ಸಿನಿಮಾ ಸುದ್ದಿ

ತಾರಕ್ ಚಿತ್ರದಲ್ಲಿ ದರ್ಶನ್‍ಗೆ ದೇಸಿ, ವಿದೇಶಿ ಹುಡುಗಿಯರ ಸಾಥ್

ಮಿಲನ ಖ್ಯಾತಿಯ ನಿರ್ದೇಶಕ ಪ್ರಕಾಶ್ ಜಯರಾಂ ನಿರ್ದೇಶನದ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಶೃತಿ ಹರಿಹರನ್ ಹಾಗೂ ಸಾನ್ವಿ ಶ್ರೀವಾತ್ಸವ ಸಾಥ್ ನೀಡಿದ್ದಾರೆ...

ತಾರಕ್ ಚಿತ್ರದಲ್ಲಿ ದರ್ಶನ್‍ಗೆ ದೇಸಿ, ವಿದೇಶಿ ಹುಡುಗಿಯರ ಸಾಥ್
ಶೃತಿ ಹರಿಹರನ್
Published On :
ಮಿಲನ ಖ್ಯಾತಿಯ ನಿರ್ದೇಶಕ ಪ್ರಕಾಶ್ ಜಯರಾಂ ನಿರ್ದೇಶನದ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಶೃತಿ ಹರಿಹರನ್ ಹಾಗೂ ಸಾನ್ವಿ ಶ್ರೀವಾತ್ಸವ ಸಾಥ್ ನೀಡಿದ್ದಾರೆ. 
ಚಿತ್ರದಲ್ಲಿ ಸ್ನೇಹ(ಶೃತಿ ಹರಿಹರನ್) ಮೊದಲಿಗೆ ಮೊಮ್ಮೊಗಳ ಪಾತ್ರದಲ್ಲಿ ಕಾಣಿಸಿಕೊಂಡರೇ ನಂತರ ಎನ್ಆರ್ಐ ಮೀರಾ ಪಾತ್ರದಲ್ಲಿ ಕಾಣಿಸಲಿದ್ದಾರಂತೆ. ಸ್ನೇಹ ಮಾಡ್ರನ್ ಸೊಸೈಟಿಯ ಹುಡುಗಿಯಾಗಿದ್ದರು. ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿ ಬಗ್ಗೆ ಅಪಾರ ಒಲವಿರುತ್ತದೆ. ಮಧ್ಯಮ ವರ್ಗದ ಹುಡುಗಿಯಾಗಿದ್ದರು ಶಿಕ್ಷಿತಳಾಗಿ ಹಾಗೂ ಮಹತ್ವಕಾಂಕ್ಷಿಯಾಗಿದ್ದು ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡಲು ಆಶಿಸುತ್ತಾಳೆ. ಮನೆಯವರನ್ನು ಒಪ್ಪಿಸಿ ಕಂಪನಿಯೊಂದಕ್ಕೆ ಸೇರುತ್ತಾಳೆ ಹೀಗೆ ತಮ್ಮ ಪಾತ್ರದ ಬಗ್ಗೆ ಶೃತಿ ಹರಿಹರನ್ ಹೇಳಿದ್ದಾರೆ. 
ನನ್ನ ದೇಸಿ ಹುಡುಗಿಯ ಅಭಿನಯವನ್ನು ಕನ್ನಡಿಗರು ಪ್ರಶಂಸಿಸುತ್ತಾರೆ. ಚಿತ್ರದ ಶೂಟಿಂಗ್ ಗಾಗಿ ನಾನು ವಿದೇಶಕ್ಕೆ ಹೋದಾಗ ಅಲ್ಲಿ ನೆಲೆಸಿರುವ ಕನ್ನಡಿಗರು ಬಂದು ನಮ್ಮನ್ನು ಪ್ರೋತ್ಸಾಹಿಸಿದರು. ಇನ್ನು ತಾರಕ್ ಚಿತ್ರದಲ್ಲಿ ಎನ್ಐಆರ್ ಗಳ ನಿಜ ಜೀವನದ ಸತ್ಯ ದರ್ಶನವಾಗುತ್ತದೆ ಎಂದರು. 
ಇನ್ನು ದರ್ಶನ್ ಜತೆ ಶೃತಿ ಹರಿಹರನ್ ಇದೇ ಮೊದಲ ಬಾರಿಗೆ ಅಭಿನಯಿಸುತ್ತಿದ್ದಾರೆ. ದರ್ಶನ್ ಅಭಿನಯಿಸುವುದು ನಿಜಕ್ಕೂ ಖುಷಿಯ ಸಂಗತಿ. ಅವರ ಸಹ ಕಲಾವಿದರನ್ನು ತುಂಬಾ ಗೌರವಿಸುತ್ತಾರೆ. ಅವರೊಬ್ಬ ಸೂಪರ್ ಸ್ಟಾರ್ ಆಗಿದ್ದರು ಸೆಟ್ ನಲ್ಲಿ ನಟರಾಗಿ ಮಾತ್ರ ಕಾಣಿಸಿಕೊಳ್ಳುತ್ತಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.