'ಅಯೋಗ್ಯ'ನಿಗೆ ಹೊಸ ನಿರ್ಮಾಪಕ!
ನವ ನಿರ್ದೇಶಕ ಮಹೇಶ್ ಕುಮಾರ್ ನಿರ್ದೇಶನದ ಅಯೋಗ್ಯ ಚಿತ್ರಕ್ಕೆ ನಿರ್ಮಾಪಕರು ಬದಲಾಗಿದ್ದು ಇದೀಗ ಹೊಸ ನಿರ್ಮಾಪಕರೊಂದಿಗೆ ಚಿತ್ರ ಹೊಸ ಪ್ರಾರಂಭ ಪಡೆದಿದೆ...

Published On :
ನವ ನಿರ್ದೇಶಕ ಮಹೇಶ್ ಕುಮಾರ್ ನಿರ್ದೇಶನದ ಅಯೋಗ್ಯ ಚಿತ್ರಕ್ಕೆ ನಿರ್ಮಾಪಕರು ಬದಲಾಗಿದ್ದು ಇದೀಗ ಹೊಸ ನಿರ್ಮಾಪಕರೊಂದಿಗೆ ಚಿತ್ರ ಹೊಸ ಪ್ರಾರಂಭ ಪಡೆದಿದೆ.
ಇಂದು ಅಯೋಗ್ಯ ಚಿತ್ರದ ಮೂಹೂರ್ತ ನಡೆಯಲಿದ್ದು ಅಯೋಗ್ಯ ಚಿತ್ರವನ್ನು ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಮತ್ತು ಟಿಆರ್ ಚಂದ್ರಶೇಖರ್ ನಿರ್ಮಿಸುತ್ತಿದ್ದಾರೆ. ಚಂದ್ರಶೇಖರ್ ಸದ್ಯ ಚಮಕ್, ಜಾನ್ ಸೀನಾ, ಮ್ತತು ಬಿರ್ಬಲ್ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.
ಚಿತ್ರದಲ್ಲಿ ಸತೀಶ್ ನಿನಾಸಂ ಮ್ತತು ರಚಿತಾ ರಾಮ್ ನಟಿಸುತ್ತಿದ್ದು ಈ ಜೋಡಿ ಇದೇ ಮೊದಲ ಬಾರಿಗೆ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳುತ್ತಿದೆ. ಹಿರಿಯ ನಟಿ ಸರಿತಾ, ಚಿಕ್ಕಣ್ಣ, ರಂಗಾಯಣ ರಘು ಮತ್ತು ರವಿಶಂಕರ್ ಸೇರಿದಂತೆ ಇನ್ನು ಹಲವು ಕಲಾವಿದರು ಅಭಿನಯಿಸಲಿದ್ದಾರೆ.
ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದು ಯೋಗರಾಜ್ ಭಟ್ ಸಾಹಿತ್ಯ ಬರೆಯಲಿದ್ದಾರೆ. ಡಿಸೆಂಬರ್ 1ರಿಂದು ಚಿತ್ರದ ಚಿತ್ರೀಕರಣ ಮಂಡ್ಯದಲ್ಲಿ ಆರಂಭಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
SandalwoodRachita Ramರಚಿತಾ ರಾಮ್ಸ್ಯಾಂಡಲ್ವುಡ್Sathish NinasamAyogyaಅಯೋಗ್ಯಸತೀಶ್ ನಿನಾಸಂMahesh Kumarಮಹೇಶ್ ಕುಮಾರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


