ಕಾಸ್ಟಿಂಗ್ ಕೌಚ್ ನಿಂದಾಗಿ ಬಾಲಿವುಡ್ ನ ಬಿಗ್ ಆಫರ್ ತೊರೆದಿದ್ದೆ: ನಟಿ ಹರ್ಷಿಕಾ ಪೂಣಚ್ಛ
ತೆಲುಗು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಕಾಸ್ಟಿಂಗ್ ಕೌಚ್ ಅನುಭವ ನನಗೂ ಆಗಿತ್ತು, ಇದೇ ಕಾರಣಕ್ಕೆ ನಾನು ಬಾಲಿವುಡ್ ನ ದೊಡ್ಡ ದೊಡ್ಡ ಚಿತ್ರಗಳನ್ನು ಕೈ ಬಿಟ್ಟಿದ್ದೆ ಎಂದು ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಛ ಹೇಳಿದ್ದಾರೆ.

Published On :
ಬೆಂಗಳೂರು: ತೆಲುಗು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಕಾಸ್ಟಿಂಗ್ ಕೌಚ್ ಅನುಭವ ನನಗೂ ಆಗಿತ್ತು, ಇದೇ ಕಾರಣಕ್ಕೆ ನಾನು ಬಾಲಿವುಡ್ ನ ದೊಡ್ಡ ದೊಡ್ಡ ಚಿತ್ರಗಳನ್ನು ಕೈ ಬಿಟ್ಟಿದ್ದೆ ಎಂದು ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಛ ಹೇಳಿದ್ದಾರೆ.
ತಮ್ಮ ಅಭಿನಯದ ಚಿಟ್ಟೆ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಟಿ ಹರ್ಷಿಕಾ, ಬಾಲಿವುಡ್ ನಲ್ಲಿ ನಾನು ಎರಡು ದೊಡ್ಡ ಸಿನೆಮಾ ಮಾಡಬೇಕಿತ್ತು. ಆದರೆ ಕಾಸ್ಟಿಂಗ್ ಕೌಚ್ ಗಾಗಿ ಬೇಡಿಕೆ ಇಟ್ಟಾಗ ಅದನ್ನು ತೊರೆದಿದ್ದೆ ಎಂದು ಹೇಳಿದ್ದಾರೆ.
ಕನ್ನಡ, ಮಲಯಾಳಂ, ತೆಲುಗು ಚಿತ್ರರಂಗದಲ್ಲಿ ಇಂತಹ ಅನುಭವವಾಗಿರಲಿಲ್ಲ, ಆದರೆ ಬಾಲಿವುಡ್ ಪ್ರವೇಶಕ್ಕೆ ಅವಕಾಶ ಸಿಕ್ಕಾಗ ಇಂತಹ ಕೆಟ್ಟ ಅನುಭವಾಗಿತ್ತು. ಕಾಸ್ಟಿಂಗ್ ಕೌಚ್ ನಿಂದಾಗಿ ಎರಡು ಪ್ರಮುಖ ಬಾಲಿವುಡ್ ಚಿತ್ರಗಳನ್ನು ಕೈ ಬಿಟ್ಟಿದ್ದೆ. ಯಾರಾದರೂ ಈ ಬಗ್ಗೆ ಕೇಳಿದಾಗ ವಯಸ್ಸಿನ ಅಂತರದಿಂದಾಗಿ ಆ ಚಿತ್ರ ಕೈಬಿಟ್ಟಿದ್ದಾಗಿ ಸಬೂಬು ಹೇಳುತ್ತಿದ್ದೆ. ಈ ಬಗ್ಗೆ ಯಾರಾದರು ಪ್ರಶ್ನೆ ಕೇಳಿದಾಗ ಮುಜುಗರಕ್ಕೊಳಗಾಗುತ್ತಿದೆ ಎಂದು ಹರ್ಷಿಕಾ ಹೇಳಿದ್ದಾರೆ.
ಇದೇ ವಿಚಾರವಾಗಿ ತಮ್ಮ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಚುಟುಕಾಗಿ ಪ್ರತಿಕ್ರಿಯೆ ನೀಡಿರುವ ಹರ್ಷಿಕಾ ಯಾರಾದರೂ ನಿಮಗೆ ಇಷ್ಟವಿಲ್ಲದ್ದನ್ನು ಕೇಳಿದರೆ, ಇಲ್ಲ ಎಂದು ಹೇಳಿ. ರೆಬೆಲ್ ಆಗಿ ಜೀವನ ಸಾಗಿಸಿ ಎಂದು ಟ್ವೀಟ್ ಮಾಡಿದ್ದಾರೆ.
ತೆಲುಗು ಚಿತ್ರನಟಿ ಶ್ರೀರೆಡ್ಡಿ ಕಾಸ್ಟಿಂಗ್ ಕೌಚ್ ಕುರಿತಂತೆ ಚಿತ್ರರಂಗದ ಕಚೇರಿ ಎದುರು ಅರೆ ನಗ್ನ ಪ್ರತಿಭಟನೆ ನಡೆಸಿದ ಬಳಿಕ ದೇಶಾದ್ಯಂತ ಈ ಕಾಸ್ಟಿಂಗ್ ಕೌಚ್ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ನಿನ್ನೆಯಷ್ಟೇ ಕಾಂಗ್ರೆಸ್ ಮುಖಂಡರಾದ ರೇಣುಕಾ ಚೌದರಿ, ಚಿತ್ರರಂಗದಲ್ಲಿ ಅಷ್ಟೇ ಅಲ್ಲ ಸಂಸತ್ ನಲ್ಲೂ ಈ ದರಿದ್ರ ಸಂಪ್ರದಾಯವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruSandalwoodಸ್ಯಾಂಡಲ್ ವುಡ್Bollywoodಬಾಲಿವುಡ್Harshika PoonachaCasting couchಕಾಸ್ಟಿಂಗ್ ಕೌಚ್ಹರ್ಷಿಕಾ ಪೂಣಚ್ಛ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


