ಹರಿಕೃಷ್ಣನ ನಾರಾಯಣಿಯಾಗಿ ಮಯೂರಿ ಕ್ಯಾತರಿ!
ಕಿರುತೆರೆಯಿಂದ ಕೃಷ್ಣ ಲೀಲಾ ಚಿತ್ರದ ಮೂಲಕ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿದ್ದ ಮಯೂರಿ ಕ್ಯಾತರಿ ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ...

Published On :
ಕಿರುತೆರೆಯಿಂದ ಕೃಷ್ಣ ಲೀಲಾ ಚಿತ್ರದ ಮೂಲಕ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿದ್ದ ಮಯೂರಿ ಕ್ಯಾತರಿ ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಸದ್ಯ ಮಯೂರಿ 8ಎಂಎಂ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಜತೆಗೆ ನಿರ್ದೇಶಕನಕ್ಕೆ ಪಾದಾರ್ಪಣೆ ಮಾಡುತ್ತಿರುವ ಡಾ. ಗಿರಿಧರ್ ನಿರ್ದೇಶನದ ಹರಿಕೃಷ್ಣ ನಾರಾಯಣಿ ಚಿತ್ರಕ್ಕೂ ಮಯೂರಿ ಸಹಿ ಹಾಕಿದ್ದಾರೆ.
ಇದೊಂದು ಲವ್ ಸ್ಟೋರಿ ಚಿತ್ರವಾಗಿದ್ದು ಚಿತ್ರದಲ್ಲಿ ನಾನು ನಾರಾಯಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದೊಂದು ರೋಮ್ಯಾಂಟಿಕ್ ಚಿತ್ರವಾಗಿದ್ದು ಹಲವು ಟ್ವಿಸ್ಟ್ ಗಳಿವೆ. ಚಿತ್ರದ ಕುರಿತಂತೆ ಇನ್ನು ಏನನ್ನು ಹೇಳುವುದಿಲ್ಲ ಎಂದು ಮಯೂರಿ ಹೇಳಿದ್ದಾರೆ.
ಆಗಸ್ಟ್ 24 ಮಹಾಲಕ್ಷ್ಮಿ ಹಬ್ಬದ ದಿನ ಹರಿಕೃಷ್ಣ ನಾರಾಯಣಿ ಚಿತ್ರದ ಮುಹೂರ್ತ ನೆರವೇರಲಿದೆ. ಇನ್ನು ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಸುಶೀಲ್ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಸದ್ಯ ಮಯೂರಿ 8ಎಂಎಂ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಇನ್ನು ರವಿವರ್ಮಾ ನಿರ್ದೇಶನದ ರುಸ್ತುಂ ಹಾಗೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


