ಕಿರಿಕ್ ಪಾರ್ಟಿ ರಶ್ಮಿಕಾಗೆ ಟಾಲಿವುಡ್ ನಲ್ಲಿ ಹೆಚ್ಚಿದ ಡಿಮ್ಯಾಂಡ್
ಕಿರಿಕ್ ಪಾರ್ಟಿಯ ಸಾನ್ವಿ ಪಾತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲಿ ಈಗ ಬೆಡಿಕೆಯ ನಟಿಯಾಗಿದ್ದಾರೆ. ...

Published On :
ಬೆಂಗಳೂರು: ಕಿರಿಕ್ ಪಾರ್ಟಿಯ ಸಾನ್ವಿ ಪಾತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲಿ ಈಗ ಬೆಡಿಕೆಯ ನಟಿಯಾಗಿದ್ದಾರೆ.
ಸದ್ಯ ಪುನೀತ್ ರಾಜ್ ಕುಮಾರ್ ಅವರ ಅಂಜನೀಪುತ್ರ ಮತ್ತು ಗಣೇಶ್ ಅಭಿನಯದ ಚಮಕ್ ಸಿನಿಮಾಗಳ ಶೂಟಿಂಗ್ ನಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.
ತೆಲುಗು ಸಿನಿಮಾಗಳಿಗೂ ರಶ್ಮಿಕಾ ಬೇಡಿಕೆ ಹೆಚ್ಚಿದ್ದ, ನಾಗಶೌರ್ಯ ಮತ್ತು ರಾಮ್ ಅವರ ಪ್ರಾಜೆಕ್ಟ್ ಗಳಿಗೆ ಈಗಾಗಲೇ ರಶ್ಮಿಕಾ ಸಹಿ ಮಾಡಿದ್ದಾರೆ. ಈಗ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ಸಾಯ್ ದೇವರಕೊಂಡ ಜೊತೆಗೆ ಮೂರನೇ ಸಿನಿಮಾಗಾಗಿ ರಶ್ಮಿಕಾ ಸಹಿ ಮಾಡಿದ್ದಾರೆ.
ಪರಶುರಾಮ್ ನಿರ್ದೇಶನದ ಸಿನಿಮಾದಲ್ಲಿ ವಿಜಯ ದೇವರಕೊಂಡ ಅವರ ಜೊತೆ ನಟಿಸಲು ಖುಷಿಯಾಗುತ್ತಿದೆ. ನಿರ್ಮಾಪರ ಅಲ್ಲು ಅರವಿಂದ್ ಮತ್ತು ಬನ್ನಿ ವಾಸ್ ಅವರಿಗೆ ಧನ್ಯವಾದಗಳು ಎಂದು ರಶ್ಮಿಕಾ ಟ್ವೀಟ್ ಮಾಡಿದ್ದಾರೆ.
ಆದರೆ ಈ ಸಿನಿಮಾಗೆ ಲಾವಣ್ಯ ತ್ರಿಪಾಠಿ ಸಹಿ ಮಾಡಬೇಕಿತ್ತು, ಆದರೆ ಕಾರಣಾಂತರಗಳಿಂದ ಈ ಪ್ರಾಜೆಕ್ಟ್ ನಿಂದ ಅವರು ಹೊರ ನಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Kirik partyಕಿರಿಕ್ ಪಾರ್ಟಿತೆಲುಗು ಸಿನಿಮಾRashmika Mandannaರಶ್ಮಿಕಾ ಮಂದಣ್ಣTelugu CinemaVijay Sai Deverakondaವಿಜಯ್ ಸಾಯ್ ದೇವರಕೊಂಡ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


