ಸಿನಿಮಾ ಸುದ್ದಿ

ಮತ್ತೊಂದು ರಾಯಲ್ ಜರ್ನಿಗೆ ಸಿದ್ಧರಾಗಿ: ಅನೂಪ್ ಭಂಡಾರಿ

ನಿರ್ದೇಶಕ ಅನೂಪ್ ಭಂಡಾರಿ ರಾಜರಥ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದು ಚಿತ್ರ ಪ್ರಮೋಶನ್ ಗಾಗಿ ತಮ್ಮ ಟ್ವಿಟ್ಟರ್ ನಲ್ಲಿ ರಾಜರಥ ...

ಮತ್ತೊಂದು ರಾಯಲ್ ಜರ್ನಿಗೆ ಸಿದ್ಧರಾಗಿ: ಅನೂಪ್ ಭಂಡಾರಿ
ರಾಜರಥ ಸಿನಿಮಾ ಪೋಸ್ಟರ್
Published On :
ಬೆಂಗಳೂರು: ನಿರ್ದೇಶಕ ಅನೂಪ್ ಭಂಡಾರಿ ರಾಜರಥ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದು ಚಿತ್ರ ಪ್ರಮೋಶನ್ ಗಾಗಿ  ತಮ್ಮ ಟ್ವಿಟ್ಟರ್ ನಲ್ಲಿ  ರಾಜರಥ ಸಿನಿಮಾ ಫೋಟೋ ವನ್ನು ಟ್ವೀಟ್ ಮಾಡಿದ್ದಾರೆ.
ರಾಜರಥ ಸಿನಿಮಾದ ಮೊದಲ ಪೋಸ್ಟರ್ ಅಪ್ ಲೋಡ್ ಮಾಡಿ ಮತ್ತೊಂದು ರಾಯಲ್ ಜರ್ನಿಗಾಗಿ ಸಿದ್ದರಾಗಿ ಎಂದು ಪೋಸ್ಟ್ ಮಾಡಿದ್ದಾರೆ.
ಪೋಸ್ಟರ್ ನಲ್ಲಿ ನಿರೂಪ್ ಭಂಡಾರಿ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆವಂತಿಕಾ ಶೆಟ್ಟಿ ಗೌನ್ ಧರಿಸಿದ್ದು, ಹಳದಿ ಬಣ್ಣದ ಹೆಲ್ಮೆಟ್ ಹಾಕಿಕೊಂಡಿದ್ದು ಹಳದಿ ಬಣ್ಣದ ಕೊಡೆ ಹಿಡಿದುಕೊಂಡಿದ್ದಾರೆ. ರವಿಶಂಕರ್ ಒಂದು ಕೋಟ್ ಧರಿಸಿದ್ದು ನೋಡಗರ ಗಮನ ಕೇಂದ್ರೀಕರಿಸಿದ್ದಾರೆ.
ಈ ಒಂದು ಅದ್ಭುತ ಪೋಸ್ಟರ್ ತಯಾರು ಮಾಡಲು ಚಿತ್ರತಂಡ ಹೆಚ್ಚಿನ ನಿಗಾವಹಿಸಿರುವುದು ತಿಳಿದು ಬಂದಿದೆ, ಬಾಲಿವುಡ್ ನಲ್ಲಿ ಕ್ರಿಯೇಟಿವ್ ಪೋಸ್ಟರ್ ತಯಾರಿಗಾಗಿ ಬಳಸುವ ಹಸಲ್ ಬ್ಲೇಡ್ ಕ್ಯಾಮೆರಾವನ್ನು ಇದರಲ್ಲಿಯೂ ಬಳಸಿರುವುದಾಗಿ ಹೇಳಿದ್ದಾರೆ.
ನನ್ನ ದೃಷ್ಟಿಕೋನಕ್ಕೆ ಅನುಗುಣವಾಗಿ ಪೋಸ್ಟರ್ ಹೊರ ತರಲು ಮನೀಶ್ ಮತ್ತು ಕಾನಿ ಸ್ಟುಡಿಯೋ ತುಂಬಾ ಶ್ರಮ ವಹಿಸಿವೆ ಎಂದು ಅನೂಪ್ ತಿಳಿಸಿದ್ದಾರೆ.
ಸದ್ಯ ಅನೂಪ್ ರಾಜರಥ ಸಿನಿಮಾದ ಆಡಿಯೋ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರಾ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿದೆ. ಆರ್ಯ ಮತ್ತು ಶೃತಿ ಹರಿಹರನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.