ಲಾರ್ಡ್ಸ್ ನಲ್ಲಿ ಕನ್ನಡದ ಲಾರ್ಡ್: ಕಾರ್ಪೊರೇಟ್ ಕ್ರಿಕೆಟ್ ಲೀಗ್ "ಕಿಚ್ಚಾ ಸುದೀಪ್" ತಂಡದ ಕೈವಶ!
ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆದ ಕಾರ್ಪೊರೇಟ್ ಕ್ರಿಕೆಟ್ ಲೀಗ್ ಸರಣಿಯಲ್ಲಿ ಕಿಚ್ಚಾ ಸುದೀಪ್ ನೇತೃತ್ವದ ವಿಷನೇರ್ ತಂಡ ಸರಣಿ ಗೆಲುವು ಸಾಧಿಸಿದೆ.

ಲಾರ್ಡ್ಸ್: ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆದ ಕಾರ್ಪೊರೇಟ್ ಕ್ರಿಕೆಟ್ ಲೀಗ್ ಸರಣಿಯಲ್ಲಿ ಕಿಚ್ಚಾ ಸುದೀಪ್ ನೇತೃತ್ವದ ವಿಷನೇರ್ ತಂಡ ಸರಣಿ ಗೆಲುವು ಸಾಧಿಸಿದೆ.
ಇಂಗ್ಲೆಂಡ್ ನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಕಾರ್ಪೊರೇಟ್ ಕ್ರಿಕೆಟ್ ಲೀಗ್ ಸರಣಿಯನ್ನು ಕಿಚ್ಚಾ ಸುದೀಪ್ ನೇತೃತ್ವದ ವಿಷನೇರ್ ತಂಡ ಕೈವಶ ಮಾಡಿಕೊಂಡಿದ್ದು, ಲೀಗ್ ನಲ್ಲಿ ನಡೆದ ಎಲ್ಲ ಮೂರು ಪಂದ್ಯಗಳಲ್ಲೂ ಗೆದ್ದು ಅಜೇಯವಾಗಿಯೇ ಸೆಮಿಫೈನಲ್ ಗೆ ನಡೆದಿತ್ತು. ಬಳಿಕ ಸೆಮಿಫೈನಲ್ ನಲ್ಲೂ ಜಯ ಭೇರಿ ಭಾರಿಸಿದ ಸುದೀಪ್ ತಂಡ ಫೈನಲ್ ನಲ್ಲಿ ಬಲಿಷ್ಟ ಡಿಲಾಟ್ಟೆ ತಂಡವನ್ನು ಮಣಿಸಿ ಕಾರ್ಪೊರೇಟ್ ಕ್ರಿಕೆಟ್ ಲೀಗ್ ಟ್ರೋಫಿ ಎತ್ತಿ ಹಿಡಿದಿದೆ. ಸುದೀಪ್ ರೊಂದಿಗೆ ಅವರ ನೆಚ್ಚಿನ ಸಿಸಿಎಲ್ ಕ್ರಿಕೆಟ್ ಆಟಗಾರರಾದ ನಟ ಸಚಿನ್ ಜೋಷಿ, ರಾಜೀವ್, ಧೃವ, ಪ್ರಿನ್ಸ್, ಚರಣ್ ಹಾಗೂ ಮದನ್ ಮೋಹನ್ ಇದ್ದರು.
ಮತ್ತೊಂದು ಪ್ರಮುಖ ಅಂಶವೆಂದರೆ ಅಂತಾರಾಷ್ಟ್ರೀಯ ಕ್ರಿಕೆಟಿಗ ಒವೈಸ್ ಶಾ ಕೂಡ ಸುದೀಪ್ ತಂಡದಲ್ಲಿದ್ದರು. ಹೀಗಾಗಿ ಉತ್ತಮ ತಂಡವನ್ನು ಹೊಂದಿದ್ದ ಸುದೀಪ್ ಸರಣಿ ಜಯ ಸಾಧಿಸಿದರು. ಸುದೀಪ್ ತಂಡ ವೃತ್ತಿಪರ ಕ್ರಿಕೆಟಿಗರಾದ ಮಾರ್ಕ್ ರಾಮ್ ಪ್ರಕಾಶ್ ಮತ್ತು ಅಲೆಕ್ಸ್ ಟ್ಯುಡೋರ್ ರಂತಹ ಘಟಾನುಘಟಿ ಕ್ರಿಕೆಟಿಗರ ವಿರುದ್ಧ ಆಡಿ ಜಯಿಸಿರುವುದು ನಿಜಕ್ಕೂ ಶ್ಲಾಘನೀಯ. ಈ ಮೂಲಕ ಕನ್ನಡದ ನಟನೊಬ್ಬ ಅಪರೂಪದ ಸಾಧನೆ ಮಾಡಿದಂತಾಗಿದೆ.
ಯಾವುದೇ ಕ್ರಿಕೆಟಿಗನೊಬ್ಬ ಒಂದೇ ಒಂದು ಸಲ ಆಡಬೇಕೆಂದು ಆಸೆ ಪಡುವ ಮತ್ತು ಕ್ರಿಕೆಟ್ ಕಾಶಿ ಎಂದೇ ಖ್ಯಾತಿ ಪಡೆದಿರುವ ಲಾರ್ಡ್ಸ್ ಮೈದಾನದಲ್ಲಿ ಮೂರು ಅರ್ಹತಾ ಪಂದ್ಯಗಳನ್ನಾಡಿದ ಸುದೀಪ್ ತಂಡ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ತಲುಪಿತು. ನಂತರವೂ ಗೆಲುವಿನ ಓಟ ಮುಂದುವರಿಸಿದ ತಂಡ ಫೈನಲ್‌ನಲ್ಲಿ ಡೆಲ್ಲಾಯ್‌್ಟತಂಡವನ್ನು ಸೋಲಿಸಿ ಕಪ್ ಗೆದ್ದುಕೊಂಡಿತು. ಇದುವರೆಗೆ ಯಾವ ಕನ್ನಡದ ನಟನಿಗೂ ಸಿಗದ ಅಪರೂಪದ ಅವಕಾಶ ಸುದೀಪ್‌ಗೆ ಸಿಕ್ಕಿತ್ತು. ಆ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಸುದೀಪ್ ಪಂದ್ಯ ಗೆದ್ದು ಕನ್ನಡಿಗರು ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ಲಾರ್ಡ್ಸ್ ನಲ್ಲಿ ಕಾರ್ಪೊರೇಟ್ ಕ್ರಿಕೆಟ್ ಲೀಗ್ ನಡೆಯುತ್ತಾ ಬಂದಿದ್ದು, ಈ ಸಲದ ಪಂದ್ಯಾಟದಲ್ಲಿ ಒಂದು ತಂಡವನ್ನು ಮುನ್ನಡೆಸಲು ಖ್ಯಾತ ನಟ ಸುದೀಪ್ ಅವರಿಗೆ ಆಹ್ವಾನ ಬಂದಿತ್ತು. ಅದನ್ನೊಪ್ಪಿಕೊಂಡ ಸುದೀಪ್ ಲಾರ್ಡ್ಸ್ ಗೆ ತೆರಳಿದ್ದರು. ಈ ಸಂದರ್ಭದ ಫೋಟೋಗಳನ್ನು ಸುದೀಪ್ ಟ್ವೀಟರಿನಲ್ಲಿ ಅಪ್‌ಲೋಡ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


