ಸಿನಿಮಾ ಸುದ್ದಿ

ಗನ್ ನಿಂದ ಧ್ವನಿ ಅಡಗಿಸಿ ವಾದದಲ್ಲಿ ಗೆಲ್ಲುವುದು ಅತ್ಯಂತ ಕೆಟ್ಟ ಮಾರ್ಗ: ಗೌರಿ ಲಂಕೇಶ್ ಹತ್ಯೆಗೆ ಕಮಲ್ ಹಾಸನ್ ಖಂಡನೆ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಈ ನಡುವೆ ಹತ್ಯೆಗೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟ ಕಮಲ್ ಹಾಸನ್ ಅವರು ಖಂಡನೆ...

ಗನ್ ನಿಂದ ಧ್ವನಿ ಅಡಗಿಸಿ ವಾದದಲ್ಲಿ ಗೆಲ್ಲುವುದು ಅತ್ಯಂತ ಕೆಟ್ಟ ಮಾರ್ಗ: ಗೌರಿ ಲಂಕೇಶ್ ಹತ್ಯೆಗೆ ಕಮಲ್ ಹಾಸನ್ ಖಂಡನೆ
ನಟ ಕಮಲ್ ಹಾಸನ್
Published On :
ಚೆನ್ನೈ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಈ ನಡುವೆ ಹತ್ಯೆಗೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟ ಕಮಲ್ ಹಾಸನ್ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. 
ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಖಂಡನೆ ವ್ಯಕ್ತಪಡಿಸಿರುವ ಅವರು, ಗನ್ ಮೂಲಕ ಧ್ವನಿಯನ್ನು ಅಡಗಿಸಿ, ವಾದ (ಡಿಬೇಟ್)ದಲ್ಲಿ ಗೆಲ್ಲುವುದು ಅತ್ಯಂತ ಕೆಟ್ಟ ಮಾರ್ಗವಾಗಿದೆ. ಗೌರಿ ಲಂಕೇಶ್ ನಿಧನದಿಂದ ದುಃಖತಪ್ತರಾಗಿರುವ ಎಲ್ಲರಿಗೂ ನನ್ನ ಸಂತಾಪವಿದೆ ಎಂಟು ಟ್ವೀಟ್ ಮಾಡಿದ್ದಾರೆ.
ಸೆ.5 ರಂದು ಕೆಲಸ ಮುಗಿಸಿಕೊಂಡು ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ್ದ ಗೌರಿ ಲಂಕೇಶ್ ಅವರ ಮೇಲೆ ದುಷ್ಕರ್ಮಿಗಳ ತಂಡವೊಂದು ಏಕಾಏಕಿ ಗುಂಡಿನ ದಾಳಿ ನಡೆಸಿತ್ತು. ಮೂರು ಬುಲೆಟ್ ಗಳು ಗೌರಿಯವರ ದೇಹದೊಳಗೆ ಹೊಕ್ಕಿ ಸ್ಥಳದಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.