೩೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಮಾಸ್ತಿ ಗುಡಿ' ಬಿಡುಗಡೆ
ದುನಿಯಾ ವಿಜಯ್ ನಟಿಸಿರುವ 'ಮಾಸ್ತಿ ಗುಡಿ' ಈ ವಾರ ಅದ್ದೂರಿ ಬಿಡುಗಡೆಗೆ ಸಿದ್ಧವಾಗಿದೆ. ಜಾಕ್ ಮಂಜು ವಿತರಿಸುತ್ತಿರುವ ಈ ಸಿನೆಮಾ ಕರ್ನಾಟಕದಾದ್ಯಂತ ೩೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ

Published On :
ಬೆಂಗಳೂರು: ದುನಿಯಾ ವಿಜಯ್ ನಟಿಸಿರುವ 'ಮಾಸ್ತಿ ಗುಡಿ' ಈ ವಾರ ಅದ್ದೂರಿ ಬಿಡುಗಡೆಗೆ ಸಿದ್ಧವಾಗಿದೆ. ಜಾಕ್ ಮಂಜು ವಿತರಿಸುತ್ತಿರುವ ಈ ಸಿನೆಮಾ ಕರ್ನಾಟಕದಾದ್ಯಂತ ೩೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲದೆ ಚೆನ್ನೈ, ಮುಂಬೈ, ಹೈದರಾಬಾದ್ ಮತ್ತು ಗುರಗಾಂವ್ ನಗರಗಳಲ್ಲಿಯೂ ಸಿನೆಮಾ ಬಿಡುಗಡೆಯಾಗುತ್ತಿರುವುದು ವಿಶೇಷ.
ನಾಗಶೇಖರ್ ನಿರ್ದೇಶನದ ಈ ಸಿನೆಮಾಗೆ ಸಾಧು ಕೋಕಿಲ ಸಂಗೀತ ನೀಡಿದ್ದು, ಹಾಡುಗಳು ಈಗಾಗಲೇ ಅಭಿಮಾನಿಗಳ ನಡುವೆ ಕುತೂಹಲ ಮೂಡಿಸಿವೆ. ಹಾಗೆಯೇ ಸಿನೆಮಾದ ಗ್ರಾಫಿಕ್ಸ್ ಕೂಡ ಅಪಾರ ಕಾತರಕ್ಕೆ ಕಾರಣವಾಗಿದ್ದು, ಸಿನೆಮಾ ಹುಲಿ ಸಂರಕ್ಷಣೆ ಬಗ್ಗೆ ಕೂಡ ಚರ್ಚಿಸಲಿದೆ ಎನ್ನಲಾಗಿದೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ ಕೂಡ ಅಭಿಮಾನಿಗಳಿಗೆ ಆಸಕ್ತಿ ಕೆರಳಿಸಿದೆ.
ಸುಂದರ್ ಪಿ ಗೌಡ್ರು ನಿರ್ಮಿಸಿರುವ ಈ ಸಿನೆಮಾದಲ್ಲಿ ಅಮೂಲ್ಯ ಮತ್ತು ಕೃತಿ ಕರಬಂಧ ನಾಯಕ ನಟಿಯರು. ಸುಹಾಸಿನಿ ಮಣಿರತ್ನಂ, ರಂಗಾಯಣ ರಘು ಮಾತು ರವಿಶಂಕರ್ ಗೌಡ ಕೂಡ ತಾರಾಗಣದ ಭಾಗವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


