ಬಿಕಿನಿ ತೊಡುವುದೇ ಗ್ಲಾಮರ್ ಅಲ್ಲ: ರಚಿತಾ ರಾಮ್
ಜಾನಿ ಜಾನಿ ಎಸ್ ಪಪ್ಪಾ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಚಿತ್ರದಲ್ಲಿ ಎನ್ ಆರ್ ಐ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Published On :
ಜಾನಿ ಜಾನಿ ಎಸ್ ಪಪ್ಪಾ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಚಿತ್ರದಲ್ಲಿ ಎನ್ ಆರ್ ಐ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಗ್ಲಾಮರಸ್ ಪಾತ್ರದಲ್ಲಿ ಅಭಿನಯಿಸುತ್ತಿರುವ ರಚಿತಾ ರಾಮ್ ಇಂಡೋ-ವೆಸ್ಟ್ರನ್ ಶೈಲಿಯಲ್ಲಿ ವಿನ್ಯಾಸಗೊಳಿಸಿರುವ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುವ ಉದ್ದೇಶ ಹೊಂದಿರುವ ರಚಿತಾ ರಾಮ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದು, ತಾವು ನಿರ್ವಹಿಸುತ್ತಿರುವ ಎನ್ ಆರ್ ಐ ಪಾತ್ರಕ್ಕೆ ಹೆಚ್ಚಿನ ಪಾಶ್ಚಾತ್ಯ ಲುಕ್ ಅಗತ್ಯವಿದೆ. ನನ್ನ ಡೈಲಾಗ್ ಗಳೂ ಸಹ ಬಹುತೇಕ ಕಂಗ್ಲಿಷ್ ನಲ್ಲಿಯೇ ಇರುತ್ತವೆ. ಈ ಬಗ್ಗೆ ಚಿತ್ರ ತಂಡ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಗ್ಲಾಮರ್ ಬಗ್ಗೆಯೂ ಮಾತನಾಡಿರುವ ಅವರು, ತಮ್ಮನ್ನು ಗ್ಲಾಮರ್ ಕ್ವೀನ್ ಎಂದು ಕರೆಯುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಬಿಕಿನಿ ತೊಡುವುದರಿಂದಲಷ್ಟೇ ಗ್ಲಾಮರ್ ಎನ್ನುವುದನ್ನು ನಿರಾಕರಿಸಿರುವ ರಚಿತಾ ರಾಮ್, ಬಿಕಿನಿ ತೊಟ್ಟು ಎಕ್ಸ್ ಪೋಸ್ ಮಾಡುವುದೇ ಗ್ಲಾಮರ್ ನ ವ್ಯಾಖ್ಯಾನ ಎಂಬುದನ್ನು ಒಪ್ಪುವುದಿಲ್ಲ ಎಂದಿದ್ದಾರೆ. ತಮ್ಮ ಪ್ರಕಾರ ಗ್ಲಾಮರ್ ಎಂದರೆ ಸೌಂದರ್ಯ ಹಾಗೂ ತಮಗೆ ಸಮಾಧಾನಕರವಾಗಿರುವುದು ಎಂದು ಹೇಳಿದ್ದು ಬಿಕಿನಿ ತೊಡದೆಯೂ ಗ್ಲಾಮರಸ್ ಆಗಿ ಕಾಣಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


