ ದೃಶ್ಯಗಳು ಸೋರಿಕೆಯಾಗಿದ್ದು ಭಾರೀ ಸದ್ದು ಮಾಡಿವೆ. ಬಿಡುಗಡೆಗೂ ಮುನ್ನವೇ ಚಿತ್ರದಲ್ಲಿನ ಕೆಲ ಇಂಟಿಮೇಟ್ ಸೀನ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇನ್ನು ತಮ್ಮ ಅಭಿನಯದ ಗೀತ ಗೋವಿಂದಂ ಚಿತ್ರದ ದೃಶ್ಯಗಳು ಸೋರಿಕೆಯಾಗಿರುವುದಕ್ಕೆ ವಿಜಯ್ ದೇವರಕೊಂಡ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಟ್ವೀಟರ್ ಖಾತೆಯಲ್ಲಿ ತಮಗಾದ ನೋವನ್ನು ಹೊರ ಹಾಕಿದ್ದಾರೆ. ಚಿತ್ರದ ಸೀನ್ ಗಳು ಸೋರಿಕೆಯಾಗಿರುವುದು ತೀವ್ರ ನೋವು ತಂದಿದೆ. ಒಂದು ಕ್ಷಣ ಕೋಪ ಬರುತ್ತೆ, ಮತ್ತೊಮ್ಮೆ ಅಳು ಬರುತ್ತೆ ಎಂದು ಟ್ವೀಟ್ ಮಾಡಿದ್ದಾರೆ.
ಚಿತ್ರದ ಎಲ್ಲಾ ವಿಡಿಯೋಗಳನ್ನು ಡಿಲೀಟ್ ಮಾಡಿದ್ದರೂ ಕೂಡ ರಶ್ಮಿಕಾ ಹಾಗೂ ವಿಜಯ್ ಲಿಪ್ ಲಾಕ್ ವಿಡಿಯೋವೊಂದು ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ.
ಇನ್ನು ಈ ಸಂಬಂಧ ಪೊಲೀಸರು ರಾಜೇಶ್ ಎಂಬಾತನನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
tollywoodಟಾಲಿವುಡ್Rashmika Mandannaರಶ್ಮಿಕಾ ಮಂದಣ್ಣVijay Devarakondaವಿಜಯ್ ದೇವರಕೊಂಡGeeta Govindamಗೀತಾ ಗೋವಿಂದಂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


