ಸಿನಿಮಾ ಸುದ್ದಿ

ಮಣಿರತ್ನಂ ಸಿನಿಮಾದಲ್ಲಿ ರಾಮ್ ಚರಣ್, ಐಶ್ವರ್ಯಾ ರೈ ಜೋಡಿಯಾಗಿ ನಟಿಸುತ್ತಿಲ್ಲ..!

ಮಣಿರತ್ನಂ ಅವರ ಮುಂದಿನ ಚಿತ್ರದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಹಾಗೂ ಟಾಲಿವುಡ್ ಸ್ಟಾರ್ ರಾಮ್ ಚರಣ್ ತೇಜ ಒಟ್ಟಿಗೆ ನಟಿಸುತ್ತಿಲ್ಲ ಎಂದು ಅವರ ಮಾಧ್ಯಮ ವಕ್ತಾರೆ ಪ್ರವಲ್ಲಿಕಾ ಅಂಜುರಿ ತಿಳಿಸಿದ್ದಾರೆ.

ಮಣಿರತ್ನಂ ಸಿನಿಮಾದಲ್ಲಿ ರಾಮ್ ಚರಣ್, ಐಶ್ವರ್ಯಾ ರೈ ಜೋಡಿಯಾಗಿ ನಟಿಸುತ್ತಿಲ್ಲ..!
ಸಂಗ್ರಹ ಚಿತ್ರ
Published On :

ಹೈದರಾಬಾದ್: ಮಣಿರತ್ನಂ ಅವರ ಮುಂದಿನ ಚಿತ್ರದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಹಾಗೂ ಟಾಲಿವುಡ್ ಸ್ಟಾರ್ ರಾಮ್ ಚರಣ್ ತೇಜ ಒಟ್ಟಿಗೆ ನಟಿಸುತ್ತಿಲ್ಲ ಎಂದು ಅವರ ಮಾಧ್ಯಮ ವಕ್ತಾರೆ ಪ್ರವಲ್ಲಿಕಾ ಅಂಜುರಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ರಾಷ್ಟ್ರೀಯ ಮತ್ತು ಕೆಲ ತೆಲುಗು ಮಾಧ್ಯಮಗಳು ಮಣಿರತ್ನಂ ಅವರ ಮುಂದಿನ ಚಿತ್ರದಲ್ಲಿ ರಾಮ್ ಚರಣ್ ತೇಜ ಹಾಗೂ ನಟಿ ಐಶ್ವರ್ಯಾ ರೈ ಅವರು ಒಟ್ಟಿಗೆ ನಟಿಸುತ್ತಿದ್ದಾರೆ ಎಂದು ಸುದ್ದಿ ಮಾಡಿದ್ದವು. ಇದು  ವ್ಯಾಪಕವಾಗಿ ವೈರಲ್ ಆಗುತ್ತಿದ್ದಂತೆಯೇ ಈ ಬಗ್ಗೆ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ ಅವರ ಮಾಧ್ಯಮ ವಕ್ತಾರೆ ಪ್ರವಲ್ಲಿಕಾ ಅಂಜುರಿ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು  ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದೆ ಮಣಿರತ್ನಂ ಅವರ ನೂತನ ಚಿತ್ರಕ್ಕೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಊಹಾಪೋಹದ ನಡುವೆಯೇ ಮಣಿರತ್ನಂ ಹಾಗೂ ರಾಮ್ ಚರಣ್ ತೇಜ ಅವರ ಭೇಟಿ ಕುತೂಹಲ  ಕೆರಳಿಸಿತ್ತು. ಇತ್ತೀಚೆಗೆ ಚೆನ್ನೈಗೆ ಆಗಮಿಸಿದ್ದ ರಾಮ್ ನಿರ್ದೇಶಕ ಮಣಿರತ್ನಂ ಅವರನ್ನು ಭೇಟಿ ಮಾಡಿದ್ದರು. ಇದೇ ಸುದ್ದಿಯನ್ನು ಹಿನ್ನಲೆಯಾಗಿಸಿಕೊಂಡ ಕೆಲ ಮಾಧ್ಯಮಗಳು ರಾಮ್ ಚರಣ್ ಮಣಿರತ್ನಂ ಅವರ ಮುಂದಿನ ಚಿತ್ರದಲ್ಲಿ  ನಟಿಸಲಿದ್ದಾರೆ ಎಂದು ಸುದ್ದಿ ಮಾಡಿದ್ದವು.

 ಇನ್ನು ಮಣಿರತ್ನಂ ಅವರ ಚಿತ್ರಕ್ಕೆ ಐಶ್ವರ್ಯಾ ರೈ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಐಶ್ ಹಾಗೂ ರಾಮ್ ಒಟ್ಟಿಗೆ ನಟಿಸಲಿದ್ದಾರೆ ಎಂದು ಸುದ್ದಿ ಬಿತ್ತರಿಸಲಾಗಿತ್ತು. ಅಲ್ಲದೆ ಮಣಿರತ್ನಂ ಅವರ ಈ ಚಿತ್ರ  ಈ ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಿದ್ಧವಾಗುತ್ತಿದೆ ಎಂಬ ಮಾತುಗಳು ಈ ಊಹಾಪೋಹಕ್ಕೆ ಪುಷ್ಠಿ ನೀಡಿದ್ದವು. ಇದೀಗ ಈ ಎಲ್ಲ ಊಹಾಪೋಹಗಳಿಗೆ ರಾಮ್ ಚರಣ್ ಅವರ ಮಾಧ್ಯಮ ವಕ್ತಾರೆ ಪ್ರವಲ್ಲಿಕಾ  ಅಂಜುರಿ ತೆರೆ ಎಳೆದಿದ್ದು, ಇದೆಲ್ಲಾ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.